ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯಿಸಿರುವ ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ಅಕ್ಟೋಬರ್ 25ರಂದು ಆನ್‌ಲೈನ್ ಮೂಲಕ ಗಂಧದ ಗುಡಿ ಪ್ರೀಮಿಯರ್ ಶೋ ಟಿಕೆಟ್ ಬುಕ್ಕಿಂಗ್ ಆರಂಭವಾಗಿತ್ತು. ಒಂದು ದಿನ ಕಳೆದಿಲ್ಲ ಆಗಲೇ ಟಿಕೆಟ್ ಸೋಲ್ಡ್ ಔಟ್.
ಪಿಆರ್‌ಕೆ ಪ್ರೊಡಕ್ಷನ್ ಮತ್ತು ಪಿಆರ್‌ಕೆ ಆಡಿಯೋ ಸಂಸ್ಥೆ ಸೋಷಿಯಲ್ ಮೀಡಿಯಾದ ಮೂಲಕ ಟಿಕೆಟ್ ಸೋಲ್ಡ್ ಔಟ್ ಆಗಿರುವ ಮಾಹಿತಿ ಹಂಚಿಕೊಂಡಿದ್ದಾರೆ. ಇದಕ್ಕೆ ಯಶ್ ಮತ್ತು ತಮಿಳು ನಟ ಸೂರ್ಯ ಮಾತುಗಳನ್ನು ಸೇರಿಸಿಕೊಂಡಿದ್ದಾರೆ.
ಕರ್ನಾಟಕದ ಜನತೆ ಗಂಧದ ಗುಡಿ ಸಿನಿಮಾ ನೋಡಲು ಎಷ್ಟು ಕಾಯುತ್ತಿದ್ದಾರೆ ಎಂದು ಈ ಮೂಲಕ ತಿಳಿಯುತ್ತದೆ. ಕರುನಾಡ ಮಾಣಿಕ್ಯನಿಗೆ ಪ್ರತಿಯೊಬ್ಬರಿಂದಲೂ ಸಪೋರ್ಟ್ ಸಿಕ್ಕಿದೆ.
ಬೆಂಗಳೂರಿನ ನರ್ತಕಿ ಥಿಯೇಟರ್ ಆವರಣದಲ್ಲಿ 80 ಅಡಿ ಎತ್ತರ ಇರುವ ಪುನೀತ್ ಅವರ ಬೃಹತ್ ಕಟೌಟ್ ರಾರಾಜಿಸುತ್ತಿದೆ. ಪುನೀತ್ ಸಮಾಧಿ ಇರುವ ಕಂಠೀರವ ಸ್ಟುಡಿಯೋ ಆವರಣದಲ್ಲಿ 75 ಕಟೌಟ್‌ಗಳನ್ನು ಇಡಲಾಗುತ್ತಿದೆ.
ರಾಜ್ಯದೆಲ್ಲೆಡೆ ಪುನೀತ್ ಹವಾ ಶುರುವಾಗಿದ್ದು, ವಿವಿಧೆಡೆ ಅಪ್ಪು ಕಟೌಟ್‌ಗಳು ಗಮನಸೆಳೆಯುತ್ತಿವೆ.ಗಂಧದ ಗುಡಿ’ ಚಿತ್ರವನ್ನು ಪಿಆರ್‌ಕೆ ಬ್ಯಾನರ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ್ದು, ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ.