ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ಮುದ್ದಿನ ಜೇಷ್ಠ ಪುತ್ರಿ ವೈಭವಿ ಜಗದೀಶ್ ಇದ್ದೀಗ ಸೀರೆಯಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದ್ದಾರೆ.
ಇಷ್ಟು ದಿನ ಚಿಕಿನಿ, ಶಾರ್ಟ್ ಡ್ರೆಸ್ ಅಂತ ಸುದ್ದಿಯಲ್ಲಿದ್ದ ನಟಿ ಈಗ ಮುತ್ತಿನಿಂದ ಡಿಸೈನ್ ಮಾಡಿರುವ ಡಿಸೈನರ್ ಫ್ಯಾನ್ಸ್ ಸೀರೆಯಲ್ಲಿ ಮಿಂಚುತ್ತಿದ್ದಾರೆ.
ಬಿಳಿ ಬಣ್ಣದ ಟಿಶೂರ್ ಸಿಲ್ಕ್ ಸೀರೆಗೆ ಮುತ್ತಿನಿಂದ ಡಿಸೈನ್ ಮಾಡಲಾಗಿದೆ. ಬ್ಲೌಸ್ ಡಿಸೈನ್ ನೋಡಿ ಹೆಣ್ಣು ಮಕ್ಕಳು ಫುಲ್ ಖುಷಿಯಾಗಿದ್ದಾರೆ.
ಮೇಡಂ ಮದುವೆ ಸಿದ್ಧತೆ ಶುರುವಾಯ್ತಾ? ಸೀರೆಯಲ್ಲಿ ಚೆಂದ ಕಾಣಿಸುತ್ತೀರಾ ಆದಷ್ಟು ಬೇಗ ಮದುವೆ ಮಾಡಿಕೊಳ್ಳಿ ಕಾಮೆಂಟ್ಸ್‌ನ ತುಂಬುತ್ತಿದ್ದಾರೆ ಫ್ಯಾನ್ಸ್.
ಮಾಯಾ ಡಿಸೈನರ್ ಸ್ಟುಡಿಯೋ ಈ ಸೀರೆಯನ್ನು ಡಿಸೈನ್ ಮಾಡಿದ್ದಾರೆ. ಚೇತನ್ ರಾಯ್ ರಜಪುತ್ ಫೋಟೋ ಕ್ಲಿಕ್ ಮಾಡಿದ್ದು ಪ್ರಶಾಂತ್ ಮೇಕಪ್ ಮಾಡಿದ್ದಾರೆ.
ಈ ಸೀರೆಯ ಲುಕ್ ಹೆಚ್ಚಿಸುತ್ತಿರುವ ಮತ್ತೊಂದು ಹೈಲೈಟ್ ಏನೆಂದರೆ ವೈಭವಿ ಯಾವುದೇ ರೀತಿಯ ಆಭರಣಗಳನ್ನು ಧರಿಸಿಲ್ಲ. ಕೈ ಕಾಲಿ, ಕುತ್ತಿಗೆ ಕಾಲಿ ಮತ್ತು ಕಿವಿ ಓಲೆನೂ ಇಲ್ಲ.