ಯಶ್‌ TO ದೀಪಿಕಾ ಪಡುಕೋಣೆ; 2 ವರ್ಷದೊಳಗೆ 'ಬ್ಯಾಕ್ ಟು ಬ್ಯಾಕ್' ಮಗು; ಸೆಲೆಬ್ರಿಟಿಗಳ ಅವಸರದ ಹಿಂದಿದೆ ಬಲವಾದ ಕಾರಣ

Published : Apr 19, 2026, 06:16 PM IST

Why celebrities have babies close together: ನಟ ಯಶ್‌ರಿಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ಸೆಲೆಬ್ರಿಟಿಗಳು ಮೊದಲ ಮಗು ಹುಟ್ಟಿದ ಎರಡು ವರ್ಷದೊಳಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ. ಕೆಲವರಿಗೆ ಇದೆಲ್ಲ ಟ್ರೆಂಡ್‌ ಎನಿಸಬಹುದು. ಇದರ ಹಿಂದೆ ಬೇರೆ ಕಾರಣ ಇವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

PREV
15
ಯಾರು? ಯಾರು?

ಎರಡನೇ ಮಗು ಬೇಕು ಎನ್ನುವ ನಿರೀಕ್ಷೆಯಲ್ಲಿ ಭಾವನಾತ್ಮಕ ಕಾರಣಗಳಿಗಿಂತ ಹೆಚ್ಚಾಗಿ ವೃತ್ತಿಜೀವನ, ಸಮಯದ ನಿರ್ವಹಣೆಯ ಲೆಕ್ಕಾಚಾರ ಕೂಡ ಇರುತ್ತವೆ. ನಟ ಯಶ್‌ ಹಾಗೂ ರಾಧಿಕಾ ಮಕ್ಕಳು, ಹರ್ಷಿಕಾ ಪೂಣಚ್ಛ-ಭುವನ್‌ ಪೊನ್ನಣ್ಣ, ಈಗ ದೀಪಿಕಾ ಪಡುಕೋಣೆ-ರಣವೀರ್‌ ಸಿಂಗ್‌ ಕೂಡ ಮೊದಲ ಮಗು ಆಗಿ ಒಂದು ಅಥವಾ ಎರಡು ವರ್ಷದೊಳಗಡೆ ಇನ್ನೊಂದು ಮಗುವನ್ನು ನಿರೀಕ್ಷೆ ಮಾಡಿದ್ದಾರೆ.

25
ವಯಸ್ಸಿನ ಅಂತರ

ಮನೆಯಲ್ಲಿ ಒಂದೇ ಮಗು ಇದ್ದರೆ ಆ ಮಗುವಿಗೆ ಏಕಾಂಗಿತನ ಬರುವುದು. ಎರಡು ಮಕ್ಕಳ ನಡುವಿನ ವಯಸ್ಸಿನ ಅಂತರ ಕಡಿಮೆ ಇದ್ದಾಗ, ಚೆಂದದ ಒಡನಾಟದಿಂದ ಒಟ್ಟಿಗೆ ಬೆಳೆಯುತ್ತಾರೆ. ಆಟಿಕೆಗಳು, ಶಾಲೆ, ಆಸಕ್ತಿಗಳ ವಿಚಾರವಾಗಿ ಆ ಮಕ್ಕಳ ನಡುವೆ ಉತ್ತಮ ಸ್ನೇಹ ಬೆಳೆಯುತ್ತದೆ ಎನ್ನಲಾಗಿದೆ.

35
ಸೆಲೆಬ್ರಿಟಿ ಜೀವನ

ಸೆಲೆಬ್ರಿಟಿಗಳಿಗೆ ವೃತ್ತಿಜೀವನ ಕೂಡ ಮುಖ್ಯ. ಗ್ಲಾಮರ್ ಪ್ರಪಂಚದಲ್ಲಿ ಪ್ರತಿ ವರ್ಷ ಕೂಡ ಮುಖ್ಯ. ಒಂದೇ ಬಾರಿಗೆ ಮಕ್ಕಳ ಜವಾಬ್ದಾರಿ ಮುಗಿದರೆ, ಆಮೇಲೆ ಸಿನಿಮಾದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಕೂಡ ಯೋಚಿಸ್ತಾರೆ. ಆಮೇಲೆ ಪದೇ ಪದೇ ಬ್ರೇಕ್ ತೆಗೆದುಕೊಳ್ಳೋದಿರಲ್ಲ.

45
ಫಿಟ್‌ನೆಸ್ ಕಾಪಾಡೋದು ಸುಲಭ ಇಲ್ಲ

ತಾಯಿಯಾದಮೇಲೆ ದೇಹದ ಶಾರೀರಿಕ ವಿಷಯ ಬದಲಾಗುವುದು. ಆಮೇಲೆ ಫಿಟ್‌ನೆಸ್‌ಗೆ ಗಮನ ಕೊಡಬೇಕು. ಇದಕ್ಕೆ ಸಮಯ ಕೊಡಬೇಕು. ಮಗು ಆದ್ಮೇಲೆ ತೂಕ ಇಳಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ. ಅದನ್ನು ಒಂದೇ ಹಂತದಲ್ಲಿ ನಿಭಾಯಿಸಿದರೆ ಒಳ್ಳೆಯದು ಎಂದುಕೊಳ್ತಾರೆ.

55
ಮದುವೆ ಆಗೋದು ಲೇಟ್‌ ಆಗಿರುತ್ತೆ!

ಇನ್ನು ನಟಿಯರು ಕೂಡ ಲೇಟ್‌ ಆಗಿ ಮದುವೆ ಆಗ್ತಾರೆ. ಇನ್ನೂ ತಡವಾಗಿ ಮಗು ಮಾಡಿಕೊಳ್ಳೋದು ಇನ್ನೊಂದು ರೀತಿ ಸಮಸ್ಯೆ ಉಂಟು ಮಾಡಬಹುದು. ಹೀಗಾಗಿ ಆದಷ್ಟು ಬೇಗ ಮಗು ಮಾಡಿಕೊಳ್ತಾರೆ. ಮೊದಲ ಹೆರಿಗೆಯಾದ್ಮೇಲೆ ತಾಯಿಯ ಶರೀರವು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲು ಕನಿಷ್ಠ ಒಂದೂವರೆ ವರ್ಷವಾದರೂ ಬೇಕು. ಆದರೆ ಸೂಕ್ತ ವೈದ್ಯಕೀಯ ಸಲಹೆ, ಪೌಷ್ಟಿಕ ಆಹಾರ ತಗೊಂಡು ಸೆಲೆಬ್ರಿಟಿಗಳು ಎರಡನೇ ಮಗುವಿನ ನಿರೀಕ್ಷೆ ಮಾಡುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories