ಪ್ರಿಯಾಂಕಾ ಉಪೇಂದ್ರ ಪುತ್ರಿಯ ಹುಟ್ಟುಹಬ್ಬ ಬಲು ಜೋರು… ಐಶ್ವರ್ಯ ವಯಸ್ಸೆಷ್ಟು?

Published : Apr 19, 2026, 10:51 PM IST

ಚಂದನವನದ ಸ್ಟಾರ್ ಜೋಡಿಗಳಾದ ಪ್ರಿಯಾಂಕಾ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ದಂಪತಿಗಳ ಪುತ್ರಿ ಐಶ್ವರ್ಯ ಇತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಮನೆ ಮಂದಿ ಅದ್ದೂರಿಯಾಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. 

PREV
15
ಉಪೇಂದ್ರ ಪುತ್ರಿ

ಚಂದನವನದ ಸ್ಟಾರ್ ಜೋಡಿಗಳಾದ ಪ್ರಿಯಾಂಕಾ ಮತ್ತು ಉಪೇಂದ್ರ ದಂಪತಿಗಳ ಪುತ್ರಿ ಐಶ್ವರ್ಯ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸ್ಟಾರ್ ಜೋಡಿ ಪುತ್ರಿಯ ಹುಟ್ಟು ಹಬ್ಬ ಅಂದ್ರೆ ಸುಮ್ನೇನಾ, ಬಲು ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೇಶನ್ ನಡೆದಿದೆ. ಪ್ರಿಯಾಂಕ ಫೋಟೊಗಳನ್ನು ಶೇರ್ ಮಾಡಿ ಸಂಭ್ರಮಿಸಿದ್ದಾರೆ.

25
ಪುತ್ರಿಗೆ ಪ್ರಿಯಾಂಕಾ ಮುದ್ದಾದ ವಿಶ್

ಮಗಳ ಹುಟ್ಟುಹಬ್ಬದ ಫೋಟೊಗಳನ್ನು ಶೇರ್ ಮಾಡಿರುವ ಪ್ರಿಯಾಂಕಾ, ಹುಟ್ಟುಹಬ್ಬದ ಶುಭಾಶಯಗಳು ನನ್ನ ಮಗು, ಬಲಶಾಲಿಯಾಗಿ ಮತ್ತು ದಯೆಯಿಂದ ಇರು.. ನಿನ್ನ ಹೃದಯದಿಂದ ಪ್ರೀತಿಸು ಮತ್ತು ಬ್ರೈಟ್ ಆಗಿ ಶೈನ್ ಆಗುತ್ತಿರು. ನಿನ್ನನ್ನು ತುಂಬಾನೆ ಪ್ರೀತಿಸುತ್ತೇನೆ ಎಂದು ನಟಿ ಮಗಳಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.

35
ಐಶ್ವರ್ಯ ವಯಸ್ಸೆಷ್ಟು?

ಕುಟುಂಬದ ಜೊತೆ ಅದ್ದೂರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಐಶ್ವರ್ಯ ವಯಸ್ಸು 21. ಕಾಲೇಜು ಓದುತ್ತಿರುವ ಐಶ್ವರ್ಯ, ಸಿನಿಮಾಗೆ ಬರುವ ಯಾವುದೇ ಯೋಚನೆ ಮಾಡಿಲ್ಲ, ಸದ್ಯಕ್ಕಂತೂ ಮಿಡಿಯಾದಿಂದ ದೂರ ಉಳಿದಿರುವ ಐಶ್ವರ್ಯ, ಲೈಮ್ ಲೈಟಲ್ಲಿ ಕಾಣಿಸಿಕೊಳ್ಳುವುದೇ ತುಂಬಾನೆ ಕಡಿಮೆ.

45
ಗ್ರ್ಯಾಂಡ್ ಪಾರ್ಟಿ

ಮಗಳು 21ನೇ ವಯಸ್ಸಿಗೆ ಕಾಲಿಟ್ಟ ಹಿನ್ನೆಲೆಯಲ್ಲಿ ಉಪೇಂದ್ರ ಮಗಳಿಗಾಗಿ ಸ್ಪೆಷಲ್ ಪಾರ್ಟಿ ಅರೇಂಜ್ ಮಾಡಿದ್ದಾರೆ. ಎಲ್ಲರೂ ಬ್ಲ್ಯಾಕ್ ಥೀಮ್ ಡ್ರೆಸ್ಸಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಡಾರ್ಕ್ ಮತ್ತು ರೆಡ್ ಥೀಮ್ ಡೆಕೊರೇಶನ್ ನಿಂದಾಗಿ, ಸಖತ್ ಗ್ರ್ಯಾಂಡ್ ಆಗಿ ಕಾಣಿಸಿಕೊಂಡಿದೆ. ಇನ್ನು ಐಶ್ವರ್ಯ ಕಪ್ಪು ಬಣ್ಣದ ಶಾರ್ಟ್ ಗೌನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.

55
ಸೆಲೆಬ್ರಿಟಿಗಳಿಂದ ಬರ್ತ್ ಡೇ ವಿಶಸ್

ಐಶ್ವರ್ಯ ಉಪೇಂದ್ರ ಹುಟ್ಟುಹಬ್ಬಕ್ಕೆ ನಟಿ ಮಾನ್ಯಾ ನಾಯ್ಡು ಶುಭ ಕೋರಿ Happy birthday Aishwarya! God protect you & bless you always dear ಎಂದಿದ್ದಾರೆ. ಜೊತೆಗೆ ಇನ್ನಿತರ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಸಹ ಪ್ರಿಯಾಂಕಾ-ಉಪೇಂದ್ರ ಪುತ್ರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಯಾವಾಗಲೂ ಖುಷಿಯಾಗಿರುವಂತೆ ಆಶೀರ್ದಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories