ಇದು ಟಾಕ್ಸಿಕ್‌ ಅಲ್ಲ, ಸ್ವೀಟ್‌ ಸುದ್ದಿ.. ಯಶ್‌ಗಾಗಿ ರಾಧಿಕಾ ಪಂಡಿತ್‌ ಬರೆದ ಮನಮೋಹಕ ಸಂದೇಶ ವೈರಲ್!

Published : Dec 10, 2025, 10:18 AM IST

ರಾಕಿಂಗ್‌ ಸ್ಟಾರ್‌ ಯಶ್‌ ಮತ್ತು ರಾಧಿಕಾ ಪಂಡಿತ್‌ ಇಂದು ತಮ್ಮ 9ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹೀಗಾಗಿ ಸೋಶಿಯಲ್‌ ಮೀಡಿಯಾದಲ್ಲಿ ಎಐ ಎಡಿಟ್‌ ಫೋಟೋಗಳನ್ನ ಹಂಚಿಕೊಂಡು ಪತಿ ಯಶ್‌ಗೆ ರಾಧಿಕಾ ಪಂಡಿತ್‌ ವಿಶ್‌ ಮಾಡಿದ್ದಾರೆ.

PREV
15
ಫನ್ನಿ ವೀಡಿಯೋ ಪೋಸ್ಟ್‌

ಮದುವೆಯಾಗಿ 9ನೇ ವರ್ಷಕ್ಕೆ ಕಾಲಿಡುತ್ತಿರುವ ಹೊತ್ತಲ್ಲೇ ರಾಧಿಕಾ ಪಂಡಿತ್‌ ತನ್ನ ಗಂಡ ಯಶ್‌ ಬಗ್ಗೆ ಎಐ ಎಡಿಟ್‌ ಇರುವ ಫನ್ನಿ ವೀಡಿಯೋ ಪೋಸ್ಟ್‌ ಮಾಡಿದ್ದಾರೆ.

25
ಎಐ ಇಮೇಜ್‌

ಇದರಲ್ಲಿ ಹಲವು ಅವತಾರಗಳಲ್ಲಿ ಯಶ್‌ ಅವರ ಎಐ ಇಮೇಜ್‌ ಇದೆ. ಅದರ ಜೊತೆಗೆ ರಾಧಿಕಾ ಗಂಡ ಯಶ್‌ ಜೊತೆಗಿನ ತನ್ನ ನವಿರಾದ ಬಂಧವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

35
ಶಾಂತಿ ನೀಡುವ ವ್ಯಕ್ತಿ

ನನ್ನ ಪಾಲಿನ ಬಾಡಿಗಾರ್ಡ್‌, ಚಾಟ್‌ ಜಿಪಿಟಿ, ಶೆಫ್‌, ಪರ್ಸನಲ್‌ ಫೋಟೋಗ್ರಾಫರ್‌, ಡಿಜೆ, ಡಾಕ್ಟರ್‌, ಕ್ಯಾಲ್ಕುಲೇಟರ್‌ ಜೊತೆಗೆ ಶಾಂತಿ ನೀಡುವ ವ್ಯಕ್ತಿಯೂ ಆಗಿರುವ ಗಂಡ.

45
ರೊಮ್ಯಾಂಟಿಕ್‌ ಪೋಸ್ಟ್‌ ಟ್ರೆಂಡಿಂಗ್‌

ಆತನೇ ನನ್ನ ಸರ್ವಸ್ವ. ನನ್ನೆಲ್ಲ ಪ್ರಶ್ನೆಗಳಿಗೆ ಉತ್ತರ. ಹ್ಯಾಪಿ 9 ಎಂದು ರಾಧಿಕಾ ಪಂಡಿತ್‌ ಬರೆದುಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ರೊಮ್ಯಾಂಟಿಕ್‌ ಪೋಸ್ಟ್‌ ಟ್ರೆಂಡಿಂಗ್‌ ಆಗಿದೆ.
 

55
ಟಾಕ್ಸಿಕ್‌ ಜೊತೆ 3 ದೊಡ್ಡ ಸಿನಿಮಾಗಳು

ಮಾರ್ಚ್‌ 19ರ ಸಂದರ್ಭದಲ್ಲಿ ಯುಗಾದಿ ಮತ್ತು ಈದ್‌ ಹಬ್ಬ ಬಂದಿದ್ದು, ಲಾಂಗ್‌ ವೀಕೆಂಡ್‌ ಇದೆ. ಹೀಗಾಗಿಯೇ ‘ಟಾಕ್ಸಿಕ್‌’ ಜೊತೆ ಮಾರ್ಚ್‌ 20ಕ್ಕೆ ಅಜಯ್‌ ದೇವಗನ್‌ ನಟನೆಯ ‘ಧಮಾಲ್‌ 4’ , ಮಾ.19ರಂದು ರಣವೀರ್‌ ಸಿಂಗ್‌ ನಟನೆಯ ‘ಧುರಂಧರ್‌ 2’ ಚಿತ್ರ ಬರಲಿವೆ.

Read more Photos on
click me!

Recommended Stories