ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ಜೂನ್ 5ರಂದು ಬಹುಕಾಲದ ಗೆಳತಿ ಅವಿವಾ ಬಿದಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಫ್ಯಾಷನ್ ಡಿಸೈನರ್ ಅವಿವಾ ಬಿದಪ ಮತ್ತು ಅಭಿಷೇಕ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಇದೀಗ ಪತಿ ಪತ್ನಿಯರಾಗಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಚಾಮರವಜ್ರದಲ್ಲಿ ಇಬ್ಬರೂ ಅದ್ದೂರಿಯಾಗಿ ವಿವಾಹವಾದರು. ಅಭಿ-ಅವಿವಾ ಮದುವೆಗೆ ಅನೇಕ ಗಣ್ಯರು ಆಗಮಿಸಿ ಶುಭಹಾರೈಸಿದರು. ಜೂನ್ 5ರಂದು ದಾಂಪತ್ಯ ಕಾಲಿಟ್ಟ ಅವಿವಾ ಮತ್ತು ಅಭಿಷೇರ್ ಜೂನ್ 7ರಂದು ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡರು.
ಜೂನ್ 16ಕ್ಕೆ ಮಂಡ್ಯದಲ್ಲಿ ಬೀಗರೂಟ ಹಮ್ಮಿಕೊಂಡಿದ್ದರು ಅಭಿಷೇಕ್ ಕುಟುಂಬ. ಅಭಿಮಾನಿಗಳಿಗೆ ಬೀಗರೂಟಕ್ಕೆ ಆಹ್ವಾನ ನೀಡಲಾಗಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳು ಬೀಗರೂಟಕ್ಕೆ ಹಾಜರಾಗಿ ಭರ್ಜರಿ ಊಟ ಸವಿದರು.
ಮಂಡ್ಯ ಜಿಲ್ಲೆ ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿ ಕಾರ್ಯಕ್ರಮ ನಡೆದಿದೆ. ಅದೇ ಸ್ಥಳದಲ್ಲಿ ಪ್ರಧಾನಿ ಮೋದಿ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟಿಸಿದ್ದರು. ಅದೇ ಜಾಗದಲ್ಲಿ ಅದ್ದೂರಿಯಾಗಿ ಬೀಗರೂಟ ನಡೆದಿದೆ.
ಅಭಿಷೇಕ್ ಮತ್ತು ಅವಿವಾ ಜೋಡಿಗೆ ಮಂಡ್ಯ ಅಭಿಮಾನಿ ವಿಶೇಷ ಗಿಫ್ಟ್ ನೀಡಿದ್ದಾರೆ. ಎತ್ತಿನ ಬೆನ್ನ ಮೇಲೆ ಅಭಿಷೇಕ್ ಮತ್ತು ಅವಿವಾ ಫೋಟೋ ಬಿಡಿಸಿಕೊಂಡಿದ್ದರು. ಅಭಿಷೇಕ್ ದಂಪತಿ ವಿಶೇಷ ಗಿಫ್ಟ್ ಜೊತೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಇಬ್ಬರೂ ಎತ್ತಿನ ಪಕ್ಕದಲ್ಲಿ ನಿಂತು ಸಂಭ್ರಮಿಸಿದ್ದಾರೆ. ಅಭಿಮಾನಿಯ ಪ್ರೀತಿಗೆ ಮನ ಸೋತಿದ್ದಾರೆ. ಜೊತೆಯಲ್ಲಿ ಸುಮಲತಾ ಕೂಡ ಇದ್ದರು.
abhishek ambareesh
ಎತ್ತಿನ ಮೇಲೆ ಅಭಿಷೇಕ್ ಮತ್ತು ಅವಿವಾ ಫೋಟೋ ಜೊತೆಗೆ ತೇಜಗೌಡ ಚೀರನಹಳ್ಳಿ ಎಂದು ಬರೆಸಿಕೊಳ್ಳಲಾಗಿದೆ. ತೇಜಗೌಡ ಅವರ ಎತ್ತಿನ ಜೊತೆ ಅಭಿ ದಂಪತಿ ಇರುವ ಫೋಟೋ ವೈರಲ್ ಆಗಿದೆ. ಅಭಿಷೇಕ್ ಬಿಳಿ ಪಂಚೆ ಮತ್ತು ಶರ್ಟ್ ಧರಿಸಿದ್ದರು. ಅವಿವಾ ಗುಲಾಬಿ ಬಣ್ಣದ ಸೀರೆ ಮತ್ತು ಗೋಲ್ಡವ್ ಬ್ಲೌಸ್‌ನಲ್ಲಿ ಮಿಂಚಿದ್ದಾರೆ.