Ugadi Celebration: ಯುಗಾದಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಸಿನಿಮಾ ತಾರೆಯರು ಕೂಡ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ತಮ್ಮ ಕೈಯಾರೆ ಒಬ್ಬಟ್ಟು ಮಾಡಿ, ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಇಂದು ರಾಜ್ಯಾದ್ಯಂತ ಸಂಭ್ರಮದ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ಚಿತ್ರರಂಗದ ತಾರೆಯರು ಸಹ ಅದ್ಧೂರಿಯಾಗಿ ಹೊಸ ವರ್ಷವನ್ನು ಆಚರಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಸಹ ತಮ್ಮ ಕುಟುಂಬದೊಂದಿಗೆ ಅದ್ಧೂರಿಯಾಗಿ ಹಬ್ಬ ಆಚರಿಸಿದ್ದಾರೆ.
26
ಶ್ರೀಮುರಳಿ ಯುಗಾದಿ ಹಬ್ಬ
ನಟ ಶ್ರೀಮುರಳಿ ತಮ್ಮ ಮನೆಯಲ್ಲಿ ಯುಗಾದಿ ಹಬ್ಬ ಆಚರಿಸುವ ಫೋಟೊಗಳನ್ನು ಶೇರ್ ಮಾಡಿ, ನಿಮ್ಮ ಜೀವನಕ್ಕೆ ಹೊಸ ಬೆಳಕು, ಹೊಸ ಉತ್ಸಾಹ ಬರಲಿ. ಯುಗಾದಿ ಹಬ್ಬದ ಶುಭಾಶಯಗಳು. Festivals taste better when made with love. I made the best Obattu! ಎಂದಿದ್ದಾರೆ.
36
ಕೈಯ್ಯಾರೆ ಒಬ್ಬಟ್ಟು ಮಾಡಿದ ಶ್ರೀಮುರಳಿ
ನಟ ಶ್ರೀಮುರಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು, ತಾವೇ ಅಡುಗೆ ಕೋಣೆಗೆ ಹೋಗಿ ಪತ್ನಿ ಜೊತೆ ತಾವು ಕೂಡ ಕೈಯ್ಯಾರೆ ಒಬ್ಬಟ್ಟು ತಟ್ಟಿ, ಒಬ್ಬಟ್ಟು ಮಾಡಿ ಬಳಸಿದ್ದಾರೆ. ತಾವು ಒಬ್ಬಟ್ಟು ಮಾಡುವ ಫೋಟೊ ಕೂಡ ಹಂಚಿಕೊಂಡಿದ್ದಾರೆ.
ಶ್ರೀಮುರಳಿ ಪತ್ನಿ ವಿದ್ಯಾ ತಮ್ಮ ಪತಿ ಒಬ್ಬಟ್ಟು ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಜೊತೆಗೆ ಅಮ್ಮನಿಗಾಗಿ ಮಾಡಿರುವುದು ಎಂದು ಸಹ ಹೇಳಿದ್ದಾರೆ. ವಿಡಿಯೋದಲ್ಲಿ ಮುರಳಿ, ಒಬ್ಬಟ್ಟು ತಟ್ಟುತ್ತಾ, ಅದನ್ನ ಹೇಗೆ ಮಾಡೋದು ಅನ್ನೋದನ್ನು ವಿವರಣೆ ಕೊಟ್ಟಿದ್ದಾರೆ.
56
3 ಒಬ್ಬಟ್ಟಿಗೆ ಕಾಂಪ್ಲಿಮೆಂಟ್ ಬೇಕಂತೆ
ವಿದ್ಯಾ ಶ್ರೀಮುರಳಿ ಎಲ್ಲರಿಗೂ ಯುಗಾದಿ ಶುಭಾಶಯ ತಿಳಿಸುತ್ತಾ, ಮುರಳಿ ತನ್ನ ಅಮ್ಮನಿಗಾಗಿ ನಿಖರವಾಗಿ 3 ಒಬ್ಬಟ್ಟುಗಳನ್ನು ಮಾಡಿದ್ದಾರೆ, ಜೊತೆಗೆ ಅವರ ಕಠಿಣ ಪರಿಶ್ರಮಕ್ಕೆ ಪ್ರಶಂಸೆಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಬರೆದುಕೊಂಡು, ಗಂಡನ ಕಾಲೆಳೆದಿದ್ದಾರೆ.
66
ಗಂಡ-ಹೆಂಡತಿಯ ಮುದ್ದಾದ ಫೋಟೊ
ಶ್ರೀಮುರಳಿ, ತಮ್ಮ ಪತ್ನಿ ಜೊತೆಗಿನ ಮುದ್ದಾದ ಫೋಟೋ, ಬೇವು -ಬೆಲ್ಲ, ಪಚಡಿ ಸವಿಯುವ ಫೋಟೊ ಹಾಗೂ ಒಬ್ಬಟ್ಟು ಮಾಡುತ್ತಿರುವ, ರೆಡಿಯಾದ ಒಬ್ಬಟ್ಟಿನ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.