ಚಿಕ್ಕಪೇಟೆಯಲ್ಲಿ ಮದುವೆ ಸೀರೆ ಖರೀದಿಸಿದ ನಟಿ ಸೋನಲ್; ಸರಳತೆಯ ಸುಂದರಿ ಎಂದ ನೆಟ್ಟಿಗರು!

First Published | Aug 1, 2024, 1:39 PM IST

ಮದುವೆ ತಯಾರಿಯಲ್ಲಿ ಬ್ಯುಸಿಯಾದ ನಟಿ ಸೋನಲ್. ಚಿಕ್ಕಪಟ್ಟೆಯಲ್ಲಿ ಸೀರೆ ಖರೀದಿಸಿದ ದುಬೈ ಸುಂದರಿ.....

ಸ್ಯಾಂಡಲ್‌ವುಡ್‌ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಆಗಸ್ಟ್‌ 10 ಮತ್ತು 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮದುವೆ ತಯಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಈಗಾಗಲೆ ಮದುವೆ ಆಮಂತ್ರಣ ಪತ್ರಿಯನ್ನು ಹಂಚುವುದಕ್ಕೆ ಶುರು ಮಾಡಿದ್ದಾರೆ. ಶಾಪಿಂಗ್ ಕೂಡ ಶುರು ಮಾಡಿದ್ದಾರೆ.

Tap to resize

 ಇತ್ತೀಚಿಗೆ ಚಿಕ್ಕಪೇಟೆಯಲ್ಲಿ ಇರುವ ಯೋಗಲಕ್ಷ್ಮಿ ಸಿಲ್ಕ್‌ ಸೀರೆ ಅಂಗಡಿಯಲ್ಲಿ ಮದುವೆ ಸೀರೆಯನ್ನು ಶಾಪಿಂಗ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗುತ್ತಿದೆ.

ಮೂರ್ನಾಲ್ಕು ಸೀರೆಯನ್ನು ಸೋನಲ್ ಕುಟುಂಬದವರು ಖರೀದಿಸಿದ್ದಾರೆ. ಅಂಗಡಿ ಮಾಲೀಕರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ.

ತರುಣ್ ಸುಧೀರ್ ಸೋನಲ್ ಮಾಂಥೋರೊ ಮದುವೆ ಸುದ್ದಿ ಇಡೀ ಚಿತ್ರರಂಗಕ್ಕೆ ಬ್ರೇಕಿಂಗ್ ನ್ಯೂಸ್ ಆಗಿತ್ತು. ಆದರೆ ಇವರ ಪ್ರೀತಿ ಅರಳಿದ್ದು ರಾಬರ್ಟ್‌ ಸಿನಿಮಾ ಸಮಯದಲ್ಲಿ.

ಮದುವೆ ಅನೌನ್ಸ್ ಮೆಂಟ್‌ ಮಾಡಲು ಸಿನಿಮಾ ಸ್ಟೈಲ್‌ನಲ್ಲಿ ಫೋಟೋಶೂಟ್ ಮಾಡಿದ್ದಾರೆ. ಸಿನಿಮಾ ಶೈಲಿಯಲ್ಲಿ ಸೆಟ್‌ ಹಾಕಿರುವ ಫೋಟೋ ವೈರಲ್ ಆಗುತ್ತಿದೆ. 
 

Latest Videos

click me!