‘ದಿ ಗರ್ಲ್‌ಫ್ರೆಂಡ್ ಸಿನಿಮಾದ ‘ಸ್ವರವೇ’ ಹಾಡಿನ ಡ್ಯಾನ್ಸ್ ನಿಮ್ಮೊಂದಿಗೆ ಮಾತ್ರ ಮಾಡೋದಕ್ಕೆ ಸಾಧ್ಯವಿತ್ತು. ಇತರರೊಂದಿಗೆ ಇಂಥಾ ಆಪ್ತ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳೋದು ದಿಗಿಲು ಮೂಡಿಸುತ್ತದೆ. ನೀವು ನನಗೆ ಬಹಳ ಸುರಕ್ಷಿತ ಭಾವ ಕೊಟ್ಟಿರಿ.’
25
ಇದು ಕನ್ನಡದ ಹುಡುಗ ದೀಕ್ಷಿತ್ ಶೆಟ್ಟಿ ಬಗ್ಗೆ ರಶ್ಮಿಕಾ ಮಂದಣ್ಣ ಆಡಿರುವ ಮಾತು. ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾದ ‘ಸ್ವರವೇ’ ಹಾಡು ಕೋಟ್ಯಂತರ ವೀಕ್ಷಣೆ ದಾಖಲಿಸಿ ಮೆಚ್ಚುಗೆ ಪಡೆಯುತ್ತಿದೆ.
35
ದೀಕ್ಷಿತ್ ಶೆಟ್ಟಿ ಈ ಹಾಡಿನ ಮೇಕಿಂಗ್ ಬಗ್ಗೆ ಬರೆಯುತ್ತಾ ರಶ್ಮಿಕಾರನ್ನು ಕೊಂಡಾಡಿದ್ದಾರೆ. ‘ನಿಮ್ಮ ಜೀವ ನನ್ನ ಕೈಯಲ್ಲಿಟ್ಟು ಗಾಳಿಯಲ್ಲಿ ತೇಲುತ್ತ ನೃತ್ಯ ಮಾಡಿದ ಬಗೆ ಅದ್ಭುತವಾಗಿತ್ತು. ಅಕ್ಷರಶಃ ನೀವೊಬ್ಬ ಸ್ಟಾರ್, ಎಲ್ಲರಿಗೂ ಸ್ಫೂರ್ತಿ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಶ್ಮಿಕಾ, ‘ನಾನಿದನ್ನು ನಿಮ್ಮೊಂದಿಗಷ್ಟೇ ಮಾಡುವುದು ಸಾಧ್ಯವಿತ್ತು’ ಎಂದಿದ್ದು ಸೆನ್ಸೇಶನ್ ಆಗಿದೆ. ರಾಹುಲ್ ರವೀಂದ್ರನ್ ಈ ಸಿನಿಮಾ ನಿರ್ದೇಶಿಸಿದ್ದಾರೆ.
55
ಇನ್ನು 'ದಿಯಾ' ಚಿತ್ರದ ಮೂಲಕ ಕನ್ನಡಿಗರ ಮನಗೆದ್ದು, ನಂತರ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿರುವ ದೀಕ್ಷಿತ್ ಶೆಟ್ಟಿ, ಇದೀಗ ರಶ್ಮಿಕಾ ಜೊತೆ ನಟಿಸುತ್ತಿದ್ದಾರೆ