ವಜ್ರಕಾಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶುಭ್ರಾ ಅಯ್ಯಪ್ಪ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಜನವರಿ 27, 2022ರಲ್ಲಿ ಶುಭ್ರಾ ಅಯ್ಯಪ್ಪ ತಮ್ಮ ಆಪ್ತ ಸ್ನೇಹಿತ ವಿಶಾಲ್ ಶಿವಪ್ಪ ಲವ್ ಪ್ರೊಪೋಸಲ್‌ನ ಒಪ್ಪಿಕೊಂಡಿರುವುದಾಗಿ ಪೋಸ್ಟ್ ಹಾಕಿದ್ದರು.
ಸದ್ಯ ವರ್ಕೌಟ್, ಮಾಡಲಿಂಗ್ ಮಾಡುತ್ತಾ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿರುವ ಶುಭ್ರಾ ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೋ ಹಂಚಿಕೊಂಡು ನೆಟ್ಟಿಗರ ನಿದ್ರೆ ಗೆಡಿಸಿದ್ದಾರೆ.
ಕಡಲ ತೀರದಲ್ಲಿ ಬ್ಲ್ಯಾಕ್ ಹಾಟ್ ಬಿಕಿನಿ ಧರಿಸಿ 'ನನ್ನ ದಿನಗಳನ್ನು ಹೀಗೆ ಕಳೆಯುವುದಕ್ಕೆ ಇಷ್ಟ ಪಡುವೆ' ಎಂದು ಬರೆದುಕೊಂಡಿದ್ದಾರೆ. ನಟಿ ತಾನ್ಯಾ ಹೋಪ್ ಸೇರಿದಂತೆ ಅನೇಕು ಸೂಪರ್ ಆಗಿದೆ ಹಾಟ್ ಆಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
2014ರಲ್ಲಿ ಪ್ರತಿನಿಧಿ ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟ ಶುಭ್ರಾ.2015ರಲ್ಲಿ ಸಪ್ತಮಿ ಚಿತ್ರದಲ್ಲಿ ಪ್ರಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವಜ್ರಕಾಯ ಚಿತ್ರದಲ್ಲಿ ಗೀತಾ ಪಾತ್ರದಲ್ಲಿ ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ಮಿಂಚಿದ್ದಾರೆ.ಕೆಲವು ತಿಂಗಳ ಹಿಂದೆ 30 ಕೆಜಿ ಸೂಟ್‌ಕೇಸ್ ಎತ್ತಿ, ವರ್ಕೌಟ್ ಮಾಡಿದ ವಿಡಿಯೋ ವೈರಲ್ ಆಗಿತ್ತು.