ಹಲವು ವರ್ಷಗಳ ನಂತರ ಸಹೋದರನ ಜೊತೆ ಸಂಕ್ರಾಂತಿ ಆಚರಿಸಿದ ದರ್ಶನ್; ಫೋಟೋ ವೈರಲ್

ಹಲವು ವರ್ಷಗಳ ನಂತರ ಒಂದಾಗಿ ಕಾಣಿಸಿಕೊಂಡ ತೂಗುದೀಪಾ ಬ್ರದರ್ಸ್... ಅದ್ಧೂರಿಯಾಗಿ ನಡೆಯಿತ್ತು ಮಕರ ಸಂಕ್ರಾಂತಿ ಆಚರಣೆ..... 

ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ ಮತ್ತು ಸಹೋದರ ದಿನಾಕರ್ ತೂಗುದೀಪ ಹಲವು ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅದು ವರ್ಷ ಮೊದಲ ಹಬ್ಬ ಆಚರಿಸಲು.

ಪ್ರತಿ ವರ್ಷ ನಟ ದರ್ಶನ್ ತಮ್ಮ ಮೈಸೂರಿನ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಈ ಸಲ ತಮ್ಮ ಸಹೋದರನನ್ನು ಸೇರಿಸಿಕೊಂಡಿದ್ದಾರೆ. 


'ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ' ಎಂದು ದರ್ಶನ್ ಬರೆದುಕೊಂಡಿದ್ದಾರೆ. 

 ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಜೈಲು ಸೇರಿದ ದರ್ಶನ್‌ ಸಹಾಯಕ್ಕೆ ಬಂದವರು ಕುಟುಂಬಸ್ಥರು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಜಾಮೀನು ಹೋರಾಟದಲ್ಲಿ ಜೊತೆ ನಿಂತು ಸಾಥ್ ಕೊಟ್ಟವರು ದಿನಾಕರ್. 

ಸಣ್ಣ ವಿಚಾರಕ್ಕೆ ಸಹೋದರರ ನಡುವೆ ಮನಸ್ಥಾಪವಾಗಿತ್ತು. ಒಬ್ಬರನ್ನೊಬ್ಬರು ಮಾತನಾಡಿಸುತ್ತಿರಲಿಲ್ಲ ಭೇಟಿ ಮಾಡುತ್ತಿರಲಿಲ್ಲ ಆದರೆ ಈ ಘಟನೆಯಿಂದ ದರ್ಶನ್‌ಗೆ ಫ್ಯಾಮಿಲಿ ಪ್ರಾಮುಖ್ಯತೆ ತಿಳಿದು ಬಂದಿದೆ. 

ದರ್ಶನ್ ಸಾಕಿರುವ ದನಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸಿ ಸಂಭ್ರಮಿಸುತ್ತಾರೆ. ದಿನಾಕರ್ ಪತ್ನಿ ಮತ್ತು ಮಕ್ಕಳು ಕೂಡ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಈ ಫ್ಯಾಮಿಲಿ ಇಷ್ಟೇ ಖುಷಿಯಾಗಿ ಇರಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

Latest Videos

click me!