ಫ್ಯಾಮಿಲಿ ಜೊತೆ ವೆಕೇಶನ್ ಮೂಡಲ್ಲಿ ರಿಷಬ್… ‘ಕಾಂತಾರಾ 3’ಕ್ಕೆ ಲೊಕೇಶನ್ ಹುಡುಕಲು ಹೊರಟ್ರಾ ಶೆಟ್ರು?

Published : Aug 08, 2026, 12:18 PM IST

Rishab Shetty Family Photos: ಕನ್ನಡದ ಜನಪ್ರಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ, ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಪ್ರಕೃತಿಯ ನಡುವೆ ಫ್ಯಾಮಿಲಿ ಜೊತೆ ಕಳೆದು ಹೋಗಿದ್ದಾರೆ ಡಿವೈನ್ ಸ್ಟಾರ್. ಇಲ್ಲಿದೆ ಸುಂದರ ಫೋಟೊಗಳು.

PREV
17
ವೆಕೇಶನ್ ಮೂಡಲ್ಲಿ ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಕೊಂಚ ಬ್ರೇಕ್ ಕೊಟ್ಟು, ಪತ್ನಿ ಪ್ರಗತಿ ಶೆಟ್ಟಿ ಹಾಗೂ ಮಕ್ಕಳಾದ ರಾಧ್ಯಾ ಮತ್ತು ರಣ್ವಿತ್ ಜೊತೆ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ.

27
ಪ್ರಕೃತಿ ಮಧ್ಯೆ ರಿಷಬ್ ಫ್ಯಾಮಿಲಿ

ಪ್ರಗತಿ ಶೆಟ್ಟಿ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿದ್ದು, ಪ್ರಕೃತಿಯ ಮಧ್ಯೆ ಕುಟುಂಬದ ಜೊತೆ ಡಿವೈನ್ ಸ್ಟಾರ್ ಕಳೆದು ಹೋಗಿದ್ದಾರೆ.

37
ಬ್ಯುಸಿಯಾಗಿದ್ದರೂ ಫ್ಯಾಮಿಲಿಗೆ ಸಮಯ

ರಿಷಬ್ ಶೆಟ್ಟಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ ಸಹ, ತಮ್ಮ ಫ್ಯಾಮಿಲಿಗೆ ಸಮಯ ಕೊಡಲು ಮರೆಯೋದಿಲ್ಲ. ಹಾಗಾಗಿ ತಮ್ಮ ಕೆಲಸ ನಡುವೆ ಪತ್ನಿ ಹಾಗೂ ಮಕ್ಕಳ ಜೊತೆ ರಜೆ ಎಂಜಾಯ್ ಮಾಡುತ್ತಿದ್ದಾರೆ.

47
ಕಾಂತಾರ 3ಕ್ಕೆ ಲೊಕೇಶನ್ ಹುಡುಕಲು ಹೊರಟ್ರ?

ಅಭಿಮಾನಿಗಳು ಫೋಟೊ ನೋಡಿ ಖುಷಿಪಟ್ಟಿದ್ದು, ಕೆಲವರು ಸರ್ ನೀವು ಕಾಂತಾರ 3ಕ್ಕೆ ಲೊಕೇಶನ್ ಹುಡುಕಿಕೊಂಡು, ಮತ್ತೆಲ್ಲೊ ಪ್ರಕೃತಿ ನಡುವೆ ಕಳೆದು ಹೋಗಿದ್ದೀರಾ ಎಂದು ಕೇಳಿದ್ದಾರೆ.

57
ದೇಶದ ಮೂಲೆ ಮೂಲೆಯಿಂದ ಅಭಿಮಾನಿಗಳ ಪ್ರೀತಿ

ಕಾಂತಾರಾ ಸಿನಿಮಾ ಕನ್ನಡ ನೆಲದಲ್ಲಿ ಮಾತ್ರವಲ್ಲ, ದೇಶದ ಉದ್ದಗಲಕ್ಕೂ ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಕಾರಣ, ರಿಷಬ್ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ಮೂಲೆ ಮೂಲೆಯಿಂದ ಜನರ ಮೆಚ್ಚುಗೆ ಪಡೆದಿದ್ದಾರೆ. ಅದೇ ಪ್ರೀತಿಯನ್ನು ಅಭಿಮಾನಿಗಳು, ನಟನ ಕುಟುಂಬಕ್ಕೂ ನೀಡಿದ್ದಾರೆ.

67
ಪ್ರೀತಿಸಿ ಮದುವೆಯಾಗಿದ್ದ ರಿಷಬ್ -ಪ್ರಗತಿ

ರಿಷಬ್ ಮತ್ತು ಪ್ರಗತಿ ಪ್ರೀತಿಸಿ, ಮನೆಯವರ ಒಪ್ಪಿಗೆ ಪಡೆದು, ದಾಂಪತ್ಯ ಜೀವನಕ್ಕೆ 2017ರಲ್ಲಿ ಕಾಲಿಟ್ಟಿದ್ದರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ. ಪತ್ನಿ ಪ್ರಗತಿ, ಕಾಸ್ಟ್ಯೂಮ್ ಡಿಸೈನರ್ ಆಗಿ, ಪತಿಯ ಎಲ್ಲಾ ಕೆಲಸದಲ್ಲೂ ಜೊತೆಯಾಗಿ ನಿಂತಿದ್ದಾರೆ.

77
ಸಿನಿಮಾ ನಟನೆ, ನಿರ್ದೇಶನದಲ್ಲಿ ಬ್ಯುಸಿ

ರಿಷಬ್ ಶೆಟ್ಟಿ ಸದ್ಯ ಜೈ ಹನುಮಾನ್ ಸಿನಿಮಾದಲ್ಲಿ ಆಂಜನೇಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ, ಇನ್ನು ದಿ ಪ್ರೈಡ್ ಆಫ್ ಭಾರತ್- ಛತ್ರಪತಿ ಶಿವಾಜಿ ಮಹಾರಾಜ್ ಸಿನಿಮಾದಲ್ಲಿ ಶಿವಾಜಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಕಾಂತಾರಾ ಚಾಪ್ಟರ್ 2 ಸಿನಿಮಾದ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ ರಿಷಬ್ ಶೆಟ್ಟಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories