Kantara ಸಿನಿಮಾ ವೀಕ್ಷಿಸಿ ಥ್ರಿಲ್ ಆದ ನಟಿ ರಮ್ಯಾ; ಕೊನೆಯಲ್ಲಿ ರಾಜ್‌ ಬಿ ಶೆಟ್ಟಿಗೊಂದು ಮಾತು

Published : Sep 30, 2022, 12:56 PM IST

ಅದ್ಧೂರಿಯಾಗಿ ಬಿಡುಗಡೆ ಆಯ್ತು ಕಾಂತಾರ ಸಿನಿಮಾ. ಹೊಂಬಾಳೆ ಫಿಲ್ಮ್ಸ್‌ ಇಷ್ಟೆಲ್ಲಾ ಹೇಗೆ ಮ್ಯಾನೇಜ್ ಮಾಡ್ತಾರೆ?

PREV
17
Kantara ಸಿನಿಮಾ ವೀಕ್ಷಿಸಿ ಥ್ರಿಲ್ ಆದ ನಟಿ ರಮ್ಯಾ; ಕೊನೆಯಲ್ಲಿ ರಾಜ್‌ ಬಿ ಶೆಟ್ಟಿಗೊಂದು ಮಾತು

 ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಜೋಡಿಯಾಗಿ ನಟಿಸಿರುವ ಈ ಚಿತ್ರದ ಪ್ರೀಮಿಯರ್ ಶೋ ಸೆಪ್ಟೆಂಬರ್ 29 ನಡೆದಿದೆ.

27

ಪ್ರೇಮಿಯರ್ ಶೋಗೆ ಕನ್ನಡ ಚಿತ್ರರಂಗ ಮೋಹಕ ತಾರೆ ರಮ್ಯಾ ಭಾಗಿಯಾಗಿದ್ದು ಇನ್‌ಸ್ಟಾಗ್ರಾಂನಲ್ಲಿ ಸೆಲ್ಫಿ ಹಂಚಿಕೊಳ್ಳುವ ಮೂಲಕ ಸಿನಿಮಾ ಹೇಗಿದೆ? ಏನೆಲ್ಲಾ ವಿಶೇಷತೆಗಳು ತುಂಬಿದೆ ಎಂದು ಬರೆದುಕೊಂಡಿದ್ದಾರೆ. 

37

'ಒಂದು ಅದ್ಭುತ ಸಿನಿಮಾ ನೋಡಿದಾಗ ಅದನ್ನು ವರ್ಣಿಸಲು ಪದಗಳು ಇರುವುದಿಲ್ಲ ಏಕೆಂದರೆ ನಿರೀಕ್ಷೆಗೂ ಮೀರಿದ ಫಲಿತಾಂಶ ಸಿಕ್ಕಿದೆ. ಈ ಸಾಲಿಗೆ ಕಾಂತಾರ ಸಿನಿಮಾ ಸೇರಿಕೊಳ್ಳುತ್ತದೆ.'

47

'ಈ ಸಿನಿಮಾವನ್ನು ನೀವು ನೋಡಿ ಎಕ್ಸಪೀರಿಯನ್ಸ್‌ ಮಾಡಬೇಕು. ಈ ಸಿನಿಮಾ ಮೂಲಕ ಭೂತ ಕೋಲ ಬಗ್ಗೆ ತಿಳಿದುಕೊಂಡಿರುವೆ. ಚಿತ್ರದ ಕೊನೆ 10 ಸಿನಿಮಾದಲ್ಲಿ ರಿಷಬ್ ತನ್ನ ಪ್ರದರ್ಶನದಲ್ಲಿ ದೈವಿಕ ಹಸ್ತಕ್ಷೇಪವನ್ನು ಹೊಂದಿದ್ದನು'

57

'ಸಿನಿಮಾ ನೋಡಿದ ಮೇಲೆ 100% ನನ್ನ ಮಾತು ಒಪ್ಪಿಕೊಳ್ಳುತ್ತೀರಿ. ರಿಷಬ್‌ ನಿಮ್ಮ ಪ್ರತಿಭೆ ಬಗ್ಗೆ ಹೇಳಲು ಆಗುವುದಿಲ್ಲ ಆದರೆ ಈ ಸಿನಿಮಾ ಮೂಲಕ ನಮ್ಮ ಹೆಮ್ಮ ತಂದಿದ್ದೀರಿ'

67

 'ಸಪ್ತಮಿ ಗೌಡ ನಿಮಗೆ ಸ್ಕ್ರೀನ್‌ ಅಪೀರಿಯನ್ಸ್‌ ಸೂಪರ್ ಆಗಿದೆ. ಇದು ನಿಮ್ಮ ಎರಡನೇ ಸಿನಿಮಾ ಅಂದ್ರೆ ಯಾರೂ ನಂಬುವುದಿಲ್ಲ. ಅದ್ಭುತವಾಗಿ ಅಭಿನಯಿಸಿದ್ದೀರಿ'

77

'ಹೊಂಬಾಳೆ ಫಿಲ್ಮ್ಸ್‌, ವಿಜಯ್ ಕಿರಗಂದೂರು ಮತ್ತು ಕಾರ್ತಿಕ್‌ ನೀವು ಹೇಗೆ ಪ್ರತಿ ಸಲವೂ ಇಷ್ಟೊಂದು ಅದ್ಭುತವಾದ ಸಿನಿಮಾ ಮಾಡಲು ಸಾಧ್ಯ? ಪ್ರಗತಿ ಶೆಟ್ಟಿ ನಿಮ್ಮ ಮೊದಲ ಸಿನಿಮಾ ಇದು ಚೆನ್ನಾಗಿ ಅಭಿನಯಿಸಿದ್ದೀರಿ.'ಕಾಂತಾರ ಸಿನಿಮಾ ತಪ್ಪದೆ ನೋಡಿ. ರಾಜ್‌ ಬಿ ಶೆಟ್ಟಿ ಸೂಪರ್ ಆಗಿ ಭೂತ ಕೋಲ ದೃಶ್ಯವನ್ನು ಸಂಯೋಜನೆ ಮಾಡಿದ್ದೀರಿ'

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories