ಸ್ಯಾಂಡಲ್‌ವುಡ್ ಮುದ್ದು ಮುಖದ ಚೆಲುವೆ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಸಿನಿಮಾ, ಫ್ಯಾಮಿಲಿ ಹೀಗೆ ಪ್ರತಿಯೊಂದು ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ.
ಚಿರಂಜೀವಿ ಸರ್ಜಾ ಅಗಲಿಕೆ, ರಾಯನ್ ರಾಜ್ ಸರ್ಜಾ ಎಂಟ್ರಿ ನಂತರ ಮೇಘನಾ ಕಮ್ ಬ್ಯಾಕ್ ಎಲ್ಲರೂ ಒಂದು ರೀತಿ inspiration ಆಗಿದೆ.
ರಾಯನ್‌ಗೋಸ್ಕರ ಕಮ್ ಬ್ಯಾಕ್ ಮಾಡುತ್ತಿರುವುದು ಎಂದು ಈ ಹಿಂದೆ ಡ್ಯಾನ್ಸಿಂಗ್ ಚಾಂಪಿಯನ್‌ಶಿಪ್ ಸಂದರ್ಶನದಲ್ಲಿ ಮಾತನಾಡಿದ್ದರು. ತಾಯಿಯಾಗಿ ಕೆಲಸ ಮತ್ತು ಮನೆ ಎರಡನ್ನೂ ಸಮವಾಗಿ ನಿಭಾಯಿಸುತ್ತಿರುವುದಕ್ಕೆ ನೀವು ಗ್ರೇಟ್ ಎನ್ನುತ್ತಾರೆ ಅಭಿಮಾನಿಗಳು.
ರಿಯಾಲಿಟಿ ಶೋನಲ್ಲಿ ಮೇಘನಾ ರಾಜ್ ಪ್ರತಿವಾರ ಧರಿಸುವ ಉಡುಪುಗಳು ಅದ್ಭುತವಾಗಿರುತ್ತದೆ. ಒಮ್ಮೆ ನೋಡಿದರೆ ವಾವ್ ನಮಗೂ ಇದೇ ರೀತಿ ಡ್ರೆಸ್ ಬೇಕು ಅನಿಸುತ್ತದೆ.
ಶೂಟಿಂಗ್ ಹೊರತು ಪಡಿಸಿ ನೋಡಿದರೂ, ಹೊರಗಡೆ ಕಾಣಿಸಿಕೊಂಡಾಗ ಅಥವಾ ಸಿನಿಮಾದಲ್ಲಿ ಮೇಘನಾ ರಾಜ್ ಮನೆ ಮಗಳಂತೆ ರೆಡಿಯಾಗುತ್ತಾರೆ. ತುಂಬಾ ಸಿಂಪಲ್ ಮತ್ತು ಹೋಮ್ಲಿ ಹುಡುಗಿಯಾಗಿರುತ್ತಾರೆ.
ಮೇಘನಾ ರಾಜ್ ರಿಯಾಲಿಟಿ ಶೋಗೆ ಧರಿಸುವ ಡ್ರೆಸ್‌ಗಳನ್ನು ತಾಯಿ ಪ್ರೇಮಿಳಾ ಒಮ್ಮೆ ಚೆಕ್ ಮಾಡುತ್ತಾರಂತೆ. ಈ ವಿಚಾರದಲ್ಲಿ ಅವರು ತುಂಬಾನೇ ಪರ್ಟಿಕ್ಯೂಲರ್.