ಅಪ್ಪು 'ಜೇಮ್ಸ್' ಪ್ರೊಡ್ಯೂಸರ್ ಭರ್ಜರಿ ಕಂಬ್ಯಾಕ್; ಭಾರೀ ಮೊತ್ತಕ್ಕೆ 'ಪೆದ್ದಿ' ಡಿಸ್ಟ್ರಿಬ್ಯೂಷನ್ ರೈಟ್ಸ್!

Published : May 10, 2026, 01:59 PM IST

ನಗುಮುಖದ ಒಡೆಯ ಪುನೀತ್ ರಾಜ್‌ಕುಮಾರ್ ನಟಿಸಿದ ಕಟ್ಟ ಕಡೆಯ ಸಿನಿಮಾ ಜೇಮ್ಸ್. 50 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ 151 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು. ಅಪ್ಪು ನಮ್ಮನ್ನ ಅಗಲಿದ ನಂತ್ರ ತೆರೆಕಂಡ ಸಿನಿಮಾ ಇದಾಗಿತ್ತು.

PREV
16

ದಾಖಲೆ ಮೊತ್ತಕ್ಕೆ ಪೆದ್ದಿ ಡಿಸ್ಟ್ರಿಬ್ಯೂಷನ್ ರೈಟ್ಸ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರದ ಪ್ರೊಡ್ಯೂಸರ್ ಕಿಶೋರ್ ಪತ್ತಿಕೊಂಡ (Kishore Pathikonda), ಸದ್ಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ರಾಮ್ ಚರಣ್-ಶಿವಣ್ಣನ ಪೆದ್ದಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿ ಮಾಡೋ ಮೂಲಕ ಮತ್ತೆ ಸಖತ್ ಸುದ್ದಿಯಾಗಿದ್ದಾರೆ. ಏನದು ಮ್ಯಾಟರ್ ಅನ್ನೋದಕ್ಕೆ ಈ ಸ್ಟೋರಿ ನೋಡಿ.

26

ಪೆದ್ದಿ ವಿತರಣಾ ಹಕ್ಕುಗಳಷ್ಟಿಲ್ಲ ಕನ್ನಡ ಸ್ಟಾರ್ಸ್ ಕಲೆಕ್ಷನ್!

ಜೇಮ್ಸ್.. ನಮ್ಮ ರಾಜರತ್ನ, ಇಡೀ ಕರುನಾಡೇ ಕೊಂಡಾಡಿದ ಕರ್ನಾಟಕರತ್ನ, ದೊಡ್ಮನೆಯ ಮಿಸ್ಟರ್ ಪರ್ಫೆಕ್ಟ್, ನಗುಮುಖದ ಒಡೆಯ ಪುನೀತ್ ರಾಜ್‌ಕುಮಾರ್ ನಟಿಸಿದ ಕಟ್ಟ ಕಡೆಯ ಸಿನಿಮಾ. 50 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ 151 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು. ಯಾಕಂದ್ರೆ ಅಪ್ಪು ನಮ್ಮನ್ನ ಅಗಲಿದ ನಂತ್ರ ತೆರೆಕಂಡ ಸಿನಿಮಾ ಇದಾಗಿತ್ತು.

36

ಥೇಟ್ ಸೋಲ್ಜರ್ ರೀತಿ ಕಾಣ್ತಿದ್ದ ಅಪ್ಪು, ನೋಡುಗರ ಕಣ್ಣು ಕುಕ್ಕಿದ್ದು ಸುಳ್ಳಲ್ಲ. ಅದ್ರ ಹಿಂದೆ ಡೈರೆಕ್ಟರ್ ಬಹದ್ದೂರ್ ಚೇತನ್ ಅನ್ನೋ ಮಾಸ್ಟರ್ ಮೈಂಡ್ ಹಾಗೂ ಅವ್ರ ಕನಸು ನನಸು ಮಾಡಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇದ್ದರು. ಕಿಶೋರ್ ಈ ಚಿತ್ರದ ಮೂಲಕ ರಾಜರತ್ನ ಅಪ್ಪುಗೆ ಬಹಳ ಹತ್ತಿರ ಆಗಿದ್ದಲ್ಲದೆ, ಸಿನಿಮಾನ ತುಂಬಾ ಪ್ಯಾಷನ್‌ನಿಂದ ರಿಚ್ ಆಗಿ ನಿರ್ಮಾಣ ಮಾಡಿದ್ರು.

46

ಯೆಸ್.. ಜೂನ್ 4ಕ್ಕೆ ವರ್ಲ್ಡ್ ವೈಡ್ ಬಿಡುಗಡೆ ಆಗ್ತಿರೋ ಪೆದ್ದಿ ಸಿನಿಮಾದ ಕರ್ನಾಟಕ ಡಿಸ್ಟ್ರಿಬ್ಯೂಷನ್ ರೈಟ್ಸ್ ಬರೋಬ್ಬರಿ 18 ಕೋಟಿ ಕೊಟ್ಟು ತಮ್ಮದಾಗಿಸಿಕೊಳ್ಳುತ್ತಿದ್ದಾರಂತೆ ಕಿಶೋರ್ ಪತ್ತಿಕೊಂಡ. ಈಗಾಗ್ಲೇ ಮಾತುಕತೆ ಮುಗಿಸಿ, 3 ಕೋಟಿ ಅಡ್ವಾನ್ಸ್ ಕೂಡ ನೀಡಿರೋ ಜೇಮ್ಸ್ ಪ್ರೊಡ್ಯೂಸರ್ ಸದ್ಯದಲ್ಲೇ ಪೆದ್ದಿ ಕರ್ನಾಟಕ ವಿತರಕ ಅನಿಸಿಕೊಳ್ಳಲಿದ್ದಾರೆ.

56

ಅಂದಹಾಗೆ ಕಿಶೋರ್ ಪತ್ತಿಕೊಂಡ ನಿರ್ಮಾಪಕರಾಗೋಕೆ ಮುನ್ನ ಡಿಸ್ಟ್ರಿಬ್ಯೂಟರ್ ಹಾಗೂ ಪ್ರದರ್ಶಕರಾಗಿ ಬಹುದೊಡ್ಡ ಹೆಸರು ಮಾಡಿದವರು. ಹೊಸಪೇಟೆಯ ಬಾಲ ಥಿಯೇಟರ್ ಮಾಲೀಕರೂ ಆಗಿರೋ ಕಿಶೋರ್, ಶಿವಣ್ಣನ ಓಂ ಸಿನಿಮಾನ ಬದಲಾದ ತಂತ್ರಜ್ಞಾನದಲ್ಲಿ ಅಂದ್ರೆ 4Kನಲ್ಲಿ ರೀ-ರಿಲೀಸ್ ಮಾಡಿದ್ದರು. 

66

ಕಿಶೋರ್‌ಗೆ ಅವ್ರ ಗೆಳೆಯರಾಗಿರೋ ದಾವಣಗೆರೆಯ ವಸಂತ ಥಿಯೇಟರ್ ಮಾಲೀಕ ವಿಶ್ವದೀಪ್ ಕೂಡ ಸಾಥ್ ನೀಡ್ತಿದ್ದಾರಂತೆ. ಒಟ್ಟಾರೆ ಪೆದ್ದಿ ಸಿನಿಮಾದ ವಿತರಣಾ ಹಕ್ಕುಗಳಿಗೆ ನೀಡಿರೋ ಮೊತ್ತದಷ್ಟು ಇತ್ತೀಚಿನ ಕನ್ನಡ ಸಿನಿಮಾಗಳು ಗಳಿಕೆ ಮಾಡದೇ ಇರೋದು ಬೇಸರದ ಸಂಗತಿ.

ಕೃಪೆ: ಫೇಸ್‌ಬುಕ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories