‘ಸು ಫ್ರಂ ಸೋ’ ಸಿನಿಮಾದ ಗೆಲುವಿನ ಓಟ ವಾರದ ದಿನಗಳಲ್ಲೂ ಮುಂದುವರಿದಿದೆ. ಸೋಮವಾರ, ಮಂಗಳವಾರ ಹೆಚ್ಚಿನೆಲ್ಲಾ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ. ಸಿನಿಮಾ ಬಿಡುಗಡೆಯಾದ ಐದನೇ ದಿನಕ್ಕೆ ಚಿತ್ರದ ಗಳಿಕೆ 13 ಕೋಟಿ ದಾಟಿದೆ ಎನ್ನಲಾಗಿದೆ.
25
ಈ ಸಿನಿಮಾದ ತೆಲುಗು ಡಬ್ಬಿಂಗ್ ವರ್ಶನ್‌ಗೆ ಬೇಡಿಕೆ ಬಂದಿದ್ದು, ಅತ್ಯಂತ ಪ್ರಸಿದ್ಧ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಆ.7ರಂದು ಈ ಸಿನಿಮಾ ರಿಲೀಸ್ ಮಾಡಲಿದೆ. ತಮಿಳು ವರ್ಶನ್ ಬಿಡುಗಡೆಗೂ ಬೇಡಿಕೆ ಕೇಳಿಬಂದಿದೆ.
ಇನ್ನೊಂದೆಡೆ ಸಿನಿಮಾ ಬಗ್ಗೆ ಮಾತನಾಡಿರುವ ರಾಜ್ ಬಿ. ಶೆಟ್ಟಿ, ಈ ಸಿನಿಮಾದ ಸೀಕ್ವೆಲ್ ಮಾಡುವ ಯೋಚನೆ ಇಲ್ಲ. ಅದು ನಮ್ಮ ನೈತಿಕತೆಗೆ ವಿರುದ್ಧವಾಗುತ್ತದೆ. ಮುಂದಿನ ಬಾರಿ ನಾವು ಹೊಸ ರೀತಿಯ ಸಿನಿಮಾ ಮಾಡುತ್ತೇವೆ.
55
ಅದನ್ನು ನೋಡಲು ಬರುವಾಗ ಈ ಸಿನಿಮಾದ ಮೇಲಿನ ನಿರೀಕ್ಷೆಯಿಂದ ಬರುವುದು ಬೇಡ. ಆ ಸಿನಿಮಾ ಗೆಲ್ಲುತ್ತದೋ ಇಲ್ಲವೋ ಬೇರೆ ಮಾತು. ಆದರೆ ಪ್ರಾಮಾಣಿಕ ಪ್ರಯತ್ನವಂತೂ ಇದ್ದೇ ಇರುತ್ತದೆ ಎಂದಿದ್ದಾರೆ.