ಕನ್ನಡ ಕಿರುತೆರೆಯ ಜನಪ್ರಿಯ ರಾಮಾಚಾರಿ ಧಾರಾವಾಹಿಯಲ್ಲಿ ಕೆಲವು ದಿನಗಳ ಕಾಲ ರುಕ್ಕು ಪಾತ್ರದಲ್ಲಿ ನಟಿಸಿದ್ದ ನಟಿ ದೇವಿಕಾ ಭಟ್, ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ದೊಡ್ಡದಾಗಿ ಕಂ ಬ್ಯಾಕ್ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ರಾಮಾಚಾರಿ’ಯಲ್ಲಿ ಕೃಷ್ಣನ ಪಾತ್ರ ಬಂದಾಗ, ಕಾಣಿಸಿಕೊಂಡ ಮತ್ತೊಂದು ಪಾತ್ರ ಅಂದ್ರೆ ಅದು ರುಕ್ಕು ಪಾತ್ರ. ಈ ಪಾತ್ರದಲ್ಲಿ ಆರಂಭದಲ್ಲಿ ‘ದೇವಿಕಾ ಭಟ್’ ಎನ್ನುವ ಹೊಸ ನಟಿ ನಟಿಸಿದ್ದರು. ಆದರೆ ಕೆಲವು ಎಪಿಸೋಡ್ ಗಳ ನಂತರ ಧಾರಾವಾಹಿಯಿಂದ ಹೊರಬಂದಿದ್ದ ನಟಿ ಇದೀಗ ದೊಡ್ಡದಾಗಿ ಸದ್ದು ಮಾಡ್ತಿದ್ದಾರೆ.
26
ದೇವಿಕಾ ಭಟ್
ದೇವಿಕಾ ಭಟ್ ರಾಮಾಚಾರಿ ಧಾರಾವಾಹಿಯಲ್ಲಿ ಕೆಲವೇ ಕೆಲವು ಎಪಿಸೋಡ್ ಗಳಲ್ಲಿ ನಟಿಸಿದ್ದರು ಸಹ, ಜನ ಆ ಪಾತ್ರವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ರುಕ್ಕುವಿನ ಅಂದ, ಚೆಂದ, ಮಾತಿಗೆ ಫಿದಾ ಆಗಿದ್ದರು. ಇದೀಗ ಹೊಸ ಸಿನಿಮಾದಲ್ಲಿ ದೇವಿಕಾ ಭಟ್ ನಟಿಸುತ್ತಿದ್ದಾರೆ.
36
ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟನೆ
ಯುಗಾದಿ ಹಬ್ಬದ ಪ್ರಯುಕ್ತ, ಗೋಲ್ಡನ್ ಸ್ಟಾರ್ ಗಣೇಶ್ ನಟಿಸಲಿರುವ ಹೊಸ ಚಿತ್ರ ‘ಬೃಂದಾವಿಹಾರಿ’ ಪೋಸ್ಟರ್ ರಿಲೀಸ್ ಆಗಿತ್ತು. ಈ ಪೋಸ್ಟರ್ ನಲ್ಲಿ ಗಣೇಶ್ ಜೊತೆ ದೇವಿಕಾ ಭಟ್ ಕಾಣಿಸಿಕೊಂಡಿದ್ದು, ದೇವಿಕಾ ಭಟ್ ತಮ್ಮ ಮೊದಲ ಸಿನಿಮಾದಲ್ಲೇ ಗಣೇಶ್ ಜೊತೆ ನಟಿಸುವ ಗೋಲ್ಡನ್ ಅವಕಾಶ ಪಡೆದುಕೊಂಡಿದ್ದಾರೆ.
ಯುಗಾದಿ ಹಬ್ಬದ ದಿನ ಈ ಸಂಭ್ರಮವನ್ನು ಹಂಚಿಕೊಂಡ ದೇವಿಕಾ ಭಟ್ ‘ಈ ಯುಗಾದಿ ನನ್ನ ಹೃದಯಕ್ಕೆ ವಿಶೇಷವೆನಿಸುತ್ತದೆ... ಹೊಸ ಉತ್ಸಾಹ, ಹೊಸ ಸಂತೋಷ ಮತ್ತು ಅಂತ್ಯವಿಲ್ಲದ ಭರವಸೆಗಳ ಋತು! ನಾನು ಊಹಿಸಿದ್ದಕ್ಕಿಂತ ಮೀರಿ ಎಲ್ಲವೂ ಪ್ರಾರಂಭವಾಯಿತು, ಮತ್ತು ಈಗ ಅದು ನಾನು ಪ್ರತಿದಿನ ಕಾಣುತ್ತಿದ್ದ ಕನಸುಗಳಿಗೆ ಹತ್ತಿರವಾಗುತ್ತಿದೆ ಮತ್ತು ಇಂದು, ನನ್ನ ಚೊಚ್ಚಲ ಚಿತ್ರ “ಬೃಂದಾವಿಹಾರಿ” ಯ ಟೈಟಲ್ ಪೋಸ್ಟರ್ ಅನ್ನು ಹಂಚಿಕೊಳ್ಳಲು ನಾನು ಎಕ್ಸೈಟ್ ಆಗಿದ್ದೇನೆ. ! ಎಂದಿದ್ದಾರೆ.
56
ಪ್ರೀತಿ ಬೆಂಬಲ ಇರಲಿ ಎಂದ ನಟಿ
ಈ ಯೋಜನೆಗೆ ನಾನು ನಮ್ಮ ಹೃದಯ ಮತ್ತು ಆತ್ಮ ಎರಡನ್ನೂ ಅರ್ಪಿಸಿದ್ದೇವೆ ಮತ್ತು ಇದು ಪ್ರೀತಿ, ಸಮರ್ಪಣೆ ಮತ್ತು ತಂಡದ ಕೆಲಸದ ಸುಂದರ ಪ್ರಯಾಣವಾಗಿದೆ. ನಿಮಗೆ ಹೆಚ್ಚು ಹೆಚ್ಚು ರೋಮಾಂಚಕಾರಿ ಸುದ್ದಿಗಳನ್ನು ತರಲು ನಾವು ಸಿದ್ಧರಿದ್ದೇವೆ. ನಮ್ಮ ಇಡೀ ತಂಡಕ್ಕೆ ನೀವು ಸಾಕಷ್ಟು ಪ್ರೀತಿ ಮತ್ತು ಬೆಂಬಲವನ್ನು ನೀಡುತ್ತೀರಿ ಎಂದು ನಾವು ಭಾವಿಸುತ್ತೇವೆ !! ಎಂದು ಹೇಳಿದ್ದಾರೆ ದೇವಿಕಾ ಭಟ್.
66
ದೇವಿಕಾಗೆ ರಾಮಾಚಾರಿ ಖ್ಯಾತಿಯ ರಿತ್ವಿಕ್ ಕೃಪಾಕರ್ ವಿಶ್
ನಮ್ಮ ಪ್ರೀತಿಯ ಗೋಲ್ಡನ್ ಸ್ಟಾರ್ ಗಣೇಶ್ ಸರ್ ಅವರ ಚಿತ್ರವನ್ನು ನೋಡುವ ಕಾಯುವಿಕೆ ಬಹುತೇಕ ಮುಗಿದಿದೆ, ಮತ್ತು ನೀವೆಲ್ಲರೂ ಶೀಘ್ರದಲ್ಲೇ ಅದನ್ನು ವೀಕ್ಷಿಸಲು ತಯಾರಾಗಿ, ನಿಮ್ಮ ಮುಂದೆ ಬರಲು ಕಾಯುತ್ತಿದ್ದೇನೆ. ! Your love means the world to us, always ಎಂದು ಅಭಿಮಾನಿಗಳಿ ಕೃತಜ್ಞತೆ ಸಲ್ಲಿಸಿದ್ದಾರೆ. ದೇವಿಕಾ ಭಟ್ ಗೆ ರಾಮಾಚಾರಿ ನಟ ರಿತ್ವಿಕ್ ಕೃಪಾಕರ್ ಶುಭಾಶಯ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.