ಕ್ಲಿವೇಜ್ ಕಾಣಿಸುವಂತೆ ಪೋಸ್ ಕೊಟ್ಟ ಗಾಳಿಪಟ ಬೆಡಗಿ ಭಾವನಾ ರಾವ್… ಸಖತ್ ಹಾಟ್ ಅಂತಿದ್ದಾರೆ ಫ್ಯಾನ್ಸ್

First Published | Sep 6, 2024, 6:42 AM IST

ಗಾಳಿಪಟ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಬೆಡಗಿ ಭಾವನಾ ರಾವ್ ತಮ್ಮ ಹೊಸ ಫೋಟೊ ಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. 
 

ಕನ್ನಡದ ಸೂಪರ್ ಡೂಪರ್ ಹಿಟ್ ಸಿನಿಮಾ ಗಾಳಿಪಟದಲ್ಲಿ ಪಾವ್ನಿ ಎಂಬ ಹುಡುಗಾಟದ ಹುಡುಗಿಯ ಪಾತ್ರದ ಮೂಲಕ ಗಮನ ಸೆಳೆದ ನಟಿ ಭಾವನಾ ರಾವ್ (Bhavana Rao). 
 

ಡ್ಯಾನ್ಸರ್ ಹಾಗೂ ನಟಿಯಾಗಿ ಗುರುತಿಸಿಕೊಂಡ ಶಿವಮೊಗ್ಗದ ಬೆಡಗಿ ಭಾವನಾ ರಾವ್ ನಟಿಯಾಗಿ ಪಾದಾರ್ಪಣೆ ಮಾಡಿದ ಚಿತ್ರವೇ  ಗಾಳಿಪಟ (Galipata). ಮೊದಲ ಚಿತ್ರದ ಮೂಲಕವೇ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು ನಟಿ ಭಾವನಾ. 
 

Tap to resize

ಬಹುತಾರಾಗಣದ ಚಿತ್ರದಲ್ಲಿ ಭಾವನಾ, ರಾಜೇಶ್ ಕೃಷ್ಣನ್ ಅವರಿಗೆ ಜೋಡಿಯಾಗಿ ನಟಿಸಿದ್ದರು. ನಂತರ ತಮಿಳು, ಹಿಂದಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರೂ ಸಹ ಭಾವನಾ ರಾವ್ ಇಂದಿಗೂ ಪಾವ್ನಿ ಪಾತ್ರದಿಂದಲೇ ಜನಮನದಲ್ಲಿದ್ದಾರೆ. 
 

ಇದೀಗ ಭಾವನಾ ಹೊಸ ಫೋಟೊ ಶೂಟ್ ಮಾಡಿಸಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೊಟೊಗಳನ್ನು ಶೇರ್ ಮಾಡಿಕೊಂಡಿದ್ದು, ಗೊಂಬೆಯಂತೆ ಕಾಣಿಸುತ್ತಿದ್ದರೂ, ಜನರು ಅವರ ಹಾಟ್ನೆಸ್ ಗೆ ಸೋತಿದ್ದಾರೆ. 
 

ಬಣ್ಣ, ಬಣ್ಣದ ಪ್ಲೋರಲ್ ಡಿಸೈನ್ ಇರುವ ಬಿಳಿ ಬಣ್ಣದ ಸ್ಟ್ರಾಪ್ ಡ್ರೆಸ್ ಧರಿಸಿರುವ ಭಾವನಾ ರಾವ್, ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹಾಟ್ನೆಸ್ ನೋಡಿ ಪಡ್ಡೆಗಳು ಏನೇನೋ ಕಾಮೆಂಟ್ ಮಾಡಿದ್ದಾರೆ. 
 

ತಮ್ಮ ಕ್ಲೀವೇಜ್ ಕಾಣಿಸುವಂತೆ ಡೀಪ್ ನೆಕ್ ಡ್ರೆಸ್ ಧರಿಸಿರುವ ಭಾವನಾ ರಾವ್, All dolled up for you ಎಂದು ಕ್ಯಾಪ್ಶನ್ ಹಾಕಿದ್ದು, ಗಾಳಿಪಟ ಬೆಡಗಿಯ ಈ ಫೋಟೊಗಳು ಸಖತ್ ವೈರಲ್ ಆಗ್ತಿವೆ. 
 

ಹಾಟ್ನೆಸ್ ಓವರ್ ಲೋಡೆಡ್ (hotness overloaded), ತುಂಬಾನೆ ಹಾಟ್ ಮತ್ತು ಸೆಕ್ಸಿಯಾಗಿ ಕಾಣಿಸ್ತಿದ್ದೀರಿ, ನಿಮ್ಮ ನಗು ಚೆನ್ನಾಗಿದೆ, ನಿಮ್ಮ ಕಣ್ಣು ಚೆನ್ನಾಗಿದೆ, ಫೈರ್, ಎಂದೆಲ್ಲಾ ಪಡ್ಡೆಗಳು ಕಾಮೆಂಟ್ ಮಾಡಿದ್ರೆ, ಇನ್ನೊಬ್ಬರು ಯಾಕ್ ಮೇಡಂ ಹೀಗಾಂದ್ರಿ ಅಂತಾನೂ ಕೇಳಿದ್ದಾರೆ. 
 

Latest Videos

click me!