ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಕಾವ್ಯಾ ಶಾ ಮತ್ತು ಉದ್ಯಮಿ ವರುಣ್ ಇಂದು ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಚಿತ್ರರಂಗದಲ್ಲಿ ಪ್ರೊಡಕ್ಷನ್‌ನಲ್ಲಿ ವರುಣ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕುಟುಂಬದ ಜೊತೆ ವರುಣ್ ಆತ್ಮೀಯ ಒಡನಾಟ ಹೊಂದಿದ್ದಾರೆ.
ಕಾವ್ಯಾ ಮತ್ತು ವರುಣ್ 11 ವರ್ಷಗಳಿಂದ ಪ್ರೀತಿಸುತ್ತಿದ್ದರು. 3000 ಸಾವಿರಕ್ಕೂ ಹೆಚ್ಚು ಆಮಂತ್ರಣ ಪತ್ರಿಕೆಗಳನ್ನು ತಯಾರಿ ಮಾಡಿದಿದ್ದಾರೆ. ಸಂಗೀತ್, ಮೆಹೆಂದಿ ಕಾರ್ಯಕ್ರಮ ಕೂಡ ಮಾಡಲಾಗಿತ್ತು.
ಕೆಲವು ತಿಂಗಳುಗಳ ಹಿಂದಿಯೇ ಕಾವ್ಯಾ ಮತ್ತು ವರುಣ್ ಮದುವೆ ಆಗಬೇಕಿತ್ತು ಆದರೆ ಆ ಸಮಯಕ್ಕೆ ವರುಣ್ ತಂದೆ ನಿಧನರಾದ ಕಾರಣ ಮುಂದಕ್ಕೆ ಹೋಗಿತ್ತು.
ಮದುವೆಗೆ ನಟಿ ರಮ್ಯಾ, ಸಂತೋಷ ಆನಂದ್ ರಾಮ್, ಲೂಸ್ ಮಾದಾ ಯೋಗೇಶ್, ಯುವ ರಾಜ್‌ಕುಮಾರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.
ರಮ್ಯಾ ಇದೇ ಮೊದಲ ಬಾರಿ ಮದುವೆಯಲ್ಲಿ ಕಾಣಿಸಿಕೊಂಡಿರುವುದು. ರೇಶ್ಮೆ ಸೀರೆ ಧರಿಸಿ, ಹಣೆ ಬೊಟ್ಟು ಮಲ್ಲಿಗೆ ಹೂ ಲುಕ್‌ನಲ್ಲಿ ರಮ್ಯಾರನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.