ಈ ಫೋಟೋದಲ್ಲಿರುವ ಕನ್ನಡತಿ, ಖ್ಯಾತ ನಟಿಯನ್ನು ಗುರುತಿಸಿ..

First Published | Mar 3, 2024, 12:42 PM IST

ಈ ಪೋಟೋದಲ್ಲಿ ಭರತನಾಟ್ಯದ ಭಂಗಿಯಲ್ಲಿ ಸಾಕ್ಷಾತ್ ದೇವತೆಯಂತೆ ಕಾಣುತ್ತಿರುವ ಕನ್ನಡತಿ, ಖ್ಯಾತ ನಟಿಯನ್ನು ಗುರುತು ಹಚ್ಚಿದಿರಾ? ನೃತ್ಯದ ಕೆಲ ಫೋಟೋಗಳನ್ನು ಹಂಚಿಕೊಂಡಿರುವ ನಟಿ ಈ ಬಗ್ಗೆ ಉದ್ದ ಪೋಸ್ಟನ್ನು ಬರೆದಿದ್ದಾರೆ.

ತಮ್ಮ ಇನ್ಸ್ಟಾ ಖಾತೆಯಲ್ಲಿ ತಮಗೆ ಬಹಳ ಪ್ರಿಯವಾದ ಭರತನಾಟ್ಯದ ಹಳೆಯ ಫೋಟೋಗಳನ್ನು ಹಂಚಿಕೊಂಡಿರುವ ಈ ಖ್ಯಾತ ನಟಿ ಈ ಬಗ್ಗೆ ಉದ್ದ ಟಿಪ್ಪಣಿ ಬರೆದಿದ್ದಾರೆ.

ನನ್ನ ಬೇರುಗಳು ಎಲ್ಲಿಂದ ಬಂದವೋ ಆ ಸ್ಥಳಕ್ಕೆ ಪ್ರಯಾಣಿಸಿದ ದಿನ ಇದಾಗಿದೆ. ನಿಮಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು  ಶಾಸ್ತ್ರೀಯ ನೃತ್ಯದಿಂದ ಬಾಲ್ಯ ಆರಂಭಿಸಿದೆ ಎಂದಿದ್ದಾರೆ ನಟಿ.

Tap to resize

ಹೆಚ್ಚಾಗಿ ದೇವಸ್ಥಾನಗಳಲ್ಲಿ ಪ್ರದರ್ಶನ ನೀಡಲು ನನ್ನ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದೆ. ಆ ದಿನಗಳು ನಿಜವಾಗಿಯೂ ನನಗೆ ಬಹಳಷ್ಟು ಕಲಿಸಿದವು ಮತ್ತು ನಾನು ತುಂಬಾ ಆನಂದಿಸಿದೆ ಎಂದಿದ್ದಾರೆ ಬೆಂಗಳೂರು ಮೂಲದ ನಟಿ.

ಬಹಳ ವರ್ಷಗಳ ನಂತರ ಇದನ್ನು ಮಾಡುವುದು ನಿಜವಾಗಿಯೂ ವಿಭಿನ್ನವಾಗಿತ್ತು. ಆದರೆ, ಇದು ನನ್ನ ವ್ಯಕ್ತಿತ್ವದ ದೊಡ್ಡ ಭಾಗವಾಗಿದೆ ಎಂದು ನೃತ್ಯದ ಮೇಲಿನ ಪ್ರೀತಿಯನ್ನು ಹಂಚಿಕೊಂಡಿರುವ ಈ ನಟಿ ಇತ್ತೀಚೆಗಷ್ಟೇ ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ.

ನಾನು ಅಭಿನಯ, ಭಾವ ಎಲ್ಲವನ್ನೂ ಕಲಿತದ್ದು ನೃತ್ಯದಿಂದ. ನಿಮಗಾಗಿ ನನ್ನ ಈ ಇನ್ನೊಂದು ಮುಖವನ್ನು ಪರಿಚಯಿಸುತ್ತಿದ್ದೇನೆ ಎಂದಿರುವ ಈಕೆ ಸಧ್ಯ ಟಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿ.

22 ವರ್ಷದ ಈ ನಟಿ, ಸುಮಾರು 15 ವರ್ಷಗಳ ಬಳಿಕ ವೇದಿಕೆ ಪ್ರದರ್ಶನ ನೀಡಿದ್ದು, ಗೋಧಾ ದೇವಿಯ ಅಭಿನಯ ಮಾಡಿದ್ದಾಗಿ ಹೇಳಿದ್ದಾರೆ. 

ನಾನು ಯಾವಾಗಲೂ ಧರ್ಮಗ್ರಂಥಗಳ ಬಗ್ಗೆ ಓದಲು ಇಷ್ಟಪಡುತ್ತೇನೆ ಮತ್ತು ನೀವೂ ಅದನ್ನು ಮಾಡಬೇಕು ಎಂದಿರುವ ನಟಿಯು ಇಂದು ತನ್ನ ನಟನೆಯನ್ನು ವೀಕ್ಷಿಸಲು ದೊಡ್ಡ ಅಭಿಮಾನಿ ಕುಟುಂಬವಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಫೋಟೋದಲ್ಲಿ ಗೋಧಾ ದೇವಿಯ ರೂಪದಲ್ಲಿ ವಿಭಿನ್ನವಾಗಿ ಕಾಣುತ್ತಿರುವ ಈ ನಟಿ ಮತ್ಯಾರೂ ಅಲ್ಲ, 'ಗುಂಟೂರು ಖಾರಂ'ನ ನಾಯಕಿ ಶ್ರೀ ಲೀಲಾ.

Latest Videos

click me!