Rishab Shetty Good News: ಪ್ರೊಡಕ್ಷನ್ ನಂ.2, ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಿಶಭ್ ದಂಪತಿ

Published : Dec 31, 2021, 07:33 PM IST

Rishab Shetty: ಪ್ರೊಡಕ್ಷನ್ ನಂ.2, ಗುಡ್ ನ್ಯೂಸ್ ಹಂಚಿಕೊಂಡ ರಿಶಭ್ ಶೆಟ್ಟಿ ಕ್ಯೂಟೆಸ್ಟ್ ಫೋಟೋಶೂಟ್ ನೋಡಿ

PREV
16
Rishab Shetty Good News: ಪ್ರೊಡಕ್ಷನ್ ನಂ.2, ಎರಡನೇ ಮಗುವಿನ ನಿರೀಕ್ಷೆಯಲ್ಲಿ ರಿಶಭ್ ದಂಪತಿ

ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಶಭ್ ಶೆಟ್ಟಿ ಅವರು ಗುಡ್‌ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. ಹೌದು 2021ರ ಕೊನೆಯ ದಿನದಂದು ಹೊಸ ವರ್ಷದಲ್ಲಿ ಬರಲಿರೋ ಶುಭಸುದ್ದಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

26

ಪತ್ನಿ ಹಾಗೂ ಮಗ ರಣ್ವಿತ್ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರೋ ರಿಶಭ್ ಶೆಟ್ಟಿ ಕಡಲ ತೀರದ ಸಂಜೆಯನ್ನು ಮನಸಾರೆ ಆಸ್ವಾದಿಸುವುದನ್ನು ಕಾಣಬಹುದು.

36

ರಿಶಭ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅವರ ಪ್ರೆಗ್ನೆನ್ಸಿ ಫೋಟೋ ಶೂಟ್ ಶೇರ್ ಮಾಡಿಕೊಂಡಿದ್ದು ಪ್ರೊಡಕ್ಷನ್ ನಂಬರ್ 2 ಸೂಚನೆಯನ್ನು ಕೊಟ್ಟಿದ್ದಾರೆ. ಇದರಲ್ಲಿ ತಮ್ಮ ಮಗ ರಣ್ವಿತ್ ಅಣ್ಣನಾಗಲಿದ್ದಾರೆ ಎಂದಿದ್ದಾರೆ

46

ಹೊಸ ವರ್ಷಕ್ಕೆ ಹೊಸ 'ಸಂತಸ'ವೊಂದು ನಮ್ಮ ಕುಟುಂಬದ ಜೊತೆಯಾಗಲಿದೆ, ರಣ್ವಿತ್ ಶೆಟ್ಟಿ ಸದ್ಯದಲ್ಲೇ ಅಣ್ಣನಾಗಲಿದ್ದಾನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ #production_no2  Pragathi Rishab Shetty #ranvitshetty ಎಂದು ಫೋಟೋಸ್‌ಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನಟ

56

2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟನಿಗೆ 38 ವರ್ಷ, ಇವರು ಮೂಲತಃ ಕುಂದಾಪುರದವರು. ಇವರು ಬೆಸ್ಟ್ ಡೈರೆಕ್ಟರ್ ಫಿಲ್ಮ್‌ಫೇರ್ ಅವಾರ್ಡ್ ಪಡೆದಿದ್ದಾರೆ.

66

ಹೀರೋ, ಬೆಲ್ ಬಾಟಂ, ಗರುಡಗಮನ ವೃಷಭವಾಹನ, ಕಿರಿಕ್ ಪಾರ್ಟಿ ಸಿನಿಮಾಗಳಲ್ಲಿ ರಿಶಭ್ ನಟಿಸಿದ್ದಾರೆ. ರಿಷಭ್ ಮೊದಲ ಮಗನೂ ಸೇರಿಕೊಂಡು ಕ್ಯೂಟ್ ಫ್ಯಾಮಿಲಿ ಫೋಟೋ ಶೂಟ್ ಮಾಡಿದ್ದಾರೆ ಈ ಜೋಡಿ

Read more Photos on
click me!

Recommended Stories