Yash: ಮಕ್ಕಳ‌ ಜೊತೆ ಪಿಕ್ ನಿಕ್ ಹೋಗಿ ಬಂದ ರಾಕಿಂಗ್ ಸ್ಟಾರ್!

First Published | Jun 9, 2022, 11:34 PM IST

ಈಗಾಗಲೇ ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ತೆರೆಕಂಡು ಎರಡು ತಿಂಗಳಾಗಿದೆ. ಚಿತ್ರದ  ಶೂಟಿಂಗ್ ಹಾಗೂ ಪ್ರಚಾರ ಅಂತಾ ಬ್ಯುಸಿಯಾಗಿದ್ದ ಯಶ್ ಇದೀಗ ತಮ್ಮ ಕುಟುಂಬದೊಂದಿಗೆ ಪಕ್ಷಿಧಾಮವೊಂದಕ್ಕೆ ಭೇಟಿ ನೀಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಸಿನಿಮಾಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೋ ಅಷ್ಟೇ ಕುಟುಂಬಕ್ಕೂ ಕ್ವಾಲಿಟಿ ಸಮಯ ಕೊಡುತ್ತಾರೆ. ಕೆಜಿಎಫ್ 2 ಸಿನಿಮಾ ರಿಲೀಸ್ ನಂತರ ಅವರು ಹೆಚ್ಚೆಚ್ಚು ಕುಟುಂಬದೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. 

ಇತ್ತೀಚೆಗಷ್ಟೇ ಗೋವಾದಲ್ಲಿ ರಜಾ ದಿನಗಳನ್ನು ಕಳೆದಿದ್ದ ಯಶ್ ಮತ್ತು ರಾಧಿಕಾ ಪಂಡಿತ್, ಇದೀಗ ಮಕ್ಕಳೊಂದಿಗೆ ಪಕ್ಷಿಧಾಮಕ್ಕೆ ವಿಸಿಟ್ ನೀಡಿದ್ದು, ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Tap to resize

ಕನಕಪುರ ಸಮೀಪದ ಪಕ್ಷಿಧಾಮವೊಂದರಲ್ಲಿ ತಮ್ಮ ಮಕ್ಕಳು ಮತ್ತು ಪತ್ನಿಯೊಂದಿಗೆ ಯಶ್ ಇಡೀ ದಿನ ಸಮಯ ಕಳೆದಿದ್ದು, ಅಲ್ಲಿನ ಪಕ್ಷಿಗಳೊಂದಿಗೆ ಆಟವಾಡಿದ್ದಾರೆ. ಅದರಲ್ಲೂ ಗಿಣಿಗಳ ಜೊತೆ ರಾಧಿಕಾ ಪಂಡಿತ್ ಮತ್ತು ಮಕ್ಕಳಾದ ಐರಾ ಮತ್ತು ಯಥರ್ವ್ ಆಟವಾಡಿದ್ದಾರೆ. 

ಗಿಣಿಗಳನ್ನು ಮೈ ಮೇಲೆ ಬಿಟ್ಟುಕೊಂಡು ರಾಕಿಂಗ್ ದಂಪತಿಗಳು ನಲಿದಿದ್ದಾರೆ. ಒಂದು ಕಡೆ ಕುಟುಂಬಕ್ಕೆ ತಮ್ಮ ಸಮಯವನ್ನು ಯಶ್ ನೀಡುತ್ತಿದ್ದರೆ, ಮತ್ತೊಂದು ಕಡೆ ಹೊಸ ಸಿನಿಮಾಗಾಗಿಯೂ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. 

Black White and Red dress-Radhika and Yash

ಇನ್ನು ಕೆಜಿಎಫ್ 2 ನಂತರ ಯಶ್ ಅವರಿಗೆ ಮಾರುಕಟ್ಟೆ ವಿಸ್ತಾರವಾಗಿರುವುದರಿಂದ ಅದೇ ಮಾದರಿಯ ಚಿತ್ರ ಮಾಡುವ ಜವಾಬ್ದಾರಿ ಕೂಡ ಅವರ ಹೆಗಲ ಮೇಲಿದೆ. ಹಾಗಾಗಿ ತುಂಬಾ ತಲೆಕೆಡಿಸಿಕೊಂಡು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ.

Latest Videos

click me!