ಯಶ್ ಸಿನಿಮಾದಲ್ಲಿ ಬ್ಯುಸಿಯಾದ್ರೆ, ಮಕ್ಕಳ ಜೊತೆ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ ರಾಧಿಕಾ ಪಂಡಿತ್

First Published | Aug 1, 2024, 3:10 PM IST

ರಾಕಿಂಗ್ ಸ್ಟಾರ್ ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ತಮ್ಮ ಇಬ್ಬರು ಮಕ್ಕಳು ಮತ್ತು ತಂದೆ-ತಾಯಿ ಜೊತೆ ವೆಕೇಶನ್ ಎಂಜಾಯ್ ಮಾಡ್ತಿದ್ದು ಫೋಟೋ ಹಂಚಿಕೊಂಡಿದ್ದಾರೆ.
 

ರಾಂಕಿಂಗ್ ಸ್ಟಾರ್ ಯಶ್ (Rocking Star Yash) ತಮ್ಮ ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ರಾಧಿಕಾ ಪಂಡಿತ್ ಅಂತೂ ಮಕ್ಕಳಾದ್ಮೇಲೆ ನಟನೆಯಿಂದ ತುಂಬಾನೆ ದೂರ ಉಳಿದು, ಮನೆ, ಮಕ್ಕಳು ಅಂತ ಅದ್ರಲ್ಲೆ ಬ್ಯುಸಿಯಾಗಿದ್ದಾರೆ. 
 

ಕೆಲ ದಿನಗಳ ಹಿಂದೆ ಯಶ್ ಮತ್ತು ರಾಧಿಕಾ ಜೊತೆಯಾಗಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಆ ಫೋಟೋಗಳು ಸಹ ವೈರಲ್ ಆಗಿದ್ದವು. ಇದಾದ ಬಳಿಕ ಯಶ್ ಮತ್ತೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. 
 

Tap to resize

ಇದರ ಮಧ್ಯೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಎಂದೇ ಕರೆಸಿಕೊಳ್ಳುವ ರಾಧಿಕಾ ಪಂಡಿತ್  (Radhika Pandit)ತಮ್ಮ ಮಕ್ಕಳು, ಅಪ್ಪ, ಅಮ್ಮ ಮತ್ತು ಸ್ನೇಹಿತರ ಜೊತೆ ವೆಕೇಶನ್ ಎಂಜಾಯ್ ಮಾಡುತ್ತಿದ್ದು, ಸುಂದರವಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ರಾಧಿಕಾ ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಮಗಳು ಆಯ್ರಾ, ಮಗ ಯಥರ್ವ್, ತಮ್ಮ ಅಮ್ಮ ಮತ್ತು ಅಪ್ಪನ ಜೊತೆ ಸುಂದರವಾದ ಜಾಗಕ್ಕೆ ತೆರಳಿ ಅಲ್ಲಿ ಮಕ್ಕಳ ಜೊತೆ ಎಂಜಾಯ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. 
 

ಯಾವ ಜಾಗಕ್ಕೆ ಟೂರ್ ಹೋಗಿರೋದು ಅನ್ನೋದನ್ನ ರಾಧಿಕಾ ಬಿಟ್ಟು ಕೊಟ್ಟಿಲ್ಲ. ಆದರೆ ಬೋಟಿಂಗ್, ಪ್ರಕೃತಿ ನಡುವೆ ವಾಕಿಂಗ್ ಮಾಡ್ತಾ, ಮಕ್ಕಳಿಗೂ ಪ್ರಕೃತಿಯ ಪರಿಚಯ ಮಾಡಿಸ್ತಾ, ಫ್ಯಾಮಿಲಿ ಟೈಮನ್ನ ತುಂಬಾನೆ ಎಂಜಾಯ್ ಮಾಡಿದ್ದಾರೆ ರಾಧಿಕಾ. 
 

ಎರಡೂ ಮಕ್ಕಳಾದ ಬಳಿಕವೂ ಅದೇ ಸೌಂದರ್ಯ ಮತ್ತು ಫಿಗರ್ ಕಾಪಾಡಿಕೊಂಡು ಬಂದಿರುವ ರಾಧಿಕಾ ಪಂಡಿತ್ ಅವರನ್ನ ನೋಡಿ ಜನ ಇವರು ನಿಜವಾದ ಸಂತೂರ್ ಮಮ್ಮಿ, ಅತ್ತಿಗೆಗೆ ವಯಸ್ಸೇ ಆಗ್ತಿಲ್ಲ, ತುಂಬಾನೆ ಸುಂದರವಾಗಿಕಾಣಿಸ್ತಾರೆ. ನೀಲಿ ಡ್ರೆಸ್ ನಲ್ಲಂತೂ ನಟಿ ತುಂಬಾನೆ ಗಾರ್ಜಿಯಸ್ ಆಗಿ ಕಾಣಿಸ್ತಿದ್ದಾರೆ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ಫ್ಯಾಮಿಲಿ ಟ್ರಿಪ್ (family trip) ನಲ್ಲಿ ಯಶ್ ಕಾಣಿಸದೇ ಇರೋದಕ್ಕೆ ಹಲವಾರು ಜನ ಕಾಮೆಂಟ್ ಮಾಡಿ ಪರ್ಫೆಕ್ಟ್ ಫ್ಯಾಮಿಲಿ ಪಿಕ್ಚರ್ ನಿಂದ ಯಶ್ ಸರ್ ಮಿಸ್ ಆಗಿದ್ದಾರೆ, ಯಶ್ ಬಾಸ್ ಎಲ್ಲಿದ್ದಾರೆ? ಯಶ್ ಅಣ್ಣ ಮಿಸ್ಸಿಂಗ್ ಆಗಿದ್ದಾರೆ, ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

ರಾಧಿಕಾ ಪಂಡಿತ್ ಕೊನೆಯದಾಗಿ ಕನ್ನಡದಲ್ಲಿ ಆದಿ ಲಕ್ಷ್ಮಿ ಪುರಾಣದಲ್ಲಿ (Adi Lakshmi Purana) ನಟಿಸಿದ್ದರು. ಗರ್ಭಿಣಿಯಾದ ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದರು. ಇದೀಗ ಸದ್ಯ ಇಬ್ಬರು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ, ಆದರೆ ಇಂದಿಗೂ ಕೂಡ ಅಭಿಮಾನಿಗಳು ರಾಧಿಕಾ ಪಂಡಿತ್ ಕಂ ಬ್ಯಾಕ್ ಗಾಗಿ ಕಾಯ್ತಿದ್ದಾರೆ. 
 

Latest Videos

click me!