ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?

Published : Dec 22, 2025, 06:47 PM IST

'ತುಪ್ಪದ ಬೆಡಗಿ' ಖ್ಯಾತಿಯ ನಟಿ ರಾಗಿಣಿ ದ್ವಿವೇದಿ, ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗ ತನ್ನನ್ನು ಕಡೆಗಣಿಸಿದೆ ಮತ್ತು ಕಷ್ಟದ ಸಮಯದಲ್ಲಿ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.  

PREV
16
ತುಪ್ಪದ ಬೆಡಗಿ

ಕನ್ನಡ, ತೆಲುಗು, ತಮಿಳು, ಮಲಯಾಳಂ ಚಲನಚಿತ್ರಗಳಲ್ಲಿ ಆ್ಯಕ್ಟೀವ್​ ಆಗಿರುವ ಸ್ಯಾಂಡಲ್​ವುಡ್​ ನಟಿ ರಾಗಿಣಿ ದ್ವಿವೇದಿ (Ragini Dwivedi) ತುಪ್ಪದ ಬೆಡಗಿ ಎಂದೇ ಫೇಮಸ್​ ಆದವರು. ಆದರೆ, ಕನ್ನಡ ಇಂಡಸ್ಟ್ರಿಯ ಬಗ್ಗೆ ಇದೀಗ ಅವರು ಅಸಮಾಧಾನ ಹೊರಹಾಕಿದ್ದಾರೆ. ಚಿತ್ರರಂಗಕ್ಕೆ ಬಂದು 15 ವರ್ಷಗಳಾದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಗಿಣಿ ಅವರು, ಸ್ಯಾಂಡಲ್​ವುಡ್​ ಇಂಡಸ್ಟ್ರಿ ತಮ್ಮನ್ನು ಕಡೆಗಣಿಸಿರುವ ಬಗ್ಗೆ ದುಃಖಿಸಿದ್ದಾರೆ.

26
ಬೇರೆ ಇಂಡಸ್ಟ್ರಿಯಲ್ಲಿಯೇ ಹೆಚ್ಚು ಪ್ರೀತಿ

ಕನ್ನಡ ಇಂಡಸ್ಟ್ರಿ ನನ್ನ ಪ್ರಾಣ, ಇದು ನನಗೆ ಮನೆಯ ರೀತಿ ಇದೆ. ಆದರೆ ಬೇರೆ ಇಂಡಸ್ಟ್ರೀ ನೀಡುತ್ತಿರುವ ಪ್ರೀತಿ, ಸಪೋರ್ಟ್​, ಕೆಲಸ ಯಾವುದೂ ನನಗೆ ಕನ್ನಡ ಇಂಡಸ್ಟ್ರಿ ನೀಡುತ್ತಿಲ್ಲ. ಇಲ್ಲಿಂದ ನನಗೆ ಪ್ರೀತಿ ಸಿಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

36
ಪ್ರಾಣ ಕೊಟ್ಟೆ...

ನಾನು ಕನ್ನಡ ಇಂಡಸ್ಟ್ರಿಗಾಗಿ ಪ್ರಾಣ, ಪ್ರೀತಿ ಕೊಟ್ಟೆ. ಹೆಸರನ್ನೂ ಕೊಟ್ಟಿದ್ದೇನೆ. ಬೇರೆ ಕಡೆ ಹೋದಾಗಲೂ ಸ್ಯಾಂಡಲ್​ವುಡ್​ ಇಂಡಸ್ಟ್ರಿಯನ್ನೇ ಪ್ರಮೋಟ್​ ಮಾಡುತ್ತೇನೆ. ನಾನು ಕನ್ನಡತಿಯಾಗಿಯೇ ಇರಲು ಇಚ್ಛಿಸುತ್ತೇನೆ. ಇದರ ಹೊರತಾಗಿಯೂ ಇಲ್ಲಿ ನನಗೆ ಪ್ರೀತಿ ಸಿಗುತ್ತಿಲ್ಲ. ನಾನು ಎಷ್ಟೇ ಕನ್ನಡ ಇಂಡಸ್ಟ್ರಿಯನ್ನು ಪ್ರಮೋಟ್​ ಮಾಡಿದರೂ ಬೇರೆಯವರು ತೋರುತ್ತಿರುವ ಕಾಳಜಿ, ಪ್ರೀತಿ ಇಲ್ಲಿಯವರು ಕೊಡುತ್ತಿಲ್ಲ ಎಂದಿದ್ದಾರೆ.

46
ಪಾಸಿಟಿವ್​ ವಿಚಾರ

ನಾನು ಕನ್ನಡದವಳು ಅಲ್ಲದಿದ್ದರೂ ಕನ್ನಡ ಕಲಿತಿದ್ದೇನೆ. ಇಲ್ಲಿ ಒಳ್ಳೆಯ ದಿನಗಳೂ ಇದ್ದವು, ಆದರೆ ಕೆಟ್ಟ ದಿನಗಳಲ್ಲಿ ನನಗೆ ಯಾರೂ ಇರಲಿಲ್ಲ. ನಾನು ತುಂಬಾ ಕಷ್ಟದ ಸಮಯ ನೋಡಿಕೊಂಡು ಬಂದೆ. ಹೀಗಾಗಿ ನಾನು ಹೆಚ್ಚಾಗಿ ನೆಗೆಟಿವ್‌ಗಿಂತ ಪಾಸಿಟಿವ್‌ ವಿಚಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತೇನೆ. ನಮ್ಮ ಜೀವನದಲ್ಲಿ ನೆಗೆಟಿವ್‌ಗಳನ್ನ ಒಪ್ಪಿಕೊಂಡು ಹೋದಷ್ಟು ಮುಖ್ಯವಾಗುತ್ತೆ. ನಿಜ ಹೇಳಬೇಕು ಅಂದ್ರೆ ಆ ಕಷ್ಟದ ಸಮಯದಲ್ಲಿ ಯಾರೂ ಇರಲಿಲ್ಲ. ಒಳ್ಳೆಯ ಸಮಯದಲ್ಲಿ ಎಲ್ಲರೂ ಇರ್ತಾರೆ ಎಂದು ನೋವಿನಿಂದ ನುಡಿದಿದ್ದಾರೆ ನಟಿ.

56
ಪ್ರೀತಿ ಮುಂದುವರಿಕೆ

ಇದರ ಹೊರತಾಗಿಯೂ ಯಾರು, ಏನೇ ಮಾಡಿದರೂ ನಾನು ಕನ್ನಡ ಇಂಡಸ್ಟ್ರಿಗಾಗಿ ನನ್ನ ಪ್ರೀತಿಯನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.

66
ನೋವಿಗೆ ಕಾರಣ

ತಮ್ಮ ನೋವಿಗೆ ಕಾರಣ ಕೊಟ್ಟಿರುವ ನಟಿ, ನನಗೆ ಯಾಕೆ ಇಷ್ಟು ಅಳು ಬಂತು ಅಂದರೆ, ಜೀವನದಲ್ಲಿ ನಮ್ಮ ಶಕ್ತಿ ತೋರಿಸುವುದು ಎಷ್ಟು ಮುಖ್ಯವೋ, ಬಲಹೀನತೆ ತೋರಿಸುವುದು ಕೂಡ ಅಷ್ಟೇ ಮುಖ್ಯವಾಗುತ್ತೆ. ನಾವು ಎರಡನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ದುರ್ಬಲರಾದರೂ, ಒಳ್ಳೆಯ ಹಾಗೂ ಕೆಟ್ಟ ದಿನವಾದರೂ ಒಪ್ಪಿಕೊಳ್ಳಬೇಕು ಎಂದೂ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories