ಮತ್ತೆ ಬಿಡುಗಡೆ ಆಗಲಿದೆ ಪುನೀತ್ ರಾಜ್‌ಕುಮಾರ್ 'ಆಕಾಶ್' ಸಿನಿಮಾ...ಅಪ್ಪು ಫ್ಯಾನ್ಸ್‌ಗೆ ಭಾರೀ ಹಬ್ಬ!

Published : Jan 04, 2026, 12:01 PM IST

ಆಕಾಶ್ ಹೆಸರಿನ ಸರಳ, ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದರು. ಸಿನಿಮಾದ ನಾಯಕಿಯಾಗಿ ನಟಿಸಿದ್ದು ನಟಿ ರಮ್ಯಾ. 'ಆಕಾಶ್' ಸಿನಿಮಾದ 'ನೀನೆ ನೀನೆ ಮನಸೆಲ್ಲ ನೀನೆ' ಹಾಡು ಇಂದಿಗೂ ಸಹ ಕನ್ನಡದ ಬಲು ಜನಪ್ರಿಯ ಹಾಡುಗಳಲ್ಲಿ ಒಂದು. ಪುನೀತ್ ನಟನೆಯ ಆಕಾಶ್ ಬಿಡುಗಡೆ ಯಾವಾಗ?

PREV
110

ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಮ್ಮನ್ನಗಲಿ ಹಲವು ವರ್ಷಗಳು ಕಳೆದರೂ ಅಭಿಮಾನಿಗಳ ಮನಸ್ಸಿಂದ ಮರೆಯಾಗಿಲ್ಲ. ಈಗಲೂ ಬಹಳಷ್ಟು ಜನರು ಅಪ್ಪುವನ್ನು ನೆನಪಿಸಿಕೊಳ್ಳುತ್ತಾರೆ, ಕೊಂಡಾಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವೂ ಅಪ್ಪು ಅವರ ಚಿತ್ರ, ವಿಡಿಯೋ, ಸಿನಿಮಾ ದೃಶ್ಯಗಳು, ಅಪ್ಪು ಅವರ ಬಗೆಗಿನ ಪೋಸ್ಟ್‌ಗಳು ಹರಿದಾಡುತ್ತಲೇ ಇರುತ್ತವೆ.

210

ಪುನೀತ್ ಅವರ ಫ್ಯಾನ್ಸ್‌ಗಳು ತಮ್ಮ 'ರಾಜಕುಮಾರ'ನನ್ನು ಎಂದೆಂದಿಗೂ ಜೀವಂತವಾಗಿಡಲು ಪ್ರಯತ್ನಿಸುತ್ತಲೇ ಇರುತ್ತಾರೆ. ಇದೀಗ ಅಪ್ಪು ಫ್ಯಾನ್ಸ್‌ಗಳಿಗೆ ಮತ್ತೊಂದು ಖುಷಿಯ ಸಮಾಚಾರ ಸಿಕ್ಕಿದೆ. ಅದೇನು ಅಂತ ನೋಡಿ..

310

ಹೌದು, ಪುನೀತ್ ಅಭಿಮಾನಿಗಳಿಗೆ ಹೊಸದೊಂದು ಹಬ್ಬ ಕಾದಿದೆ. ಅವರು ನಟಿಸಿರುವ ಹಳೆಯ ಸಿನಿಮಾವೊಂದು ಮರುಬಿಡುಗಡೆ ಆಗುತ್ತಿದೆ. ಅದೂ ಕೂಡ ಅತಿಂಥ ಸಿನಿಮಾ ಅಲ್ಲ, ಆಕಾಶ್. ಹೌದು, ಪುನೀತ್ ಅವರು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಜೊತೆ ನಟಿಸಿರುವ 5ನೇ ಚಿತ್ರವೇ ಆಕಾಶ್.

410

ಈ ಚಿತ್ರದ ಮೂಲಕ ನಟಿ ರಮ್ಯಾ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರು. ಪುನೀತ್-ರಮ್ಯಾ ಜೋಡಿಯ ಈ ಸಿನಿಮಾ 2005ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ಮತ್ತೆ ಬಿಡುಗಡೆ ಅಗುತ್ತಿದೆ.

510

ಆಕಾಶ್ ಮರುಬಿಡುಗಡೆ ಯಾವಾಗ?

ಪುನೀತ್ ನಟನೆಯ ಆಕಾಶ್ ಸಿನಿಮಾ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಾದ ಮಾರ್ಚ್ 17ರ ಪ್ರಯುಕ್ತ, ಮಾರ್ಚ್ 13ರಂದು ಮರುಬಿಡುಗಡೆ ಆಗಲಿದೆ. 20 ವರ್ಷಗಳ ಬಳಿಕ ಮತ್ತೆ ಸಿನಿಪ್ರೇಕ್ಷಕರು, ಪುನೀತ್ ಅಭಿಮಾನಿಗಳು ತೆರೆಯೆ ಮೇಲೆ ಮತ್ತೆ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲಿದ್ದಾರೆ.

610

ಮಾರ್ಚ್ 13 ರಂದು 'ಆಕಾಶ್' ಸಿನಿಮಾ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ಮತ್ತೆ ಪ್ರದರ್ಶನ ಕಾಣಲಿದೆ. 2005 ರಲ್ಲಿ ಬಿಡುಗಡೆ ಆಗಿದ್ದ 'ಆಕಾಶ್' ಸಿನಿಮಾ ಆಗಿನ ಕಾಲದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿತ್ತು. ಬರೋಬ್ಬರಿ 200 ದಿನಗಳಷ್ಟು ಪ್ರದರ್ಶನ ಕಂಡಿತ್ತು ಈ ಸಿನಿಮಾ. ಇದೀಗ ಮರುಬಿಡುಗಡೆಗೆ ಸಜ್ಜಾಗಿದೆ.

710

ಆಕಾಶ್ ಹೆಸರಿನ ಸರಳ, ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ನಟಿಸಿದ್ದರು. ಸಿನಿಮಾದ ನಾಯಕಿಯಾಗಿ ನಟಿಸಿದ್ದು ನಟಿ ರಮ್ಯಾ. 'ಆಕಾಶ್' ಸಿನಿಮಾದ 'ನೀನೆ ನೀನೆ ಮನಸೆಲ್ಲ ನೀನೆ' ಹಾಡು ಇಂದಿಗೂ ಸಹ ಕನ್ನಡದ ಬಲು ಜನಪ್ರಿಯ ಹಾಡುಗಳಲ್ಲಿ ಒಂದು.

810

ಮಾರ್ಚ್ 17 ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಅದಕ್ಕೆ ತುಸು ಮುಂಚಿತವಾಗಿ ಅಂದರೆ ಮಾರ್ಚ್ 13ರಂದೇ 'ಆಕಾಶ್' ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದೆ. ಪಿಆರ್‌ಕೆ ಪ್ರೊಡಕ್ಷನ್ಸ್ ವತಿಯಿಂದ 'ಆಕಾಶ್' ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದ್ದು, ಮರು ಬಿಡುಗಡೆ ಪೋಸ್ಟರ್ ಅನ್ನು ರಾಘವೇಂದ್ರ ರಾಜ್‌ಕುಮಾರ್, ಪಿಆರ್‌ಕೆ ಪ್ರೊಡಕ್ಷನ್ ಇನ್ನಿತರರು ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಸಹ 'ಆಕಾಶ್' ಸಿನಿಮಾ ಮರು ಬಿಡುಗಡೆಗೆ ಪ್ರಚಾರ ಮಾಡುವ ಸಾಧ್ಯತೆ ಇದೆ.

910

'ಆಕಾಶ್' ಸಿನಿಮಾವನ್ನು ಮಹೇಶ್ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಆ ಸಿನಿಮಾವನ್ನು ಹೋಮ್‌ಬ್ಯಾನರ್‌ ಅಡಿಯಲ್ಲೇ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. ಆಗಿನ ಸ್ಟಾರ್ ಸಂಗೀತ ನಿರ್ದೇಶಕ ಆರ್‌ಪಿ ಪಟ್ನಾಯಕ್ ಈ ಸಿನಿಮಾಗೆ ಸಂಗೀತ ನೀಡಿದ್ದರು.

1010

ಸಿನಿಮಾದ 'ನೀನೆ ನೀನೆ ಹಾಡು' ಸೇರಿದಂತೆ ಇನ್ನೂ ಕೆಲವು ಹಾಡುಗಳು ಸೂಪರ್ ಹಿಟ್ ಆಗಿದ್ದವು. ರಮ್ಯಾ-ಪುನೀತ್ ಜೋಡಿಯ ಈ ಸಿನಿಮಾ ಬಗ್ಗೆ ಇಂದಿಗೂ ಕೂಡ ಅಭಿಮಾನಿಗಳು ಮಾತನ್ನಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories