ಜತೆಗೆ, ಕಾಂತಾರ ಚಿತ್ರದ ಬಿಡುಗಡೆಯಿಂದ ಜಗತ್ತಿನಾದ್ಯಂತ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಇದೀಗ, ಅಚ್ಚರಿ ಹಾಗೂ ಖುಷಿ ಸಂಗತಿ ಎಂಬಂತೆ, ಕಾಂತಾರ ಚಿತ್ರದ ಡಿಜಿಟಲ್ ಹಕ್ಕು ಬರೋಬ್ಬರಿ 125 ಕೋಟಿಗೆ ಸೇಲ್ ಆಗಿದ್ದು, ಹೊಸ ದಾಖಲೆ ಬರೆದಿದೆ. ಕಡಿಮೆ ಬಜೆಟ್ಟಿನ ಕನ್ನಡ ಚಿತ್ರವೊಂದು ಈ ಮಟ್ಟಕ್ಕೆ ಪ್ರಖ್ಯಾತಿ ಪಡೆದು, ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದು ಮತ್ತೊಂದು ದಾಖಲೆ ಎನ್ನಬಹುದು.