ರಶ್ಮಿಕಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ‘Su From So’ ನಟ ಜೆಪಿ ತುಮಿನಾಡು

Published : May 06, 2026, 05:15 PM IST

JP Tuminadu: ‘ಸು ಪ್ರಮ್ ಸೋ’ ಸಿನಿಮಾ ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಪಡೆದ ನಟ, ನಿರ್ದೇಶಕ ಜೆಪಿ ತುಮಿನಾಡು ಇದೀಗ ತಮ್ಮ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದು, ರಶ್ಮಿಕಾ ಎನ್ನುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

PREV
16
ಜೆಪಿ ತುಮಿನಾಡು

ಕನ್ನಡ ಚಿತ್ರರಂಗದಲ್ಲಿ ಕಳೆದ ವರ್ಷ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಕಾಮಿಡಿ ಹಾರರ್ ಸಿನಿಮಾ ‘ಸು ಫ್ರಮ್ ಸೋ’ ಚಿತ್ರದ ನಟ, ನಿರ್ದೇಶಕ ಜೆಪಿ ತುಮಿನಾಡು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರಿನಲ್ಲಿ ಇಂದು ಅದ್ದೂರಿಯಾಗಿ ವಿವಾಹ ಸಮಾರಂಭ ನೆರವೇರಿದೆ.

26
ರಶ್ಮಿಕಾ ಜೊತೆ ಹಸೆಮಣೆ ಏರಿದ ನಟ

ಜೆಪಿ ತುಮಿನಾಡು ಅವರು ರಶ್ಮಿಕಾ ಎನ್ನುವವರ ಜೊತೆ ಇಂದು ಮೇ 6ರಂದು ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೊಗಳು ವೈರಲ್ ಆಗುತ್ತಿವೆ. ಕಳೆದ ವರ್ಷ ಬ್ಲಾಕ್ ಬಸ್ಟರ್ ಸಿನಿಮಾ ನೀಡಿದ ನಟ, ಈ ವರ್ಷ ಬ್ಲಾಕ್ ಬಸ್ಟರ್ ನಟ ಈ ವರ್ಷ ಬ್ಲಾಕ್ ಬಸ್ಟರ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

36
ಮಂಗಳೂರಿನಲ್ಲಿ ನಡೆದ ಅದ್ಧೂರಿ ಮದುವೆ

ಮಂಗಳೂರಿನ ಪಿಲಿಕುಳದ ಸ್ಕೌಟ್ ಭವನದಲ್ಲಿ ಜೆಪಿ ತುಮಿನಾಡು ಮದುವೆ, ಭರ್ಜರಿಯಾಗಿಯೇ ನಡೆದಿದೆ. ಕನ್ನಡ ಹಾಗೂ ತುಳು ಚಿತ್ರರಂಗದ ತಾರೆಯರಾದ ರಾಜ್ ಬಿ ಶೆಟ್ಟಿ, ರೂಪೇಶ್ ಶೆಟ್ಟಿ, ಅರ್ಜುನ್ ಕಾಪಿಕಾಡ್, ದೇವದಾಸ್ ಕಾಪಿಕಾಡ್ ಸೇರಿ ಹಲವಾರು ಸೆಲೆಬ್ರಿಟಿಗಳು ಜೆಪಿ ಮದುವೆಗೆ ಮೆರುಗು ನೀಡಿದ್ದಾರೆ.

46
ಸೂಪರ್ ಹಿಟ್ ಆಗಿದ್ದ ‘ಸು ಪ್ರಮ್ ಸೋ’

ಜೆಪಿ ತುಮಿನಾಡು ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರ ಯಾವುದೇ ಯಾವುದೇ ನಿರೀಕ್ಷೆ ಇಲ್ಲದೇ ಥಿಯೇಟರ್ ಗೆ ಕಾಲಿಟ್ಟಿತ್ತು. ಬಳಿಕ ವೀಕ್ಷಕರಿಂದ, ಸೀನಿರಸಿಕರಿಂದಲೇ ಜನರಿಂದ ಜನಕ್ಕೆ ಸಸುದ್ದಿ ಹಬ್ಬಿ, ಜನ ಸಾಗರೋಪಾದಿಯಲ್ಲಿ ಥಿಯೇಟರ್ ಕಡೆಗೆ ಹರಿದು ಬರಲು ಶುರು ಮಾಡಿದ್ದರು. ಆ ಮೂಲಕ ಜೆಪಿ ತುಮಿನಾಡು ಮೊದಲ ಪ್ರಯತ್ನವೇ ಸೂಪರ್ ಹಿಟ್ ಆಗಿತ್ತು.

56
ಕರಾವಳಿಯ ರಂಗಪ್ರತಿಭೆ

ಆರಂಭದಲ್ಲಿ ಸಣ್ನ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಜೆಪಿ ತುಮಿನಾಡು, ಕರಾವಳಿಯ ರಂಗಭೂಮಿ ಕಲಾವಿದ. ರಂಗಭೂಮಿಯಲ್ಲಿ 14 ವರ್ಷ ತಮ್ಮನ್ನು ತೊಡಗಿಸಿಕೊಂಡಿದ್ದ ಜೆಪಿ ಹಲವು ನಾಟಕಗಳನ್ನು, ರಚಿಸಿ, ನಿರ್ದೇಶನ ಮಾಡಿ ನಟಿಸಿದ್ದರು. ಹಲವಾರು ಸಿನಿಮಾಗಳಲ್ಲೂ ಇವರು ನಟಿಸಿದ್ದಾರೆ.

66
ಜೆಪಿ ನಟಿಸಿದ ಸಿನಿಮಾಗಳು

ಜೆಪಿ ತುಮಿನಾಡು ಚಂದನವನದಲ್ಲಿ ‘ಒಂದು ಮೊಟ್ಟೆಯ ಕಥೆ’, 'ಸಪ್ತಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ’, ’ಸು ಫ್ರಮ್ ಸೋ’, ‘ಕಟಪಾಡಿ ಕಟ್ಟಪ್ಪ’, ‘ಗರುಡ ಗಮನ ವೃಷಭ ವಾಹನ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹಾಗೂ ತುಳು ಚಿತ್ರ ‘ಕಟ್ಟೆಮಾರ್’ನಲ್ಲಿ ನಟಿಸಿದ್ದಾರೆ. ಸದ್ಯ ಮದುವೆಯಾಗಿ ಪುಟ್ಟ ಬ್ರೇಕ್ ತೆಗೆದುಕೊಂಡಿರುವ ಜೆಪಿ ಶೀಘ್ರದಲ್ಲಿ ಮತ್ತೊಂದು ಹಾರರ್ ಕಥೆಯೊಂದಿಗೆ ಬರುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories