Gandhada Gudi ಸಂಭ್ರಮ: ಥಿಯೇಟರ್‌ಗೆ ಕುದುರೆ ಕರೆತಂದ ಅಭಿಮಾನಿ

Published : Oct 28, 2022, 04:22 PM IST

ಭರ್ಜರಿ ಪ್ರದರ್ಶನ ಕಾಣುತ್ತಿದೆ ಗಂಧದ ಗುಡಿ ಸಿನಿಮಾ. ಬಿಡುಗಡೆ ದಿನಾಂಕವನ್ನು ಹಬ್ಬದಂತೆ ಆಚರಿಸುತ್ತಿರುವ ಅಭಿಮಾನಿಗಳು.... ಫೋಟೋ ಕೃಪೆ:  ವಿ.ವೀರಮಣಿ, ಕನ್ನಡಪ್ರಭ

PREV
18
Gandhada Gudi ಸಂಭ್ರಮ: ಥಿಯೇಟರ್‌ಗೆ ಕುದುರೆ ಕರೆತಂದ ಅಭಿಮಾನಿ

ಕನ್ನಡ ಚಿತ್ರರಂಗ ಯುವರತ್ನ, ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್ ಕನಸಿನ ಕೂಸು ಗಂಧದ ಗುಡಿ ಅಕ್ಟೋಬರ್ 28ರಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. 

28

ಟಿಕೆಟ್ ಬುಕ್ಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಫುಲ್ ಸೋಲ್ಡ್‌ ಔಟ್‌ ಆಗಿತ್ತು. ಫಸ್ಟ್‌ ಡೇ ಫಸ್ಟ್‌ ಶೋ ನೋಡಿ ಅಪ್ಪು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. 

38

 ಕರ್ನಾಟಕದಲ್ಲಿರುವ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಅಪ್ಪು ದೊಡ್ಡ ದೊಡ್ಡ ಕಟೌಟ್‌ ಹಾಕಿ ಹೂವು ಮತ್ತು ಹಾಲಿನ ಅಭಿಷೇಕ ಮಾಡಿದ್ದಾರೆ. 

48

ಕಾಡು ಪ್ರಾಣಿ ಪಕ್ಷಿಗಳ ಬಗ್ಗೆ ಸಿನಿಮಾ ಇರುವುದರಿಂದ ಅಭಿಮಾನಿಗಳು ಚಿತ್ರಮಂದಿರಕ್ಕ ಆನೆ ಮತ್ತು ಕುದುರೆ ಕರೆ ತಂದಿದ್ದಾರೆ. ಅಪ್ಪು ಫೋಟೋ ಇರುವ ಕರ್ನಾಟಕದ ಭಾವುಕ ಹಿಡಿದುಕೊಂಡಿದ್ದಾರೆ.

58

 ಕೆಆರ್‌ಜಿ ಸಂಸ್ಥೆಯು ರಾಜ್ಯಾದ್ಯಂತ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದು, ಸಿಂಗಲ್‌ ಸ್ಕ್ರೀನ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಗಂಧದ ಗುಡಿ’ ಸಿನಿಮಾ ತೆರೆಗೆ ಬಂದಿದೆ. 

68

ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗ್ಗೆ 6 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗುತ್ತಿದ್ದು, ಮೊದಲ ದಿನವೇ ಬೆಳಗ್ಗೆ 10 ಗಂಟೆಯೊಳಗೆ ಬೆಂಗಳೂರಿನ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ 50 ಪ್ರದರ್ಶನಗಳನ್ನು ಕಾಣುವ ಅಂದಾಜು ಮಾಡಲಾಗಿದೆ. ಈ ಹಿಂದೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಕೇವಲ 5 ಗಂಟೆಗಳಲ್ಲಿ ಇಷ್ಟುಪ್ರದರ್ಶನಗಳನ್ನು ಸಿನಿಮಾಗಳು ಕಂಡಿಲ್ಲ. ಹೀಗಾಗಿ ‘ಗಂಧದಗುಡಿ’ ಸಿನಿಮಾ ಹೊಸ ದಾಖಲೆಗೆ ನಾಂದಿ ಹಾಡುತ್ತಿದೆ.

78

ಪುನೀತ್‌ ಅವರು ಅಗಲಿ ಶನಿವಾರ (ಅ.29)ಕ್ಕೆ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿವಿಧ ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಜತೆಗೆ ರಾಜ್ಯದ ಎಲ್ಲ ಕಡೆ ‘ಗಂಧದ ಗುಡಿ’ಯನ್ನು ನೋಡುವ ಮೂಲಕ ಪುನೀತ್‌ ಅವರ ಕನಸಿನ ಚಿತ್ರವನ್ನು ಸೆಲೆಬ್ರೇಟ್‌ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. 

88

ಪುನೀತ್‌ ಪುಣ್ಯ ಸ್ಮರಣೆ ಅಂಗವಾಗಿ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ಸಾರಥ್ಯದಲ್ಲಿ 24 ಗಂಟೆಗಳ ಕಾಲ ಗೀತ ನಮನ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮವು ಅ.28ರ ರಾತ್ರಿ 12 ಗಂಟೆಯಿಂದ ಶುರುವಾಗಿ ಅ.29ರ ರಾತ್ರಿ 12 ಗಂಟೆಯವರೆಗೂ ನಡೆಯಲಿದೆ. ನಟರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರು ಹಾಡಲಿದ್ದಾರೆ. 

Read more Photos on
click me!

Recommended Stories