60ರಲ್ಲೂ 27ರ ಚಾರ್ಮ್… ಚಂದನವನದ ಸುರಸುಂದರ ರಮೇಶ್ ಅರವಿಂದ್’ಗೆ ವಯಸ್ಸು ಆಗೋದೇ ಇಲ್ವಾ?

First Published | Sep 9, 2024, 10:07 PM IST

ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಸೆಪ್ಟೆಂಬರ್ 10ಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, 60ರ ವಯಸ್ಸಲ್ಲೂ ಎವರ್ ಗ್ರೀನ್ ಆಗಿರುವ ರಮೇಶ್ ಲುಕ್ ಗೆ ಹೆಂಗಳೆಯರು ಸಹ ಫಿದಾ ಆಗಿದ್ದಾರೆ. 
 

ಚಂದನವನದ ಎವರ್ ಗ್ರೀನ್ ನಾಯಕ ರಮೇಶ್ ಅರವಿಂದ್ (Ramesh Aravind). ಇದೀಗ 60ನೇ ವರ್ಷಕ್ಕೆ ಕಾಲಿಡುತ್ತಿರುವ ರಮೇಶ್ ಅರವಿಂದ್, ಹೊಸ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದು, ಇವರನ್ನ ನೋಡಿದ್ರೆ ಯಾರ್ ತಾನೆ ಹೇಳ್ತಾರೆ, ಇವರಿಗೆ 60 ವರ್ಷ ಆಗಿದೆ ಅಂತ. 
 

ಸ್ಯಾಂಡಲ್’ವುಡ್ ನ ಎವರ್ ಗ್ರೀನ್ ನಟ (evergreen actor) ಅಂತಾನೆ ಹೆಸರು ಪಡೆದಿರುವ ರಮೇಶ್ ಅರವಿಂದ್ 1964ರಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದರು. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ರಮೇಶ್, ಕರಿಯರ್ ಕಂಡುಕೊಂಡದ್ದು, ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕ, ಸ್ಕ್ರೀನ್ ರೈಟರ್ ಆಗಿದೆ. 
 

Tap to resize

ರಮೇಶ್ ಅರವಿಂದ್ ತಮ್ಮ ಸಿನಿಮಾ ಜರ್ನಿ (cinema journey) ಆರಂಭಿಸಿದ್ದು 1986ರಲ್ಲಿ ಸುಂದರ ಸ್ವಪ್ನಗಳು ಸಿನಿಮಾ ಮೂಲಕ, ಇವರು ಮೌನ ಗೀತೆ, ಪಂಚಮ ವೇದ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುವಾಗ , ಆ 22ನೇ ವಯಸ್ಸಿನಲ್ಲಿ ಹೇಗೆ ಹ್ಯಾಂಡ್ಸಮ್ ಆಗಿದ್ದರೋ, ಈಗಲೂ ತಮ್ಮ 60ನೇ ವಯಸ್ಸಲ್ಲೂ ಅದೇ ಚಾರ್ಮಿಂಗ್ ಕಾಪಾಡಿಕೊಂಡು ಬಂದಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ರಮೇಶ್ ಅರವಿಂದ್ ಹಾಕಿರೋ ಫೋಟೊಗಳನ್ನು ನೋಡಿ ಹೆಣ್ಣು ಮಕ್ಕಳು ಸಹ ಫಿದಾ ಆಗಿದ್ದು, ನಿಮಗೆ ವಯಸ್ಸು ಆಗಲ್ವಾ ಸರ್? ನಿಜವಾಗಲೂ ಆ ದೇವರ ಆಶೀರ್ವಾದ ನಿಮಗೆ ಸದಾ ಹೀಗೆ ಇರಲಿ. ನಿಮ್ಮ ವಯಸ್ಸು ಯಾಕೆ ಹಿಂದೆ ಓಡುತ್ತಿದೆ, ಎವರ್ ಗ್ರೀನ್ ಹೀರೋ....ಹುಡ್ಗಿರಿಗೆ ಅಷ್ಟೇ ಅಲ್ಲ ಹುಡ್ಗರಿಗೂ ಹೊಟ್ಟೆ ಉರಿ ಇವರಿಗೆ ವಯಸ್ಸು ಆಗ್ತಾನೆ ಇಲ್ಲಾ ಅಂತ ಸೂಪರ್ ಸರ್, ಆ ಕಾಲ ನಮ್ಮ ಕಾಲ ಮುಂದಿನ ಕಾಲಕ್ಕೂ ಚಿರಯುವಕ ಎಂದು ಹಾಡಿ ಹೊಗಳಿದ್ದಾರೆ. 
 

ಇನ್ನೂ ಕೆಲವರು ಕಾಮೆಂಟ್ ಮಾಡಿ ಏನ್ ಸರ್ 27 ವರ್ಷದ ಹುಡುಗನಂತೆ ಕಾಣುತ್ತೀರಾ. ಹೊಟ್ಟೆಗೇನ್ ತಿಂತಿರಾ ನೀವು...!? ಇಷ್ಟೊಂದು ಕ್ಯೂಟಾಗಿದಿರಲ್ಲ. ಸ್ಯಾಂಡಲ್ ವುಡ್ ನ (sandalwood actor) ಚಿರಯುವಕ, ನೀವು ರೀಲ್ ನಲ್ಲಿ ಮಾತ್ರವಲ್ಲ, ರಿಯಲ್ ಆಗಿ ಕೂಡ ಹೀರೋ. ಪಂಚಮ ವೇದದಲ್ಲೂ ನೀವು ಹೇಗೆ ಕಾಣಿಸ್ತಿದ್ರೋ, ಇವತ್ತೂ ಕೂಡ ಹಾಗೇ ಕಾಣಿಸ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ. 
 

ಸೆಪ್ಟೆಂಬರ್ 10ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಮೇಶ್ ಅರವಿಂದ್, ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊ ಶೂಟ್ ಶೇರ್ ಮಾಡ್ಕೊಂಡು, ಅದರ ಜೊತೆಗೆ ನನ್ನ ಜೀವನದ ಇನ್ನೊಂದು ವರ್ಷವು ಮುಂದಿನ ಸೂರ್ಯೋದಯದೊಂದಿಗೆ ಆರಂಭವಾಗುವ ಮೊದಲು, ಈ ದಶಕದ ಬಾಗಿಲುಗಳನ್ನು ಮುಚ್ಚಲು ಇಂದಿನ ಕ್ಷಣಗಳನ್ನು ಫ್ರೀಜ್ ಮಾಡುತ್ತೇನೆ ಎಂಬುದಾಗಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
 

ಈಗಾಗಲೇ ಕನ್ನಡ, ತಮಿಳು, ಹಿಂದಿ ಸಿನಿಮಾ ಸೇರಿ ಒಟ್ಟು ನೂರಕ್ಕೂ ಹೆಚ್ಚು ಸಿನಿಮಾ ಮಾಡಿರುವ ರಮೇಶ್ ಅರವಿಂದ್, ಇದೀಗ ಗಣೇಶ್ (Golden Star Ganesh) ಜೊತೆ ಯುವರ್ ಸಿನ್ಸಿಯರ್ಲಿ ರಾಮ್ ಎನ್ನುವ ಸಿನಿಮಾ ಮಾಡಲಿದ್ದಾರೆ. ಸಿನಿಮಾದ ಟೀಸರ್ ಶುಕ್ರವಾರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಈ ಟೀಸರ್ ಸಿಕ್ಕಾಪಟ್ಟೆ ಇಷ್ಟವಾಗಿದೆ, ಅಲ್ಲದೆ ರಮೇಶ್ ಮತ್ತು ಗಣೇಶ್ ಕಾಂಬಿನೇಶನ್ ಕೂಡ ಸಖತ್ತಾಗಿದೆ ಎಂದು ಜನರು ಹೊಗಳುತ್ತಿದ್ದಾರೆ. 
 

Latest Videos

click me!