ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಪುಟ್ಟ ರಾಧ್ಯಾಗೆ ಅಕ್ಷರಾಭ್ಯಾಸ ಮಾಡಿಸಿದ ರಿಷಭ್ ದಂಪತಿ

First Published | May 23, 2024, 11:31 AM IST

ಶೃಂಗೇರಿ ಶಾರದಾಂಬೆ ಸನ್ನಿಧಿ ಮಕ್ಕಳ ಅಕ್ಷರಾಭ್ಯಾಸಕ್ಕೆ ಖ್ಯಾತಿ ಪಡೆದಿದ್ದು, ಇದೀಗ ರಿಷಭ್ ಶೆಟ್ಟಿ ತಮ್ಮ ಪುತ್ರಿ ರಾಧ್ಯಾಳಿಗೆ ಇಲ್ಲಿಯೇ ಅಕ್ಷರಾಭ್ಯಾಸ ಮಾಡಿಸಿದ್ದಾರೆ. 

ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ ಕುಟುಂಬ ಸಮೇತ ಕೊಪ್ಪ ತಾಲೂಕಿನ ಹರಿಹರಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಬೆನ್ನಲ್ಲೇ ಅಲ್ಲಿಗೆ ಹತ್ತಿರದಲ್ಲಿರುವ ಶೃಂಗೇರಿ ಶಾರದಾಂಭೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. 

ಶೃಂಗೇರಿ ಶ್ರೀ ಶಾರಾದಾ ದೇವಿ ಸನ್ನಿಧಿಯು ಮಕ್ಕಳ ಅಕ್ಷರಾಭ್ಯಾಸಕ್ಕೆ ಅಪಾರ ಖ್ಯಾತಿ ಪಡೆದಿದೆ. ಸ್ವತಃ ವಿದ್ಯೆಗೆ ಅಧಿಪತಿಯಾಗಿರುವ ಶಾರದೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರೆ ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಾರೆ ಎಂಬ ನಂಬಿಕೆ ಇದೆ.

Tap to resize

ಅಂತೆಯೇ ರಿಷಭ್ ಶೆಟ್ಟಿ ಹಾಗೂ ಪ್ರಗತಿ ರಿಷಭ್ ಶೆಟ್ಟಿ ದಂಪತಿ ಕೂಡಾ ಈ ಸನ್ನಿಧಿಗೆ ಮಗ ಮತ್ತು ಮಗಳೊಂದಿಗೆ ಭೇಟಿ ನೀಡಿ, ಮಕ್ಕಳಿಬ್ಬರಿಗೂ ಅಕ್ಷರಾಭ್ಯಾಸ ಮಾಡಿಸಿದರು. 

'ಶ್ರೀ ಶಾರದಾಂಬೆಯ ಸನ್ನಿಧಿಯಲ್ಲಿ ನಮ್ಮ ಪುಟ್ಟ ರಾಧ್ಯಾಳ ಅಕ್ಷರ ಅಭ್ಯಾಸದ ಕ್ಷಣ..' ಎಂದು ಕಾಂತಾರ ನಟ ತಮ್ಮ ಇನ್ಸ್ಟಾಗ್ರಾಂನಲ್ಲಿ  ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ಫೋಟೋಗಳಲ್ಲಿ ರಿಷಭ್ ಹಾಗೂ ಪುತ್ರ ಬಿಳಿ ರೇಶ್ಮೆ ಧೋತಿ ಮತ್ತು ಶಲ್ಯ ಧರಸಿದ್ದರೆ, ಪ್ರಗತಿ ಸೀರೆ ಉಟ್ಟಿದ್ದು, ಪುತ್ರಿ ರಾಧ್ಯಾ ರೇಶ್ಮೆ ಲಂಗದಲ್ಲಿ ಸಜ್ಜಾಗಿದ್ದಾಳೆ. 

'ಪುಟ್ಟ ಪುಟ್ಟ ಹೆಜ್ಜೆಯಿಂದ ಪುಟ್ಟ ಪದಗಳನ್ನು ಉಚ್ಚರಿಸುವವರೆಗೆ' ಎಂದು ರಿಷಭ್ ಮಗಳ ಬಗ್ಗೆ ಹೇಳಿದ್ದು, ಶಾರದಾಂಬೆಯ ಆಶೀರ್ವಾದದಲ್ಲಿ ಮಗಳ ಅಕ್ಷರಾಭ್ಯಾಸ ಪೂರೈಸಿದ್ದೇವೆ ಎಂದು ಹಂಚಿಕೊಂಡಿದ್ದಾರೆ. 

ಈ ಸಂದರ್ಭದಲ್ಲಿ ಮಕ್ಕಳಿಬ್ಬರಿಗೂ ಸ್ಲೇಟಿನಲ್ಲಿ 'ಅ ಆ ಇ ಈ' ಎಂದು ಬರೆಸಿ ತಿದ್ದಿಸಲಾಗಿದೆ. ಕುಟುಂಬದ ಈ ಭಕ್ತಿ, ಸಂಸ್ಕಾರವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. 

ಇದಕ್ಕೂ ಮುನ್ನ ಶ್ರೀ ಕ್ಷೇತ್ರ ಹರಿಹರಪುರದಲ್ಲಿ ಶ್ರೀ ಸ್ವಯಂ ಸಚ್ಚಿದಾನಂದ ಶ್ರೀಗಳ ದರ್ಶನ ಪಡೆದ ದಂಪತಿ,  ಮಠದ ಆವರಣದ ಆಂಜನೇಯನ ಬಳಿ ಫೋಟೋ ತೆಗೆಸಿಕೊಂಡಿದ್ದಾರೆ.

Latest Videos

click me!