ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ನಟಿ ರಾಗಿಣಿ ದ್ವಿವೇದಿ, ದರ್ಶನ್ ಅಭಿನಯದ 'ದಿ ಡೆವಿಲ್' ಚಿತ್ರದ ಪಾತ್ರವನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. ಅಲ್ಲದೆ, ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಬಗ್ಗೆಯೂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ದರ್ಶನ ನಟನೆಯ ದಿ ಡೆವಿಲ್ (The Devil) ಚಿತ್ರ ಈ ತಿಂಗಳ 11ರಂದು ಬಿಡುಗಡೆಯಾಗಿದ್ದು, ಚಿತ್ರ ಚೆನ್ನಾಗಿ ಓಡುತ್ತಿದೆ. ಇದರ ನಡುವೆಯೇ, ತುಪ್ಪದ ಬೆಡಗಿ ಎಂದೇ ಫೇಮಸ್ ಆಗಿರೋ ನಟಿ ರಾಗಿಣಿ ದ್ವಿವೇದಿ ಅವರು ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಅವರು ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
26
ಸುದೀಪ್ ಮತ್ತು ದರ್ಶನ್ ಫ್ಯಾನ್ಸ್ ವಾರ್
ಸ್ಯಾಂಡಲ್ವುಡ್ ಪ್ರಿಯರಿಗೆ ತಿಳಿದಿರುವಂತೆ ಸುದೀಪ್ ಮತ್ತು ದರ್ಶನ್ ಅವರ ಅಭಿಮಾನಿಗಳಿಂದ ವಾರ್ ಶುರುವಾಗಿದೆ (Sudeep and Darshan Fans war) ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಇದೇ ತಿಂಗಳು 25ಕ್ಕೆ ಸುದೀಪ್ ಅವರ 'ಮಾರ್ಕ್' ಸಿನಿಮಾ ಬಿಡುಗಡೆ ಆಗ್ತಿದೆ. ಅದೇ ದಿನ ದರ್ಶನ್ ಫ್ಯಾನ್ಸ್ ಈ ಸಿನಿಮಾಗೆ ಪೈಪೋಟಿ ಕೊಡೋಕೆ, ದರ್ಶನ್ ಅವರ 'ಡೆವಿಲ್' ಸಿನಿಮಾವನ್ನ ಹೌಸ್‌ಫುಲ್ ಮಾಡೋಕೆ ನಿರ್ಧರಿಸಿರೋ ಕಾರಣದಿಂದ ಶುರುವಾಗ ಈ ಕಿಚ್ಚು ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿದೆ.
36
ಡೆವಿಲ್ ಚಿತ್ರಕ್ಕೆ ಆಫರ್ ಬಂದಿತ್ತು
ಈ ಬಗ್ಗೆ ಮಾತನಾಡುವ ಸಮಯದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಅವರು ದರ್ಶನ್ ಅವರ ಡೆವಿಲ್ ಚಿತ್ರದಲ್ಲಿ ತಾವು ಏಕೆ ಅಭಿನಯಿಸಲು ಒಪ್ಪಲಿಲ್ಲ ಎನ್ನುವ ಬಗ್ಗೆಯೂ ಮಾತನಾಡಿದ್ದಾರೆ. ರಾಗಿಣಿ ಹೇಳಿದ್ದೇನೆಂದರೆ, 'ಡೆವಿಲ್' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಅದಕ್ಕೆ ನಾನು ಒಪ್ಪಲಿಲ್ಲ ಎಂದಿದ್ದಾರೆ.
ಅದಕ್ಕೆ ಕಾರಣವನ್ನೂ ನೀಡಿರುವ ಅವರು, ಸಿನಿಮಾ ಪ್ರವೇಶ ಮಾಡಿದಾಗ, ಒಂದು ಹಂತದವರೆಗೆ ಸಿಕ್ಕ ಪಾತ್ರಗಳಲ್ಲಿ ನಟಿಸಬೇಕಾಗುತ್ತದೆ. ಅದು ಅನಿವಾರ್ಯವಾಗುತ್ತದೆ. ಆದರೆ ಆ ಒಂದು ಹಂತವನ್ನು ದಾಟಿದ ಮೇಲೆ ಪಾತ್ರಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಾವು ಎಲ್ಲ ಪಾತ್ರವನ್ನು ಒಪ್ಪಿಕೊಳ್ಳಲು ಆಗಲ್ಲ. ನಮಗೆ ಇಷ್ಟವಾದ, ಉತ್ತಮ ಪಾತ್ರ ಆಯ್ಕೆ ಮಾಡಿಕೊಳ್ಳಬೇಕು. ಆದ್ದರಿಂದ ಸಿಕ್ಕ ಸಿಕ್ಕ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನನಗೆ ಇಷ್ಟವಾಗಲಿಲ್ಲ ಎಂದು ಹೇಳಿದ್ದಾರೆ.
56
ನನಗೆ ಇಷ್ಟ ಆಗಲಿಲ್ಲ
"ಡೆವಿಲ್" ಸಿನಿಮಾದಲ್ಲಿ ಕರೆ ಬಂದಿತ್ತು. ಆದರೆ ಆ ಪಾತ್ರ ನನಗೆ ಇಷ್ಟ ಆಗಲಿಲ್ಲ. ಅಂಥ ಪಾತ್ರ ನನಗೆ ಬೇಕಿರಲಿಲ್ಲ. ಹಾಗಾಗಿ ಆ ಪಾತ್ರವನ್ನು ನಾನು ಒಪ್ಪಲಿಲ್ಲ. ಯಾವ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು, ಬೇಡ ಎನ್ನುವುದು ನನ್ನ ಆಯ್ಕೆಗೆ ಬಿಟ್ಟಿದ್ದು ಎಂದಿದ್ದಾರೆ. ಆದರೆ, ಈ ಚಿತ್ರದಲ್ಲಿ ಯಾವ ರೋಲ್ಗೆ ರಾಗಿಣಿ ಅವರನ್ನು ಕೇಳಿಕೊಳ್ಳಲಾಗಿತ್ತು ಎನ್ನುವ ಬಗ್ಗೆ ಅವರು ಹೇಳಲಿಲ್ಲ.
66
ಫ್ಯಾನ್ಸ್ ವಾರ್ ಬಗ್ಗೆ ನಟಿ
ಇದೇ ವೇಳೆ ಫ್ಯಾನ್ಸ್ ವಾರ್ ಬಗ್ಗೆಯೂ ಮಾತನಾಡಿರುವ ನಟಿ, ಇವೆಲ್ಲಾ ಎಲ್ಲಾ ಭಾಷೆಗಳ ಇಂಡಸ್ಟ್ರಿಯಲ್ಲಿ ಕಾಮನ್ ಎಂದಿದ್ದಾರೆ. ಸ್ಟಾರ್ ಇದ್ದ ಮೇಲೆ ಫ್ಯಾನ್ ಇದ್ದೇ ಇರ್ತಾರೆ. ಪ್ರತಿಯೊಬ್ಬ ನಟರ ಫ್ಯಾನ್ ಬೇಸ್ ಇದ್ದೇ ಇರುತ್ತೆ, ಅವರು ತಮ್ಮ ನೆಚ್ಚಿನ ನಟನಿಗಾಗಿ ಏನು ಮಾಡಬೇಕೋ ಮಾಡುತ್ತಾರೆ. ಅದರಲ್ಲಿ ಹೊಸ ವಿಷಯವೇನೂ ಇಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.