ಹಣಕಾಸಿನ ವಿಚಾರ ತುಂಬಾ ಕಲಿಬೇಕು, ಮದ್ವೆಯಿಂದ ಕೆಲಸಕ್ಕೆ ಬ್ರೇಕ್ ಹಾಕ್ಬಾರ್ದು: ಧನ್ಯಾ ರಾಮ್‌ಕುಮಾರ್

First Published | May 23, 2024, 11:29 AM IST

ಹಣ ಮತ್ತು ಮದುವೆ ಎಷ್ಟು ಮುಖ್ಯ....ಜಸ್ಟ್‌ ಕ್ಯೂರಿಯಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಧನ್ಯಾ ರಾಮ್‌ಕುಮಾರ್. 

ರ್ಯಾಪಿಡ್ ರಶ್ಮಿ ನಡೆಸುವ ಜಸ್ಟ್‌ ಕ್ಯೂರಿಯಸ್‌ ಕಾರ್ಯಕ್ರಮದಲ್ಲಿ ದೊಡ್ಡಮನೆ ಮೊಮ್ಮಗಳು, ಸ್ಟಾರ್ ನಟಿ ಧನ್ಯಾ ರಾಮ್‌ಕುಮಾರ್ ಮಾತನಾಡಿದ್ದಾರೆ.

ತುಂಬಾ ಸ್ಟ್ರಾಂಗ್ ಹಾಗೂ ಇಂಡಿಪೆಂಡೆಂಟ್‌ ಮಹಿಳೆಯು ಸುತ್ತಾ ಬೆಳೆದಿರುವ ಧನ್ಯಾ ರಾಮ್‌ ಹಣ ಕಾಸಿನ ವಿಚಾರದಲ್ಲಿ ಹೇಗೆ? ಯಾವ ರೀತಿಯಲ್ಲಿ ಮ್ಯಾನೇಜ್ ಮಾಡುತ್ತಾರೆ ಎಂದು ಪ್ರಶ್ನಿಸಿದಾಗ ಸಿಕ್ಕ ಉತ್ತರವಿದು.

Tap to resize

ಹಣ ಕಾಸಿನ ವಿಚಾರದಲ್ಲಿ ನಾನು ತುಂಬಾ ಕಲಿಯಬೇಕು. ಆದರೆ ಆಗಾಗ ಖರ್ಚು ಮಾಡುತ್ತೀನಿ. ನಮ್ಮ ಫ್ಯೂಚರ್‌ಗಾಗಿ ಯಾವುದಾದರೂ ರೀತಿಯಲ್ಲಿ ಸೇವ್ ಮಾಡಬೇಕು.

ನನಗೆ ಟ್ರಾವಲಿಂಗ್ ತುಂಬಾನೇ ಇಷ್ಟ ಇರುವ ಕಾರಣ ಖರ್ಚಾಗುತ್ತದೆ. ನಾನು ಇಂದಿನ ಜೀವನದ ಬಗ್ಗೆ ಯೋಚನೆ ಮಾಡುವ ವ್ಯಕ್ತಿಯಾಗಿರುವ ಕಾರಣ ಹಣವನ್ನು ಸೇವ್ ಮಾಡುವುದು ಪ್ರಯಾಣ ಮಾಡುವುದಕ್ಕೆ.

ಟ್ರಾವಲ್ ಮಾಡುವುದಕ್ಕೆ ಹಣ ವೇಸ್ಟ್‌ ಮಾಡುತ್ತಿರುವೆ ಅಂದುಕೊಂಡಿದ್ದಾರೆ ಅಮ್ಮ ಆದರೆ ನನಗೆ ಟ್ರಾವಲ್ ಮಾಡುವುದರಿಂದ ತುಂಬಾ ಖುಷಿ ಇದೆ ತುಂಬಾ ನೆಮ್ಮದಿ ಸಿಗುತ್ತದೆ.

ಹೆಣ್ಣುಮಕ್ಕಳಾಗಿ ನಾವು ಇಂಡಿಪೆಂಡೆಂಟ್ ಆಗಿ ಇರಬೇಕು. ಹಣ ಸೇವ್ ಮಾಡಬೇಕು. ಮದುವೆ ಬರಲಿ ಏನೇ ಬರಲಿ ನಮ್ಮ ಕೆಲಸಕ್ಕೂ ಪ್ರಮುಖ್ಯತೆ ನೀಡಬೇಕು.

ಮದುವೆ ನಮ್ಮ ಕೆಲಸಕ್ಕೆ ಬ್ರೇಕ್ ಹಾಕಬಾರದು. ಪರ್ಸನಲ್‌ ಲೈಫ್ ಮತ್ತು ಕೆಲಸವನ್ನು ನಾನು ಮಿಕ್ಸ್‌ ಮಾಡುವುದಿಲ್ಲ. ಅದೇ ಬೇರೆ ಇದೇ ಬೇರೆ ಎಂದು ಧನ್ಯಾ ರಾಮ್ ಮಾತನಾಡಿದ್ದಾರೆ. 

Latest Videos

click me!