ಉಂಗುರದ ನಂಟಿಗೆ 8 ವರ್ಷ: ನೂರು ಜನ್ಮದಲ್ಲೂ ನೀನೇ ನನ್ನ ಇನಿಯ ಎಂದ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ!

First Published | Aug 12, 2024, 9:50 PM IST

ಸ್ಯಾಂಡಲ್‌ವುಡ್‌ನ ದಿ ಬೆಸ್ಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್‌ಗೆ ಇಂದು ಎಂಗೇಜ್‌ಮೆಂಟ್ ಸಂಭ್ರಮ. ಈ ನಡುವೆ ಪತಿ ಯಶ್ ಬಗ್ಗೆ ರಾಧಿಕಾ ವಿಶೇಷ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 

ಇಂದಿಗೆ ಸರಿಯಾಗಿ 8 ವರ್ಷಗಳ ಹಿಂದೆ ಯಶ್‌ ಹಾಗೂ ರಾಧಿಕಾ ಪಂಡಿತ್ ಎಂಗೇಜ್‌ಮೆಂಟ್‌ ನಡೆದಿತ್ತು. ಇದೀಗ ತಮ್ಮ 8ನೇ ಎಂಗೇಜ್‌ಮೆಂಟ್‌ ಆನಿವರ್ಸರಿ ಸಂಭ್ರಮದಲ್ಲಿರುವ ರಾಧಿಕಾ ಎಂಗೇಜ್‌ಮೆಂಟ್‌ ಆನಿವರ್ಸರಿ ಪ್ರಯುಕ್ತ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನೂರು ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಯಶ್ ಕುರಿತು ರಾಧಿಕಾ ವಿಶೇಷ ಲೈನ್ ಸಹ ಬರೆದುಕೊಂಡಿದ್ದಾರೆ. 8 ವರ್ಷಗಳ ಹಿಂದೆ ಈ ದಿನ ನಾವು ನಿಶ್ಚಿತಾರ್ಥ ಮಾಡಿಕೊಂಡಾಗ ನಾನು 100 ಜನ್ಮದಲ್ಲೂ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ರಾಧಿಕಾ ಕ್ಯಾಪ್ಷನ್ ಕೊಟ್ಟಿದ್ದಾರೆ. 

Tap to resize

ರಾಧಿಕಾ  ಪೋಸ್ಟ್‌ಗೆ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅಕ್ಕ ಅಣ್ಣ ಎಂಗೇಜ್ಮೆಂಟ್ ಶುಭಾಶಯಗಳು, ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್, ಜೋಡಿ ಅಂದರೆ ಹೀಗಿರಬೇಕು, ಏಳೇಳು ಜನ್ಮಕು ನಿಮ್ಮ ಈ ಸಂಬಂಧವು ಹೀಗೇ ಸಂತೋಷದಿಂದ ತುಂಬಿರಲಿ ಎಂದು ಕಮೆಂಟ್ ಮಾಡಿದ್ದಾರೆ.

ಯಶ್- ರಾಧಿಕಾ ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಗೋವಾದಲ್ಲಿ ನಿಶ್ಚಿತಾರ್ಥ, ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮದುವೆ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಆರತಕ್ಷತೆ ಅಂತೆಲ್ಲಾ ಬಹಳ ಅದ್ಧೂರಿಯಾಗಿ ಮದುವೆಯಾಗಿದ್ದರು.
 

ರಾಧಿಕಾ-ಯಶ್ ದಂಪತಿಗೆ ಆಯ್ರಾ ಹಾಗೂ ಯಥರ್ವ್ ಮುದ್ದಾದ ಮಕ್ಕಳಿದ್ದಾರೆ. ಅಲ್ಲದೇ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾದ ರಾಧಿಕಾ ಪಂಡಿತ್ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು.

ನಂದಗೋಕುಲ ಧಾರವಾಹಿ ಮೂಲಕ ಚಿತ್ರರಂಗ ಲೋಕಕ್ಕೆ ಕಾಲಿಟ್ಟ ರಾಧಿಕಾ ಪಂಡಿತ್ ಉತ್ತಮ ಕಥೆ ಸಿಕ್ಕರೆ ಮತ್ತೆ ಖಂಡಿತಾ ನಟಿಸುತ್ತೇನೆ ಎಂದು ಈ ಹಿಂದೆ ತಿಳಿಸಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಸಖತ್ ಆ್ಯಕ್ಟಿವ್ ಆಗಿದ್ದಾರೆ.

Latest Videos

click me!