ಸ್ಯಾಂಡಲ್‌ವುಡ್ ಸಿಂಡ್ರೆಲಾ, ರಾಕಿ ಭಾಯ್ ಪತ್ನಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸದಾ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಮುದ್ದಾದ ಮಕ್ಕಳು, ಪೋಷಕರು ಹಾಗು ಪತಿ ಜೊತೆಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ನಟಿ ರಾಧಿಕಾ ಸದ್ಯ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.
ರಾಧಿಕಾ ಸದ್ಯ ತನ್ನ ತಂದೆ-ತಾಯಿಗೆ ವಿಶ್ ಮಾಡಿ ಸುಂದರ ಫೋಟೋ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ತಂದೆ ಕೃಷ್ಣಪ್ರಸಾದ್ ಪಂಡಿತ್ ಹಾಗೂ ತಾಯಿ ಮಂಗಳಾ ಪಂಡಿತ್ಗೆ ಇಂದು (ಜೂನ್ 19) ವಿವಾಹ ವಾರ್ಷಿಕೋತ್ಸವ.
ತಂದೆ-ತಾಯಿ ಮಧ್ಯೆ ನಿಂತು ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ ಅಪ್ಪ-ಅಮ್ಮನ ಪ್ರೀತಿ ಪ್ರಾರಂಭವಾಗಿದ್ದೆಲ್ಲಿ ಎಂದು ಬಿಚ್ಚಿಟ್ಟಿದ್ದಾರೆ.
ಅಂದಹಾಗೆ ರಾಧಿಕಾ ಅವರ ತಂದೆ-ತಾಯಿಯ ಪ್ರೀತಿ ಆರಂಭವಾಗಿದ್ದು ಗೋವಾದ ಆಫೀಸ್ ನಲ್ಲಿ. 'ಗೋವಾದಲ್ಲಿ ಶುರುವಾದ ಆಫೀಸ್ ಪ್ರೇಮದಿಂದ ಇಲ್ಲಿಯವರೆಗೆ. ಬೆಂಗಳೂರಿನಲ್ಲಿ ಒಂದು ಸೆಟ್ ಮೊಮ್ಮಕ್ಕಳು, ಚಿಕಾಗೋದಲ್ಲಿ ಇನ್ನೊಂದು ಸೆಟ್. ನೀವಿಬ್ಬರೂ ಬಲವಾದ ಸಂಬಂಧವನ್ನು ವ್ಯಾಖ್ಯಾನಿಸುತ್ತೀರಿ' ಎಂದು ಹೇಳಿದ್ದಾರೆ.
'ನಾನು ಮತ್ತು ಗೌರವ್ ನಿಮ್ಮ ಮಕ್ಕಳಾಗಿ ಹುಟ್ಟಿದ್ದು ಪುಣ್ಯ. ವಾರ್ಷಿಕೋತ್ಸವದ ಶುಭಾಶಯಗಳು ಪಪ್ಪಾ- ಮಮ್ಮಿ' ಎಂದು ರಾಧಿಕಾ ಪಂಡಿತ್ ಫೋಟೋ ಜೊತೆಗೆ ಅಪ್ಪ-ಅಮ್ಮನ ಬಗ್ಗೆ ಸಾಲುಗಳನ್ನು ಹಂಚಿಕೊಂಡಿದ್ದಾರೆ.