ಟ್ರೆಂಡಿಂಗ್‌ನಲ್ಲಿರುವ ರಫೆಲ್‌ ಸೀರೆಯುಟ್ಟು ಬಿಂದಾಸ್‌ ಲುಕ್‌ ಕೊಟ್ಟ ಉಪ್ಪಿಯ ಟ್ರೋಲ್ ಹುಡುಗಿ ರೀಷ್ಮಾ ನಾಣಯ್ಯ

First Published | Sep 9, 2024, 9:49 PM IST

ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ಮಿಂಚಿತ್ತಿರುವ ಕೊಡಗಿನ ಚೆಲುವೆ ರೀಷ್ಮಾ ನಾಣಯ್ಯ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ.

‘ಟ್ರೋಲಾಗುತ್ತೆ ಎಲ್ಲ ಟ್ರೋಲಾಗುತ್ತೆ’ ಅಂತ ಉಪೇಂದ್ರ ಅವರ ‘ಯುಐ’ ಸಿನಿಮಾದಲ್ಲಿ ಸ್ಟೆಪ್‌ ಹಾಕಿದ್ದ ಬೆಡಗಿ ರೀಷ್ಮಾ ನಾಣಯ್ಯ ಇದೀಗ ಬಿಂದಾಸ್‌ ಆಗಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈಕೆ ಉಟ್ಟ ರಫೆಲ್‌ ಸೀರೆ ಇದೀಗ ಮತ್ತೆ ಟ್ರೆಂಡಿಂಗ್‌ನಲ್ಲಿದೆ.

ಹಾಗೆ ನೋಡಿದರೆ ರಫೆಲ್‌ ಸೀರೆ ಅನೇಕ ಸೆಲೆಬ್ರಿಟಿಗಳ ಫೇವರಿಟ್‌. ಇದನ್ನು ಮೊದಲೇ ಸ್ಟಿಚ್‌ ಮಾಡಿರೋ ಕಾರಣ ನೆರಿಗೆ ಹಿಡಿಯುವ, ಸೆರಗು ಸರಿ ಮಾಡುವ ಪ್ರಶ್ನೆಯೇ ಇರಲ್ಲ. ಉಳಿದ ಡ್ರೆಸ್‌ಗಳ ಹಾಗೆ ತೊಟ್ಟು ಮೈ ಚಳಿ ಬಿಟ್ಟು ಓಡಾಡಬಹುದು. 

Tap to resize

ಇನ್ನು ಟ್ರಾಫಿಕ್‌ನಲ್ಲೂ ಟೈಮ್‌ ಸಿಕ್ಕರೆ ಸೆಲ್ಫಿ ಹೊಡೆಯೋ ರೀಷ್ಮಾಗೆ ಇಂಥಾ ಟ್ರೆಂಡಿ ಡ್ರೆಸ್‌ ಸಿಕ್ಕರೆ ಕೇಳಬೇಕಾ? ಅರಶಿನ ಬಣ್ಣದ ಸೀರೆ, ಹಳದಿ ಕಪ್ಪು ಮಿಶ್ರಿತ ಬ್ಲೌಸ್‌ನಲ್ಲಿ ಬಳ್ಳಿಯಂತೆ ಬಳುಕುತ್ತಾ ಕ್ಯಾಮರಾ ಮುಂದೆ ನಿಂತರು. ಈ ಸ್ಟೈಲ್‌ ಅನ್ನು ಇವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
 

ರೀಷ್ಮಾ ನಾಣಯ್ಯ ನಿರ್ದೇಶಕ ಪ್ರೇಮ್ ಅವರ ಏಕ್ ಲವ್ಯಾ ಸಿನಿಮಾ ಮೂಲಕ ಕನ್ನಡ ಸಿನಿಮಾ ಜಗತ್ತಿಗೆ ಎಂಟ್ರಿಕೊಟ್ಟರು, ಅದಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. 

ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ರೀಷ್ಮಾ, ಎಕ್ ಲವ್ಯಾ, ರಾಣಾ, ಸ್ಪೂಕಿ ಕಾಲೇಜ್, ಬಾನ ದಾರಿಯಲ್ಲಿ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೂ ಸ್ಕ್ರೀನ್ ಹಂಚಿಕೊಂಡಿದ್ದಾರೆ ಈ ಚೆಲುವೆ. 

ಸದ್ಯ ಬಿಡುಗಡೆಯಾಗಬೇಕಿರುವ ಹೆಚ್ಚು ಕುತೂಹಲ ಹುಟ್ಟಿಸಿರುವ ವಾಮನ, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ, ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ ರೀಷ್ಮಾ. 

Latest Videos

click me!