ರಕ್ಷಿತ್‌ ಶೆಟ್ಟಿ ಅದ್ಭುತ ಸಿನಿಮಾಕ್ಕೆ ನಾನೂ ಕಾಯುತ್ತಿದ್ದೇನೆ: ರಾಜ್‌ ಬಿ ಶೆಟ್ಟಿ

Published : Jul 21, 2025, 01:26 PM IST

ರಕ್ಷಿತ್‌ ಶೆಟ್ಟಿ ಯಾವಾಗ ಸಿನಿಮಾ ಮಾಡಿದರೂ ಅದ್ಭುತವಾಗಿ ಮಾಡ್ತಾರೆ. ನಾನೂ ಒಬ್ಬ ಅಭಿಮಾನಿಯಾಗಿ ಅವರ ಸಿನಿಮಾಕ್ಕೆ ಕಾಯುತ್ತಿದ್ದೇನೆ ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

PREV
15

ಸ್ಯಾಂಡಲ್‌ವುಡ್‌ನ ನಟ, ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರ ಅದ್ಭುತ ಸಿನಿಮಾಕ್ಕಾಗಿ ನಾನೂ ಕಾಯುತ್ತಿದ್ದೇನೆ ಎಂದು ರಾಜ್‌ ಬಿ ಶೆಟ್ಟಿ ಹೇಳಿದ್ದಾರೆ.

25

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಕ್ಷಿತ್‌ ಸಿನಿಮಾವನ್ನು ಗಾಢವಾಗಿ ಪ್ರೀತಿಸುವ ಮನುಷ್ಯ. ಅವರಿಗೆ ಬೇಗ ಸಿನಿಮಾ ಮಾಡಿ ಅಂತ ಹೇಳಬೇಕಿದ್ದರೆ ನಾನು ಅವರಿಗಿಂತ ಜಾಸ್ತಿ ಕೆಲಸ ಮಾಡಬೇಕು.

35

ಇಲ್ಲವಾದರೆ ತಪ್ಪಾಗುತ್ತೆ. ಅವರು ಯಾವಾಗ ಸಿನಿಮಾ ಮಾಡಿದರೂ ಅದ್ಭುತವಾಗಿ ಮಾಡ್ತಾರೆ. ನಾನೂ ಒಬ್ಬ ಅಭಿಮಾನಿಯಾಗಿ ಅವರ ಸಿನಿಮಾಕ್ಕೆ ಕಾಯುತ್ತಿದ್ದೇನೆ ಎಂದಿದ್ದಾರೆ.

45

ಸದ್ಯದ ಸಿನಿಮಾರಂಗದ ಸ್ಥಿತಿ ಸುಧಾರಿಸಬೇಕು ಎಂದಾದರೆ ಸಿನಿಮಾರಂಗದಲ್ಲಿರುವವರು ಈ ಸಿನಿಮಾದಿಂದ ನಮಗೆ ಏನು ಲಾಭ ಅನ್ನೋದನ್ನು ಬಿಟ್ಟು ನಾವೇನು ಕೊಡಬಹುದು ಅನ್ನೋದನ್ನು ಯೋಚನೆ ಮಾಡಬೇಕು. ಕಂಟೆಂಟ್‌ಗೆ ಮಹತ್ವ, ಬರಹಗಾರರಿಗೆ ಮಾನ್ಯತೆ ಸಿಗಬೇಕು.

55

ಇಲ್ಲಿ ದುಡ್ಡು ಮಾಡೋದು ಮುಖ್ಯವೇ ಆದರೂ ಅದೇ ಎಲ್ಲವೂ ಅಲ್ಲ. ಅದಕ್ಕಿಂತ ದೊಡ್ಡದು ಒಂದೊಳ್ಳೆ ಕಥೆಯನ್ನು ಹೇಳುವಾಗ ಆಗುವ ಥ್ರಿಲ್ಲಿಂಗ್‌ ಅನುಭವ ಎಂದಿದ್ದಾರೆ.

Read more Photos on
click me!

Recommended Stories