Shanti Kranti: ಕ್ರೇಜಿಸ್ಟಾರ್ ರವಿಚಂದ್ರ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಾಗಾರ್ಜುನ್ ಹೀಗೆ ದಕ್ಷಿಣದ ಸ್ಟಾರ್ ನಟರುಗಳ ಜೊತೆ ಕಾಣಿಸಿಕೊಂಡ ಈ ಬಾಲಕಿ ಯಾರು ಗೆಸ್ ಮಾಡಿ. ಈಕೆ ಕನ್ನಡದ ಸ್ಟಾರ್ ನಟಿ ಹೌದು, ಪ್ರೇಮ್ ಕಹಾನಿಗಳ ಮೂಲಕ ಯುವಕರ ಎದೆಗೆ ಲಗ್ಗೆ ಇಟ್ಟಿದ್ದ ಸುಂದರಿಯೂ ಹೌದು.
ಸೋಶಿಯಲ್ ಮೀಡಿಯಾದಲ್ಲಿ ಇದೀಗ ಈ ಫೋಟೊ ವೈರಲ್ ಆಗುತ್ತಿದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿರುವ ಸ್ಟಾರ್ ನಟರುಗಳ ಜೊತೆಗೆ ಮುದ್ದಾಗಿ ಪೋಸ್ ಕೊಡುತ್ತಿರುವ ಈ ಬಾಲಕಿ ಯಾರು ಎಂದು ಗೆಸ್ ಮಾಡುವಿರಾ? ಈಕೆ ಕನ್ನಡ ಚಿತ್ರರಂಗದ ಸ್ಟಾರ್ ನಟಿ.
26
ದಿಗ್ಗಜರ ಜೊತೆ ಬಾಲನಟಿಯಾಗಿ ಮಿಂಚಿದ ಸುಂದರಿ
ಸ್ಯಾಂಡಲ್ ವುಡ್ ಸ್ಟಾರ್ ಕ್ರೇಜಿಸ್ಟಾರ್ ರವಿಚಂದ್ರ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ತೆಲುಗಿನ ಸ್ಟಾರ್ ನಾಗಾರ್ಜುನ್ ಜೊತೆ ಸುಮಾರು 35 ವರ್ಷಗಳ ಹಿಂದೆ, ಹೆಗಲಿಗೆ ಕೈಹಾಕಿಕೊಂಡು ಮುದ್ದಾಗಿ ಪೋಸ್ ಕೊಟ್ಟ ಈ ಬಾಲೆ, ಒಂದು ಕಾಲದಲ್ಲಿ ಪ್ರೇಮ ಕತೆಗಳ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆ ಇಟ್ಟ ಸುಂದರಿ.
36
ಇವರು ಅನುಪ್ರಭಾಕರ್
ಇವರು ಬೇರೆ ಯಾರು ಅಲ್ಲ, ನಟಿ ಅನುಪ್ರಭಾಕರ್. ಅನುಪ್ರಭಾಕರ್ ಹತ್ತು ವರ್ಷದವರಾಗಿದ್ದಾಗಲೇ, ಶಾಂತಿಕ್ರಾಂತಿ ಸಿನಿಮಾದಲ್ಲಿ ನಟಿಸಿದ್ದರು. ಸದ್ಯ ಎಲ್ಲೆಡೆ ಶಾಂತಿಕ್ರಾಂತಿ ಸಿನಿಮಾದ ಅಬ್ಬರ ಜೋರಾಗಿರುವಾಗ ನಟಿ ಕೂಡ ಸಿನಿಮಾ ಕುರಿತು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಎಲ್ಲಾರು ಶಾಂತಿಕ್ರಾಂತಿ ಸಿನಿಮಾ ಬಗ್ಗೆ ಮಾತಾಡತಾಯಿದ್ದೀರಾ. .. so sharing these memories, A magician in the cinema world @theravichandrav Instagram ನಲ್ಲಿ ಕನ್ನಡದಲ್ಲಿ ಈ ಹಾಡು ಸಿಗಲ್ಲಿಲ್ಲ ಅದಕ್ಕೆ ಹಿಂದಿ... ಎಂದು ಕ್ಯಾಪ್ಶನ್ ಕೊಟ್ಟು, ಸ್ಟಾರ್ ನಟರೊಂದಿಗಿನ ಹಾಗೂ ಸಿನಿಮಾದಲ್ಲಿನ ಒಂದಷ್ಟು ದೃಶ್ಯಗಳನ್ನು ನಟಿ ಹಂಚಿಕೊಂಡಿದ್ದಾರೆ.
56
ಈಗ್ಯಾಕೆ ಶಾಂತಿ ಕ್ರಾಂತಿ ಟ್ರೆಂಡಿಂಗ್ ನಲ್ಲಿದೆ?
ರವಿಚಂದ್ರನ್ ನಿರ್ದೇಶನದ, ‘ಶಾಂತಿಕ್ರಾಂತಿ’ ಸಿನಿಮಾ ರಿಲೀಸ್ ಆಗಿ ಶೀಘ್ರದಲ್ಲಿ 35 ವರ್ಷ ಆಗಲಿದೆ. 10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಆ ಕಾಲದ ಕನ್ನಡದ ದುಬಾರಿ ಸಿನಿಮಾ ಇದಾಗಿತ್ತು, ಆದರೆ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದ 'ಶಾಂತಿ ಕ್ರಾಂತಿ' ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡಬೇಕು, ನಾವು ಆ ಸಿನಿಮಾವನ್ನು ಗೆಲ್ಲಿಸಿಕೊಡುತ್ತೇವೆ ಎಂದು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.
66
ಮಕ್ಕಳ ಕಥೆಯನ್ನು ಹೊಂದಿದ್ದ ಸಿನಿಮಾ
ಅಂದ ಹಾಗೆ ‘ಶಾಂತಿಕ್ರಾಂತಿ’ ಮಕ್ಕಳ ಕಥೆಯನ್ನು ಹೊಂದಿದ್ದ ಸಿನಿಮಾವಾಗಿತ್ತು. ಚಿತ್ರದಲ್ಲಿ ಅನುಪ್ರಭಾಕರ್, ಮಕ್ಕಳಲ್ಲಿ ಒಬ್ಬರಾಗಿ ನಟಿಸಿದ್ದರು. ಇದೀಗ ಸಿನಿಮಾ ರಿ ರಿಲೀಸ್ ಗಾಗಿ ಭಾರಿ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಟಿ ಅನುಪ್ರಭಾಕರ್ ಕೂಡ ರಿ ರಿಲೀಸ್ ಗೆ ಆಗ್ರಹಿಸಿ ಸೋಶಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.