ನಮಗೆ ಬೇಕಾದ್ದು ಇಲ್ಲೆ ಸಿಕ್ರೆ ಬೇರೆ ಕಡೆ ಹೋಗಲ್ಲ, ಪರಭಾಷಾ ಸಿನಿಮಾಗಳಲ್ಲಿ ನಟಿಸೋ ಬಗ್ಗೆ ಸಪ್ತಮಿ ಗೌಡ ಹೇಳಿದ್ದಿಷ್ಟು

First Published | Jul 31, 2024, 9:48 PM IST

ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಸಪ್ತಮಿ ಗೌಡ ಇದೀಗ ಮತ್ತೆ ಕಾಣಿಸಿಕೊಂಡಿದ್ದು, ನಟಿಯರು ಪರಭಾಷಾ ಸಿನಿಮಾಗಳಲ್ಲಿ ನಟಿಸುವ ಬಗ್ಗೆ, ಸಿನಿಮಾ ಅವಕಾಶಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. 
 

ಕಾಂತಾರಾ ಸಿನಿಮಾದಲ್ಲಿ ಲೀಲಾ ಪಾತ್ರದ ಮೂಲಕ ದೇಶಾದ್ಯಂತ ಸಿನಿ ರಸಿಕರನ್ನು ಸೆಳೆದ ನಟಿ ಮತ್ತು ಸ್ವಿಮ್ಮರ್ ಸಪ್ತಮಿ ಗೌಡ (Sapthami Gowda), ಈಗಷ್ಟೇ ಕ್ವೀನ್ಸ್ ಕ್ರಿಕೆಟ್ ಲೀಗ್ ಮುಗಿಸಿಕೊಂಡು ಬಂದಿದ್ದು, ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿನಿಮಾ, ನಟನೆ, ಪರಭಾಷಾ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. 
 

ಸ್ಪೋರ್ಟ್ಸ್‌ನಲ್ಲಿ ಸೋಲು ಅಥವಾ ಗೆಲುವು ಎರಡೇ ಆಯ್ಕೆ ಇರೋದು, ಆದರೆ ಜೀವನದಲ್ಲಿ ಹಾಗಲ್ಲ ಎಂದಿರುವ ಸಪ್ತಮಿ, ತಲೆ ತಗ್ಗಿಸದಂತೆ ಕೆಲಸ ಮಾಡು, ಯಶಸ್ಸು ನಿನ್ನನ್ನ ಫಾಲೋ ಮಾಡ್ಕೊಂಡು ಬರುತ್ತೆ ಅನ್ನೋದನ್ನ ನಾನು ಕಲಿತಿದ್ದೇನೆ. ಇದನ್ನೇ ಮಾಡೋದಾಗಿ ನಿರ್ಧರಿಸೋದಾಗಿ ಹೇಳಿದ್ದಾರೆ ಸಪ್ತಮಿ. 
 

Latest Videos


ಕಾಂತಾರ  (Kantaara) ಸಿನಿಮಾದ ಲೀಲಾ ಪಾತ್ರದ ಬಗ್ಗೆ ಮಾತನಾಡಿದ ನಟಿ ಇದು ನನ್ನ ಕನಸಿನ ಪಾತ್ರ. ಆದ್ರೆ ನಾನು ಹೊಸ ಚಾಲೆಂಜಸ್‌ಗಳನ್ನ ಸ್ವೀಕರಿಸೋದಕ್ಕೆ ರೆಡಿಯಾಗಿದ್ದೇನೆ. ಸಿನಿಮಾದಲ್ಲಿ ಮಹಿಳಾ ಕೇಂದ್ರಿತ ಕಥೆ ಹೆಚ್ಚು ಹೆಚ್ಚು ಬರಬೇಕು ಎಂದಿದ್ದಾರೆ. ಅಷ್ಟೇ ಅಲ್ಲ ಕಾಂತಾರ ಸಿನಿಮಾ ಆಗಿ ಎರಡು ವರ್ಷಗಳು ಕಳೆದರೂ ಜನ ನನ್ನನ್ನು ಲೀಲಾ ಪಾತ್ರದ ಮೂಲಕ ಗುರುತಿಸುತ್ತಾರೆ, ಅದಕ್ಕೆ ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಾರೆ. ಆದ್ರೆ ಮತ್ತೆ ಅದೇ ಪಾತ್ರವನ್ನ ಮಾಡಬೇಕು ಎಂದು ಬಯಸೋದು ಸರಿಯಲ್ಲ. ಯಾಕಂದ್ರೆ ಮತ್ತೊಂದು ಕಾಂತಾರ ಸಿನಿಮಾವನ್ನು ಮತ್ತೆ ಮಾಡೋದಕ್ಕೆ ಸಾಧ್ಯ ಇಲ್ಲ ಎಂದಿದ್ದಾರೆ. 

ಕಾಂತಾರ ಸಿನಿಮಾದ ಬಳಿಕ ಯುವ (Yuva) ಸಿನಿಮಾ ತೆರೆಗೆ ಬರೋದಕ್ಕೆ ಎರಡು ವರ್ಷ ಬೇಕಾಗಿತ್ತು. ಆದ್ರೆ ಎರಡು ವರ್ಷದ ಗ್ಯಾಪಿನಿಂದ ನಂಗೆ ಭಯ ಆಗಿಲ್ಲ ಎಂದಿರುವ ಸಪ್ತಮಿ ಕಾಂತಾರ ಸಿನಿಮಾ ಎಂಪ್ಲಾಯ್ ಆಫ್ ದ ಇಯರ್ ಪ್ರಶಸ್ತಿ ಪಡೆದಂತೆ, ಆ ಸಿನಿಮಾದ ನನ್ನ ಪಾತ್ರವೇ ಹಾಗಿತ್ತು, ಇನ್ನು ಕೆಲವು ವರ್ಷ ನಾನು ಸಿನಿಮಾ ಮಾಡದೇ ಇದ್ದರೂ ಲೀಲಾ ಪಾತ್ರದಿಂದಾಗಿ ನಂಗೆ ಮುಂದೆ ಬೇರೆ ಪಾತ್ರಗಳು ಖಂಡಿತಾ ಸಿಗಲಿವೆ ಎಂದಿದ್ದಾರೆ.
 

ಮಹಿಳೆಯರೇ ಕಥೆ ಬರೆದಂತಹ ಸಿನಿಮಾಗಳಲ್ಲಿ (women centered cinema) ಪಾತ್ರ ಮಾಡಲು ನಾನು ಬಯಸುತ್ತೇನೆ ಎಂದಿರುವ ನಟಿ ಮಹಿಳೆಯರಿಂದ, ಮಹಿಳೆಯರಿಗಾಗಿ ಕಥೆ ಬರೆಯೋದು ತುಂಬಾ ಕಡಿಮೆಯಾಗಿದೆ ಎಂದಿದ್ದಾರೆ. ನೀವು ಕಲಾವಿದರಾಗಿದ್ದರೆ ನಿಮ್ಮ ಸಿನಿಮಾಗಳ ಲಿಸ್ಟ್ ನಲ್ಲಿ ಎಲ್ಲಾ ರೀತಿಯ ಚಲನಚಿತ್ರಗಳು ಖಂಡಿತವಾಗಿಯೂ ಬೇಕಾಗುತ್ತವೆ ಎಂದಿದ್ದಾರೆ ಕಾಂತಾರದ ಲೀಲಾ. 

ಈಗಷ್ಟೆ ನಟ ನಿತಿನ್ ಸಿನಿಮಾದ ಮೂಲಕ ತೆಲುಗು ಸಿನಿಮಾ ಇಂಡಷ್ಟ್ರಿಗೆ (telugu film industry) ಕಾಲಿಟ್ಟ ಸಪ್ತಮಿ ಗೌಡ, ಕನ್ನಡ ನಟಿಯರು ಇತರ ಭಾಷಾ ಸಿನಿಮಾಗಳಲ್ಲಿ ನಟಿಸುತ್ತಿರೋದು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ನಟಿ ಲಕ್ಷ್ಮೀ ಕನ್ನಡ, ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ, ಅವರನ್ನ ನಾವು ಇವತ್ತಿಗೂ ಅಷ್ಟೇ ಪ್ರೀತಿಸುತ್ತೇವೆ. ಅಷ್ಟೇ ಅಲ್ಲ ನಟಿ ರಕ್ಷಿತಾ, ರಮ್ಯಾ ಕೂಡ ಬೇರೆ ಸಿನಿಮಾ ಇಂಡಸ್ಟ್ರಿಗಳಲ್ಲಿ ನಟಿಸಿ ಬಂದಿದ್ದಾರೆ. 

ಒಂದು ವೇಳೆ ನಾವು ಅಂದುಕೊಂಡಿದ್ದೆಲ್ಲಾ, ನಮಗೆ ಇಲ್ಲೇ ಕನ್ನಡ ಇಂಡಸ್ಟ್ರಿಯಲ್ಲಿಯೇ ಸಿಕ್ರೆ ನಾವು ಯಾರೂ ಬೇರೆ ಕಡೆ ಹೋಗ್ತಿರಲಿಲ್ಲ. ಒಳ್ಳೆಯ ಉದ್ಯೋಗವನ್ನ ಅರಸಿಕೊಂಡು ಪ್ರತಿಯೊಬ್ಬರು ಬೇರೆ ಬೇರೆ ಕಡೆ ಹೋಗ್ತಾರೆ. ಅಂತದ್ರಲ್ಲಿ ನಟರು ಬೇರೆ ಸಿನಿಮಾಕ್ಕೆ ಹೋಗೋದ್ರಲ್ಲೇನಿದೆ. ಆದರೆ ಕನ್ನಡ ಸಿನಿಮಾ ಇಂಡಸ್ಟ್ರಿ ನನಗೆ ಯಾವತ್ತಿಗೂ ಮನೆ ಇದ್ದಂತೆ ಎಂದಿದ್ದಾರೆ ಸಪ್ತಮಿ ಗೌಡ. 

click me!