ಪಿಂಕ್ ಸೀರೆಯಲ್ಲಿ ರಾಧಿಕಾ ರೀಲ್ಸ್; ವಯಸ್ಸೇ ಆಗದ ಬ್ಯೂಟಿ ನಮ್ಮ ಸ್ಯಾಂಡಲ್‌ವುಡ್ ಸ್ವೀಟಿ ಅಂದ್ರು ಫ್ಯಾನ್ಸ್

First Published | Mar 4, 2024, 3:55 PM IST

ಬಳುಕೋ ಶಿಲೆಯಿದು, ತುಳುಕೋ ಕೊಡವಿದು ಎಂದು ರಾಧಿಕಾ ಕುಮಾರಸ್ವಾಮಿ ಮೈ ಬಳುಕಿಸಿದ್ರೆ, ವಯಸ್ಸೇ ಆಗದ ಮುದ್ದಾದ ಬ್ಯೂಟಿ ಇದು ಎಂದು ಹಾಡಿದ್ರು ಫ್ಯಾನ್ಸ್..

ರಾಧಿಕಾ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ತುಂಬಾನೆ ಆ್ಯಕ್ಟೀವ್. ಆಗಾಗ ರೀಲ್ಸ್ ಮಾಡಿ ಅಭಿಮಾನಿಗಳ ಮನಸೂರೆಗೊಳ್ತಾನೆ ಇರ್ತಾರೆ. 

ಈ ಬಾರಿ ಗುಲಾಬಿ ಬಣ್ಣದ ಸೀರೆಯುಟ್ಟು ಕೈ ತುಂಬಾ ಬಳೆ ಧರಿಸಿ, 'ಬಳುಕೋ ಶಿಲೆಯಿದು, ತುಳುಕೋ ಕೊಡವಿದು' ಎಂದು ರೀಲ್ಸ್ ಮಾಡಿದ್ದಾರೆ ರಾಧಿಕಾ. 

Tap to resize

ಎಂದಿನಂತೆ ರಾಧಿಕಾ ಮುದ್ದಾದ ಲುಕ್‌ಗೆ ಈ ಬಾರಿಯೂ ಫ್ಯಾನ್ಸ್ ಮನ ಸೋತಿದ್ದಾರೆ. ವಯಸ್ಸು 37 ಆದ್ರೂ 17ರ ಹುಡುಗಿಯಂತಿದ್ದೀರಾ ಎನ್ನುತ್ತಿದ್ದಾರೆ.

ರಾಧಿಕಾ ಈ ರೀಲ್ಸ್‌ಗೆ ಅಜಾಗ್ರತಾ ಮತ್ತು ಶೂಟಿಂಗ್ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ. ಅಜಾಗ್ರತಾ ಚಿತ್ರದ ಶೂಟಿಂಗ್ ಮಧ್ಯದಲ್ಲಿ ತೆಗೆದಿರುವ ವಿಡಿಯೋ ಇದಾಗಿದ್ದು, ಚಿತ್ರದಲ್ಲಿ ನಟಿಯ ಲುಕ್ ಅನಾವರಣಗೊಂಡಿದೆ.

ಎಂ ಶಶಿಧರ್ ನಿರ್ದೇಶನದ, ಖ್ಯಾತ ಮರಾಠಿ ಹಾಗೂ ಹಿಂದಿ ನಟ ಶ್ರೇಯಸ್ ತಲ್ಪಾಡೆ ನಟಿಸಿರುವ ಅಜಾಗ್ರತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕನ್ನಡ, ತೆಲುಗು, ತಮಿಳು, ತೆಲುಗು, ಮಲಯಾಳಂ, ಹಿಂದಿ, ಕೊಂಕಣಿ ಮತ್ತು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರದಲ್ಲಿ ವಿನಯಾ ಪ್ರಸಾದ್, ಸ್ಪರ್ಶ ರೇಖಾ,ಸುಚೇಂದ್ರ ಪ್ರಸಾದ್, ದೇವರಾಜ್ ಸೇರಿದಂತೆ ಉತ್ತಮ ತಾರಾಗಣವಿದೆ.

ರಾಧಿಕಾ ರೀಲ್ಸ್‌ಗೆ ಅಭಿಮಾನಿಗಳು ಬ್ಯೂಟಿಫುಲ್, ಹಾಟ್, ಕ್ಯೂಟ್ ಮುಂತಾದ ಕಾಮೆಂಟ್‌ಗಳ ಜೊತೆಗೆ ನಿಮ್ಗೆ ಏಜ್ ಆಗೋದೇ ಇಲ್ವಾ ಎಂದು ಕೇಳುತ್ತಿದ್ದಾರೆ. 

ಮತ್ತೊಬ್ಬರು ಕಾಮೆಂಟ್ ಮಾಡಿ, ಎಲ್ರೂ ವಯಸ್ಸಾಗ್ತಾ ಮುದುಕಿಯಾದ್ರೆ, ನಿಮ್ಗೆ ವಯಸ್ಸು ಜಾಸ್ತಿ ಆದಂಗೆಲ್ಲ ಸೌಂದರ್ಯ ಹೆಚ್ಚಾಗುತ್ತಾ ಇದೆ ಎಂದು ಶ್ಲಾಘಿಸಿದ್ದಾರೆ. 

Latest Videos

click me!