ಮಹಾಲಕ್ಷ್ಮಿ ಹಾಗೆ ಅಲಂಕಾರ ಮಾಡಿಕೊಂಡ ಐರಾ; ಹೀಗಿತ್ತು ಯಶ್‌ ಮನೆಯಲ್ಲಿ ಪೂಜೆ!

First Published | Aug 6, 2022, 4:00 PM IST

ರಾಕಿಂಗ್ ಸ್ಟಾರ್ ಕುಟುಂಬದಲ್ಲಿ ಅದ್ಧೂರಿಯಾಗಿ ನಡೆಯಿತ್ತು ವರಮಹಾಲಕ್ಷ್ಮಿ ಪೂಜೆ. ಕಲರ್‌ಫುಲ್ ಫೋಟೋ ಹಂಚಿಕೊಂಡ ರಾಧು....

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್, ದಾಖಲೆ ಬರೆದ ಸರದಾರ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ ಪಂಡಿತ್ ಮಕ್ಕಳ ಜೊತೆಗಿರುವ ಫೋಟೋ ಮತ್ತು ಮನೆ ಅಲಂಕಾರ ಮಾಡಿರುವುದನ್ನು ಅಪ್ಲೋಡ್ ಮಾಡಿದ್ದಾರೆ.

Tap to resize

 'ನೋಡಿ ನಿನ್ನೆ ವರಮಹಾಲಕ್ಷ್ಮಿ ಪೂಜೆ ಮಾಡಲು ನನಗೆ ಯಾರೆಲ್ಲಾ ಸಹಾಯ ಮಾಡಿದ್ದಾರೆಂದು. ನಮ್ಮ ಮನೆಯ ಪುಟ್ಟ ಲಕ್ಷ್ಮಿ' ಎಂದು ರಾಧಿಕಾ ಬರೆದುಕೊಂಡಿದ್ದಾರೆ.

'ನಮ್ಮ ಮನೆಯ ಪುಟ್ಟ ಲಕ್ಷ್ಮಿ ಪೂಜೆಗಿಂತ ಹೆಚ್ಚಿಗೆ ತಿನ್ನುತ್ತಿದ್ದಳು, ಇರಲಿ ಬಿಡಿ ಅದು ಡಿಫರೆಂಟ್ ಸ್ಟೋರಿ. ನಿಮ್ಮಲ್ಲರ ಹಬ್ಬ ಚೆನ್ನಾಗಿತ್ತು ಅಂದುಕೊಂಡಿರುವೆ' ಎಂದಿದ್ದಾರೆ ರಾಧಿಕಾ.

 ಬರ್ಗ್ಯಾಂಡಿ ಮತ್ತು ಹಸಿರು ಬಣ್ಣದ ಸೀರೆಯಲ್ಲಿ ರಾಧಿಕಾ ಪಂಡಿತ್ ಕಂಗೊಳ್ಳಿಸುತ್ತಿದ್ದರೆ, ಪಿಂಕ್ ಆಂಡ್ ವೈಟ್‌ ಲಂಗಾ ಬ್ಲೌಸ್‌ನಲ್ಲಿ ಐರಾ ಮಿಂಚುತ್ತಿದ್ದಾಳೆ.

ರಾಧಿಕಾ ಅಪ್ಲೋಡ್ ಮಾಡಿರುವ ಫೋಟೋಗಳಲ್ಲಿ ಐರಾ ಕೈಯಲ್ಲಿ ತಿನಿಸು ಇದೆ ಇಲ್ಲವಾದರೆ ಆಕೆ ಗಮನ ಎಲ್ಲಾ ಊಟದ ಮೇಲಿದೆ. ಹೀಗಾಗಿ ಐರಾ ಸಖತ್ ಕ್ಯೂಟ್ ಎನ್ನುತ್ತಾರೆ. 
 

ಪ್ರತಿ ಹಬ್ಬವನ್ನು ರಾಧಿಕಾ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಇಡೀ ಮನೆಯನ್ನು ಪ್ರತಿ ಸಲವೂ ವಿಭಿನ್ನವಾಗಿ ಅಲಂಕಾರ ಮಾಡುತ್ತಾರೆ. 

Latest Videos

click me!