ಹುಟ್ಟುಹಬ್ಬ ಸಂಭ್ರಮದಲ್ಲಿ ಯಥರ್ವ್; ಮಗನ ಫೋಟೋ ಶೇರ್ ಮಾಡಿ ಪ್ರೀತಿಯ ವಿಶ್ ತಿಳಿಸಿದ ರಾಧಿಕಾ ಪಂಡಿತ್

Published : Oct 30, 2022, 03:37 PM IST

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೇ ಮಗ ಯಥರ್ವ್‌ಗೆ ಹುಟ್ಟುಹಬ್ಬದ ಸಂಭ್ರಮ. ರಾಕಿಂಗ್ ಸ್ಟಾರ್ ಪುತ್ರ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ.

PREV
17
ಹುಟ್ಟುಹಬ್ಬ ಸಂಭ್ರಮದಲ್ಲಿ ಯಥರ್ವ್; ಮಗನ ಫೋಟೋ ಶೇರ್ ಮಾಡಿ ಪ್ರೀತಿಯ ವಿಶ್ ತಿಳಿಸಿದ ರಾಧಿಕಾ ಪಂಡಿತ್

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಎರಡನೇ ಮಗ ಯಥರ್ವ್‌ಗೆ ಹುಟ್ಟುಹಬ್ಬದ ಸಂಭ್ರಮ. ರಾಕಿಂಗ್ ಸ್ಟಾರ್ ಪುತ್ರ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾನೆ. ಮುದ್ದು ಮಗನಿಗೆ ನಟಿ ರಾಧಿಕಾ ಪಂಡಿತ್ ಪ್ರೀತಿಯ ವಿಶ್ ತಿಳಿಸಿದ್ದಾರೆ. 

27

ಯಥರ್ವ್ ಯಶ್ ಅಕ್ಟೋಬರ್ 30, 2019ರಲ್ಲಿ ಜನಿಸಿದನು. ಕಳೆದ ವರ್ಷ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಇಡೀ ರಾಜ್ಯ ಶೋಕಸಾಗರದಲ್ಲಿ ಮುಳುಗಿತ್ತು. ಹಾಗಾಗಿ ಯಥರ್ವ‌್‌ನ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. 

37

ಈ ಬಾರಿ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಕುಟುಂಬ ಪ್ಲಾನ್ ಮಾಡಿದೆ. ಅಂದಹಾಗೆ ರಾಧಿಕಾ ಪಂಡಿತ್ ಮಗನ ಮುದ್ದಾ ಫೋಟೋ ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. 

47

ನನ್ನ ಪ್ರೀತಿಯ ಮುದ್ದು ಮಗ ಯಥರ್ವ್‌ನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ. ರಾಧಿಕಾ ತನ್ನ ಕಾಲು ಮೇಲೆ ಕೂರಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಮತ್ತೊಂದು ಫೋಟೋದಲ್ಲಿ ಯಥರ್ವ್ ಬಲೂನ್ ಹಿಡಿದು ನಿಂತಿರುವ ಫೋಟೋ ಹಂಚಿಕೊಂಡಿದ್ದಾರೆ. 

57

ಯಥರ್ವ್‌ನಿಗೆ ಅಭಿಮಾನಿಗಳು ಹಾಗೂ ಸಿನಿ ಗಣ್ಯರು ಸಹ ಪ್ರೀತಿಯ ಶುಭಾಶಯ ತಿಳಿಸುತ್ತಿದ್ದಾರೆ. ನಟಿ ಅನು ಪ್ರಭಾಕರ್ ವಿಶ್ ಮಾಡಿ ತನ್ನ ಮಗಳು ನಂದನಾಳಿಂದ ಪ್ರೀತಿಯ ಶುಭಾಶಯ ಎಂದು ಹೇಳಿದ್ದಾರೆ. 

67

ಇತ್ತೀಚಿಗಷ್ಟೆ ರಾಧಿಕಾ ಮನೆಯಲ್ಲಿ ದೀಪಾವಳಿ ಆಚರಿಸಿದ ಫೋಟೋವನ್ನು ಹಂಚಿಕೊಂಡಿದ್ದರು. ಯಶ್ ಮನೆಯಲ್ಲಿ ಅದ್ದೂರಿಯಾಗಿ ಹಬ್ಬ ಆಚರಣೆ ಮಾಡಲಾಗಿತ್ತು. ಮಕ್ಕಳು ಜೊತೆ ಪೂಜೆ ಮಾಡಿ ಪಟಾಕಿ ಹೊಡೆದ ಫೋಟೋವನ್ನು ರಾಧಿಕಾ ಹಂಚಿಕೊಂಡಿದ್ದರು. 
 

77
yash

ಯಥರ್ವ್ ಮತ್ತು ಸಹೋದರಿ ಐರಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತದೆ. ರಾಧಿಕಾ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಕ್ಕಳ ಫೋಟೋ ಶೇರ್ ಮಾಡಿದ ಕ್ಷಣಾರ್ಧದಲ್ಲಿ ವೈರಲ್ ಆಗುತ್ತದೆ. ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತದೆ. ಇದೀಗ ಯಥರ್ವ್‌ನಿಗೆ ಶುಭಾಶಯಗಳ ಸುರಿಮಳೆ ಬರುತ್ತಿದೆ. 

Read more Photos on
click me!

Recommended Stories