Ballari: ಅಪ್ಪು ಮೇಲಿನ ಅಭಿಮಾನ: ಊರಿನ ಜನರಿಗಾಗಿ ಒಂದು ಶೋ ಬುಕ್ ಮಾಡಿದ ಫ್ಯಾನ್ಸ್‌..!

Suvarna News   | Asianet News
Published : Mar 20, 2022, 09:46 AM ISTUpdated : Mar 20, 2022, 10:46 AM IST

ನರಸಿಂಹ ಮೂರ್ತಿ ಕುಲಕರ್ಣಿ ಬಳ್ಳಾರಿ(ಮಾ.20):  ಕೋಟ್ಯಂತರ ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‌ಕುಮಾರ್‌(Puneeth Rajkumar) ಅವರ ಅಭಿನಯದ ಕೊನೆಯ ಜೇಮ್ಸ್‌(James) ಸಿನಿಮಾ ಯಾರು ಕೂಡ ಮಿಸ್ ಮಾಡಿಕೊಳ್ಳಬಾರದೆಂದು ಈ ಗ್ರಾಮದ ಅಭಿಮಾನಿಗಳು ಊರಿಗೆಲ್ಲ ಟಿಕೆಟ್ ಹಂಚಿದ್ದಾರೆ.   

PREV
15
Ballari: ಅಪ್ಪು ಮೇಲಿನ ಅಭಿಮಾನ: ಊರಿನ ಜನರಿಗಾಗಿ ಒಂದು ಶೋ ಬುಕ್ ಮಾಡಿದ ಫ್ಯಾನ್ಸ್‌..!

ಹೌದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಮಾನ ಒಬ್ರೂ ಹಾಲಿನ ಅಭಿಷೇಕ ಮಾಡಿದ್ರೇ, ಮತ್ತೊಬ್ರು ತೆಂಗಿನ ಕಾಯಿ ಒಡೆದು ಹೂವಿನ ಹಾರ ಹಾಕಿ ಪೂಜೆ ‌ಮಾಡ್ತಾರೆ. ಆದ್ರೇ ಬಳ್ಳಾರಿ(Ballari) ತಾಲೂಕಿನ ಸಂಗನಕಲ್ಲು ಗ್ರಾಮದ ಅಭಿಮಾನಿಗಳು ಜೇಮ್ಸ್ ಚಿತ್ರವನ್ನು ನಮ್ಮೂರಿನ ಮಹಿಳೆಯರು(Women) ಮಕ್ಕಳು ಸೇರಿದಂತೆ ಎಲ್ಲರೂ ನೋಡಬೇಕೆಂದು ಇಂದು (ಭಾನುವಾರ)ದ ಮಾರ್ನಿಂಗ್ ಶೋ ಬುಕ್ ಮಾಡಿದ್ದಾರೆ.

25

ಅಪ್ಪು ಸಿನಿಮಾಕ್ಕೆ(Movie) ಕನಿಷ್ಠ ವಾರ ಹತ್ತು ದಿನ ನೂಕು ನುಗ್ಗಲು ಇರುತ್ತದೆ ನಮ್ಮೂರಿನ ಮಹಿಳೆಯರು ಮಕ್ಕಳು ಟಾಕೀಸ್ ಮುಂದೆ ಬಂದು ತೊಂದರೆ ಅನುಭವಿಸಬಾರದೆಂದು ಗ್ರಾಮದ ಅಭಿಮಾನಿಗಳು (Fans) ಮನೆ ಮನೆಗೆ ಟಿಕೆಟ್ ಹಂಚಿದ್ದಾರೆ. 

35

ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಚಿತ್ರಮಂದಿರದ ಮಾಲೀಕರು ಟಾಕೀಸ್ ತುಂಬಿ ತುಳುಕುತ್ತಿದ್ರು, ನಟರಾಜ್ ಕಾಂಪ್ಲೆಕ್ಸ್ ಥಿಯೇಟರ್ ಮಾಲೀಕರಾದ ಲಕ್ಷಿಕಾಂತರೆಡ್ಡಿ ಭಾನುವಾರದ ಮಾರ್ನಿಂಗ್ ಶೋ ಟಿಕೆಟ್ ಸಂಪೂರ್ಣವಾಗಿ ಸಂಗನಕಲ್ಲು ಗ್ರಾಮಸ್ಥರಿಗೆ ನೀಡಿದ್ದಾರೆ. 

45

ಒಟ್ಟು 600 ಟಿಕೆಟ್ ಬುಕ್ ಮಾಡಿದ್ದು ಜೇಮ್ಸ್ ಜಾತ್ರೆಯಲ್ಲಿ ಇಂದು ಸಂಗನಕಲ್ಲು ಗ್ರಾಮದ ಅಭಿಮಾನಿಗಳ ಪಾಲ್ಗೊಳ್ಳಲಿದ್ದಾರೆ ಎಂದು ಅಭಿಮಾನಿಗಳಾದ ಸಂಗನಕಲ್ಲು ವಿಜಯ್ ಕುಮಾರ್, ಸುಂಕಯ್ಯ, ಕೃಷ್ಣ, ಶ್ರೀನಿವಾಸ, ರವಿ ತಿಳಿಸಿದ್ದಾರೆ.

55

ವಿಶೇಷವಾಗಿ ಅಪ್ಪು ಹುಟ್ಟುಹಬ್ಬವನ್ನು(Birthday) ಆಚರಣೆ ಮಾಡಲು ನಿರ್ಧಾರ ಮಾಡಿರುವ ಅಭಿಮಾನಿಗಳು ಬೃಹತ್ ಕೇಕ್‌ನ್ನು ಟಾಕೀಜ್‌ ಮುಂದೆ ಕಟ್ ಮಾಡಿ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. 

Read more Photos on
click me!

Recommended Stories