ಪುಟ್ಟ ಗೌರಿ ಬೋಲ್ಡ್‌ನೆಸ್‌ಗೆ ಹಾರ್ಟ್ ಬೀಟ್ ನಿಂತೋಯ್ತು ಅಂತಿದ್ದಾರೆ ಅಭಿಮಾನಿಗಳು!

First Published | Aug 7, 2024, 3:25 PM IST

ಪುಟ್ಟ ಗೌರಿ ಮದುವೆ ಸೀರಿಯಲ್‌ನಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು, ಇದೀಗ ಗೌರಿ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಸಾನ್ಯಾ ಅಯ್ಯರ್ ತಮ್ಮ ಫೋಟೋ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. 
 

ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು, ಅದಾದ ಬಳಿಕ ಬಿಗ್ ಬಾಸ್ ಒಟಿಟಿ ಮತ್ತು ಸೀಸನ್ 9 ರ ಮೂಲಕ ಜನಪ್ರಿಯತೆ ಪಡೆದ ನಟಿ ಸಾನ್ಯಾ ಅಯ್ಯರ್ (Saanya Iyer), ಇತ್ತೀಚೆಗೆ ತಮ್ಮ ಸಿನಿಮಾ ಮತ್ತು ಫೋಟೋ ಶೂಟ್ ಮೂಲಕ ಸುದ್ದಿಯಾಗುತ್ತಿದ್ದಾರೆ. 
 

ಇಂದ್ರಜಿತ್ ಲಂಕೇಶ್ ನಿರ್ದೇಶನದ ಗೌರಿ (Gouri) ಸಿನಿಮಾ ಮೂಲಕ ಸಮರ್ಜೀತ್ ಲಂಕೇಶ್ ಜೊತೆಗೆ ಸ್ಯಾಂಡಲ್‌ವುಡ್‌ಗೆ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿರುವ ನಟಿ ಸಾನ್ಯಾ ಸದ್ಯಕ್ಕಂತೂ ಸಿನಿಮಾದ ಪ್ರೊಮೋಶನ್‌ನಲ್ಲಿ ಬ್ಯುಸಿಯಾಗಿದ್ದಾರೆ. 
 

Tap to resize

ಈಗಾಗಲೇ ಗೌರಿ ಸಿನಿಮಾದ ಹಾಡುಗಳು ಬಿಡುಗಡೆಯಾಗಿ ಸಖತ್ ಸೌಂಡ್ ಮಾಡ್ತಿವೆ, ಇದರ ನಡುವೆ ಸಾನ್ಯಾ ತಮ್ಮ ಬೋಲ್ಡ್ ಫೋಟೋ ಶೂಟ್ ಮೂಲಕ ಇಂಟರ್ನೆಟ್‌ನಲ್ಲಿ ಭರ್ಜರಿ ಸದ್ದು ಮಾಡ್ತಿದ್ದಾರೆ. ಇವರ ಹೊಸ ಹೊಸ ಲುಕ್ ಸಖತ್ ವೈರಲ್ ಆಗ್ತಿದೆ. 
 

ಇದೀಗ ಸಾನ್ಯಾ ಅಯ್ಯರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗೌರಿ ಸಿನಿಮಾದ ಟ್ರೈಲರ್ ಬಿಡುಗಡೆ (trailer launch) ಸಂದರ್ಭದಲ್ಲಿ ತೆಗೆದಂತಹ ಫೋಟೋಗಳನ್ನು ಶೇರ್ ಮಾಡಿದ್ದು, ಸಾನ್ಯಾ ಬೋಲ್ಡ್‌ನೆಸ್ ನೋಡಿ ನೆಟ್ಟಿಗರು ಸುಸ್ತಾಗಿದ್ದಾರೆ. ಪುಟ್ಟ ಗೌರಿ ಈಗ ದೊಡ್ಡೋಳು ಆಗೋಗಿದಾಳೆ ಅಂತಿದ್ದಾರೆ. 
 

ಸಾನ್ಯಾ ಬ್ಲ್ಯಾಕ್ ಆ್ಯಂಡ್ ವೈಟ್ ಕಾಂಬಿನೇಶನ್‌ನ ಡೀಪ್ ನೆಕ್ ಬಾಡಿ ಕಾನ್ ಮ್ಯಾಕ್ಸಿ ಡ್ರೆಸ್ ಧರಿಸಿದ್ದು, ಶಾರ್ಟ್ ಕರ್ಲಿ ಹೇರ್ ಸ್ಟೈಲಿನಲ್ಲಿ ನಟಿ ತುಂಬಾ ಡಿಫರೆಂಟ್ ಮತ್ತು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಸಾನ್ಯಾ ಬ್ಯೂಟಿಯನ್ನು ನೋಡಿ ಅಭಿಮಾನಿಗಳು ನೀನು ತುಂಬಾ ಹಾಟ್, ನಿನ್ನ ಹಾಟ್ನೆಸ್‌ಗೆ ಫೋನ್ ಸ್ಕ್ರೀನ್ ಮೆಲ್ಟ್ ಆಗ್ತಿದೆ ಎಂದಿದ್ದಾರೆ ಒಬ್ಬರು, ಇನ್ನೊಬ್ಬರು ನಿನ್ನನ್ನ ನೋಡಿ ಹಾರ್ಟ್ ಬೀಟ್ ಆಗೋದೆ ಒಂದು ಕ್ಷಣ ನಿಂತೊಯ್ತು ಎಂದಿದ್ದಾರೆ. ಮತ್ತೊಬ್ಬರು ಮಿಲ್ಕಿ ಬ್ಯೂಟಿ ತಮನ್ನ ತರ ಕಾಣಿಸ್ತಿದ್ದೀರಿ ಎಂದಿದ್ದಾರೆ. 
 

Latest Videos

click me!