ತಾಯಿ ಪಕ್ಕ ನಿಂತು ಕಣ್ಣು ಹೊಡೆದು ನೆಟ್ಟಿಗರ ಗಮನ ಸೆಳೆದ Ayra Yash!

Suvarna News   | Asianet News
Published : Dec 31, 2021, 01:28 PM IST

ವೈರಲ್ ಆಗುತ್ತಿದೆ ಐರಾ ಯಶ್ ಫೋಟೋ. ತಾಯಿ ಪ್ರತಿಭೆ ಮೀರಿಸುವ ನಟಿಯಾಗು ಎಂದು ಕಾಮೆಂಟ್ ಮಾಡಿದ ಅಭಿಮಾನಿಗಳು..

PREV
18
ತಾಯಿ ಪಕ್ಕ ನಿಂತು ಕಣ್ಣು ಹೊಡೆದು ನೆಟ್ಟಿಗರ ಗಮನ ಸೆಳೆದ Ayra Yash!

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ನಟಿ ರಾಧಿಕಾ ಪಂಡಿತ್ (Radhika Pandit) ಇನ್‌ಸ್ಟಾಗ್ರಾಂನಲ್ಲಿ ಮಕ್ಕಳ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳುತ್ತಾರೆ. ಹೀಗಾಗಿ ಮಕ್ಕಳು ಕೂಡ ಸ್ಟಾರ್ ಕಿಡ್ ಪಟ್ಟಿ ಸೇರಿಕೊಂಡಿದ್ದಾರೆ. 
 

28

ಎಲ್ಲ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ರಾಧಿಕಾ ಪಂಡಿತ್. ತಮ್ಮ ಹೊಸ ಮನೆಯಲ್ಲಿ ಕ್ರಿಸ್ಮಸ್ (Christmas) ಆಚರಣೆ ಮಾಡಿದ್ದಾರೆ. ಮನೆಯಲ್ಲಿ ಕ್ರಿಸ್ಮಸ್‌ ಟ್ರೀ ಇಟ್ಟಿದ್ದಾರೆ. 

38

ಕ್ರಿಸ್ಮಸ್‌ ಟ್ರೀಗೆ ಅಲಂಕಾರ ಮಾಡುತ್ತಿರುವ ವೇಳೆ ಐರಾ (Ayra) ಮತ್ತು ತಮ್ಮ ಯಥರ್ವ್‌ (Yatharv) ಹಳದಿ ಬಣ್ಣದ ಔಟ್‌ಫಿಟ್‌ ಧರಿಸಿ ಪೋಸ್‌ ಕೊಟ್ಟಿದ್ದಾರೆ. 

48

ಪ್ರತಿ ಹಬ್ಬವನ್ನು ಕುಟುಂಬದ ಜೊತೆ ಆಚರಣೆ ಮಾಡುವ ಯಶ್‌ (Yash), ಕ್ರಿಸ್ಮಸ್‌ ದಿನ ಮನೆಯಲ್ಲಿ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ಕ್ರಿಸ್ಮಸ್‌ ಟ್ರೀ ಪಕ್ಕ ಫ್ಯಾಮಿಲಿ ಫೋಟೋ ತೆಗೆದುಕೊಂಡಿದ್ದಾರೆ. 

58

ಇದಾದ ನಂತರ ರಾಧಿಕಾ ಮತ್ತು ಐರಾ ಕ್ರಿಸ್ಮಸ್‌ ಟ್ರೀ ಮುಂದೆ ವಿಭಿನ್ನ ಪೋಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ ಐರಾ ಎಲ್ಲರ ಗಮನ ಸೆಳೆದಿದ್ದಾಳೆ. 

68

'ಇಲ್ಲಿ ಯಾರು ಬೆಸ್ಟ್‌ ಪೋಸರ್‌ ಎಂದು ಹೇಳುವವರಿಗೆ ಅಂಕವಿಲ್ಲ. ನೋಡಿದರೆ ಗೊತ್ತಾಗುತ್ತದೆ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.

78

ಕ್ರಿಸ್ಮಸ್‌ ಟ್ರೀ ಮುಂದೆ ರಾಧಿಕಾ ಪೋಸ್‌ ಕೊಟ್ಟರೆ ಪಕ್ಕದಲ್ಲಿ ನಿಂತ ಪುತ್ರಿ ಐರಾ ಕ್ಯಾಮೆರಾಗೆ ಕಣ್ಣು ಹೊಡೆದಿದ್ದಾಳೆ. ಅಲ್ಲದೆ ಸ್ಟೈಲ್‌ ಆಗಿ ನಿಂತು ಪೋಸ್ ಕೊಟ್ಟಿದ್ದಾಳೆ.

88

ತಂದೆ ತಾಯಿ ಇಬ್ಬರೂ ಅದ್ಭುತ ಕಲಾವಿದರು, ಸಾಕಷ್ಟು ಅವಾರ್ಡ್‌ ಪಡೆದುಕೊಂಡಿದ್ದಾರೆ. ಅವರನ್ನು ಮೀರಿಸುವ ಪ್ರತಿಭೆ ನಿನ್ನಲ್ಲಿದೆ ನೀನು ಬೇಬಿ ಐರಾ ಆಗಿ ಎಂಟ್ರಿ ಕೊಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories