ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಈ ವರ್ಷ ದೀಪಾವಳಿ ಹಬ್ಬವನ್ನು ತಮ್ಮ ಅವಳಿ ಮಕ್ಕಳ ಜೊತೆ ಅದ್ಧೂರಿಯಾಗಿ ಆಚರಿಸಿದ್ದಾರೆ.
26
'ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು. ನಮ್ಮ ಮುದ್ದು ಕಣ್ಮಣಿಗಳ ಮೊದಲ ಬೆಳಕಿನ ಹಬ್ಬ ದೀಪಾವಳಿ' ಎಂದು ಅಮೂಲ್ಯ ಬರೆದುಕೊಂಡಿದ್ದಾರೆ.
36
ವೈಟ್ ಆಂಡ್ ವೈಟ್ ಜುಬ್ಬಾ ಪೈಜಾಮಾದಲ್ಲಿ ಅವಳಿ ಮಕ್ಕಳು ಮಿಂಚಿದ್ದಾರೆ. ಇಬ್ಬರೂ ಸಖತ್ ಕೂಲ್ ಆಗಿ ಯಾವುದೇ ತಂಟೆ ತಕರಾರು ಇಲ್ಲದೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
46
ಗ್ರೀನ್ ಆಂಡ್ ಪಿಂಕ್ ಬಣ್ಣದ ಲಂಗ ದಾವಣಿಯಲ್ಲಿ ಅಮೂಲ್ಯ ಮಿಂಚಿದ್ದಾರೆ. ಪ್ರತಿಯೊಂದು ಹಬ್ಬಕ್ಕೂ ಅಮೂಲ್ಯ ವಿಭಿನ್ನ ಶೈಯಲ್ಲಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.
56
'ಪೇರೆಂಟಿಂಗ್ ತುಂಬಾನೇ ಡಿಫರೆಂಟ್ ಪ್ರಪಂಚ. ಸಣ್ಣ ಪುಟ್ಟ ವಿಚಾರಗಳಲ್ಲೂ ಸಂತೋಷ ತರುತ್ತಾರೆ. ಖಂಡಿತ ಒತ್ತಡ ಇದೆ ಆದರೆ ಪುಟ್ಟ ಬೆರಳುಗಳು ನಿಮ್ಮ ಕೈ ಹಿಡಿದುಕೊಂಡಾಗ ಅಥವಾ ನಿಮ್ಮನ್ನು ನೋಡಿದಾಗ ಎಲ್ಲರವೂ ಮರೆತು ಹೋಗುತ್ತದೆ' ಎಂದು ಮದರ್‌ಹುಡ್ ಬಗ್ಗೆ ಅಮೂಲ್ಯ ಮಾತನಾಡಿದ್ದಾರೆ.
66
'ಅವಳಿ ಮಕ್ಕಳು ಬೆಳಗ್ಗೆ ಎಷ್ಟು ಖುಷಿ ಕೊಡುತ್ತಾರೆ ಸಂಜೆ ಅಷ್ಟೇ ಕಾಟ ಕೊಡುತ್ತಾರೆ. ನನ್ನ ಮಕ್ಕಳು 28 ಸೆಕೆಂಡ್ ಅಂತರದಲ್ಲಿ ಹುಟ್ಟಿರುವುದು ಸಣ್ಣ ಮಗ ತುಂಟ ದೊಡ್ಡ ಮಗ ಸೈಲೆಂಟ್. ಹಿಂಸೆ ಆದರೆ ಮಾತ್ರ ಇಬ್ಬರೂ fuss ಮಾಡುವುದು' ಎಂದಿದ್ದಾರೆ.