Krishi Thapanda Mysuru visit: ನಟಿ ಕೃಷಿ ತಾಪಂಡ ಇತ್ತೀಚೆಗೆ ತಂದೆ-ತಾಯಿ ಜೊತೆ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನೋವುಗಳನ್ನು ಮರೆತು ಮತ್ತೆ ನಗುತ್ತಾ ಕಾಣಿಸಿಕೊಂಡ ನಟಿಯನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸರಳತೆಗೆ ಮಾರುಹೋದ ನೆಟ್ಟಿಗರು ನಟಿ ಕೃಷಿ ತಾಪಂಡ ಅವರು ಇತ್ತೀಚೆಗೆ ತಮ್ಮ ತಂದೆ-ತಾಯಿಯೊಂದಿಗೆ ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಭೇಟಿ ನೀಡಿದ್ದರು. ಈ ಭೇಟಿಯ ವಿಡಿಯೋಗಳು ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿದ್ದು, ಅವರ ಸರಳತೆ ಮತ್ತು ಸಂಪ್ರದಾಯಬದ್ಧ ಉಡುಗೆಗೆ ನೆಟ್ಟಿಗರು ಮಾರುಹೋಗಿದ್ದಾರೆ.
25
ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದ ಕೃಷಿ
ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸಿದ ಕೃಷಿ ಈ ಸಂದರ್ಭದಲ್ಲಿ ಕೃಷಿ ತಾಪಂಡ ಅವರು ಅತ್ಯಂತ ಸುಂದರವಾದ ಮತ್ತು ಸಾಂಪ್ರದಾಯಿಕ ಕಾಂಜೀವರಂ ಸೀರೆಯನ್ನು ಉಟ್ಟು, ಹಣೆಯ ಮೇಲೆ ಕುಂಕುಮವಿಟ್ಟು ಸಾಂಪ್ರದಾಯಿಕ ಲುಕ್‌ನಲ್ಲಿ ಕಂಗೊಳಿಸುತ್ತಿದ್ದರು. ಅವರ ಮುಖದಲ್ಲಿನ ಆ ಮಂದಹಾಸ ಮತ್ತು ಆತ್ಮವಿಶ್ವಾಸವನ್ನು ಕಂಡ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
35
ಕಾಂಜೀವರಂ ಸೀರೆ ಕಂಫರ್ಟಬಲ್
ಕಾಂಜೀವರಂ ಸೀರೆ ಕಂಫರ್ಟಬಲ್ ಅಂದಹಾಗೆ ಈ ವಿಡಿಯೋದಲ್ಲಿ ಕೃಷಿ ಅವರು ಒಂದು ಆಸಕ್ತಿದಾಯಕ ವಿಷಯ ಹಂಚಿಕೊಂಡಿದ್ದಾರೆ. "ಸಾಮಾನ್ಯವಾಗಿ ಸೀರೆ ಉಟ್ಟರೆ ಓಡಾಡಲು ಕಷ್ಟವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ನನಗೆ ಕಾಂಜೀವರಂ ಸೀರೆ ಎಂದರೆ ಸಿಕ್ಕಾಪಟ್ಟೆ ಕಂಫರ್ಟಬಲ್. ನಾನು ಈ ಸೀರೆಯಲ್ಲೇ ಮೈಸೂರಿನ ತುಂಬಾ ಸುತ್ತಿದ್ದೇನೆ. ಅಷ್ಟೇ ಅಲ್ಲದೆ, ಇದೇ ಉಡುಗೆಯಲ್ಲೇ ನನ್ನ ತಂದೆಯನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗಿದ್ದೇನೆ" ಎಂದು ಅವರು ಹೇಳಿಕೊಂಡಿದ್ದಾರೆ.
ಹಾರೈಸಿದ ಅಭಿಮಾನಿಗಳು ಇನ್ನು ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಕೃಷಿ ಅವರನ್ನು ಮುತ್ತಿಕೊಂಡಿದ್ದರು. ಕಳೆದ ಕೆಲವು ತಿಂಗಳುಗಳಲ್ಲಿ ಕೃಷಿ ಅವರು ವೈಯಕ್ತಿಕ ಜೀವನದಲ್ಲಿ ಕೆಲವು ಕಷ್ಟದ ದಿನಗಳನ್ನು ಕಂಡಿದ್ದರು. ನೋವನ್ನು ಅನುಭವಿಸಿದಾಗಲೂ ಅವರು ಎದೆಗುಂದದೆ ಅದನ್ನು ಎದುರಿಸಿದ್ದರು. ಈಗ ಅವರು ಮತ್ತೆ ಮೊದಲಿನಂತೆ ನಗುನಗುತ್ತಾ, ಸಕಾರಾತ್ಮಕವಾಗಿ ಕಾಣಿಸಿಕೊಂಡಿರುವುದನ್ನು ಕಂಡು ಅಭಿಮಾನಿಗಳು ಭಾವುಕರಾಗಿದ್ದಾರೆ. "ನಿಮ್ಮನ್ನು ಹೀಗೆ ನಗುನಗುತ್ತಾ ನೋಡಲು ನಮಗೆ ಖುಷಿಯಾಗುತ್ತದೆ, ಎಲ್ಲಾ ನೋವುಗಳನ್ನು ಮರೆತು ಮತ್ತೆ ಮೊದಲಿನಂತಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ" ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
55
ಸಂಪ್ರದಾಯದ ಮೇಲಿನ ಪ್ರೀತಿ, ಪೋಷಕರ ಮೇಲಿನ ಕಾಳಜಿ
ಸಂಪ್ರದಾಯದ ಮೇಲಿನ ಪ್ರೀತಿ, ಪೋಷಕರ ಮೇಲಿನ ಕಾಳಜಿ ಒಟ್ಟಾರೆಯಾಗಿ, ಕೃಷಿ ತಾಪಂಡ ಅವರ ಮೈಸೂರು ಭೇಟಿಯು ಅವರ ಸಂಪ್ರದಾಯದ ಮೇಲಿನ ಪ್ರೀತಿ, ಪೋಷಕರ ಮೇಲಿನ ಕಾಳಜಿ ಮತ್ತು ಅವರ ಅಚಲವಾದ ಆತ್ಮವಿಶ್ವಾಸವನ್ನು ತೋರಿಸಿದೆ. ಮೈಸೂರು ಚಾಮುಂಡೇಶ್ವರಿಯ ಕೃಪೆ ಅವರ ಮೇಲೆ ಸದಾ ಇರಲಿ ಎಂದು ಸಿನಿಪ್ರೇಮಿಗಳು ಆಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.