ಪ್ರಿಯಾಂಕ - ಉಪೇಂದ್ರ ಮುದ್ದಿನ ಮಗಳ ಹುಟ್ಟುಹಬ್ಬ ಸೆಲೆಬ್ರೇಶನ್… ಐಶ್ವರ್ಯ ವಯಸ್ಸೆಷ್ಟು?

Published : Apr 21, 2025, 10:31 AM ISTUpdated : Apr 21, 2025, 11:00 AM IST

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಅವರ ಮುದ್ದಿನ ಮಗಳು ಐಶ್ವರ್ಯ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ತಾರಾ ಜೋಡಿಗಳು ಸಿಂಪಲ್ ಆಗಿ ಆಚರಿಸಿದ್ದಾರೆ.   

PREV
16
ಪ್ರಿಯಾಂಕ - ಉಪೇಂದ್ರ ಮುದ್ದಿನ ಮಗಳ ಹುಟ್ಟುಹಬ್ಬ ಸೆಲೆಬ್ರೇಶನ್… ಐಶ್ವರ್ಯ ವಯಸ್ಸೆಷ್ಟು?

ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾ ಜೋಡಿಗಳಲ್ಲಿ ಒಬ್ಬರಾದ ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಪ್ರಿಯಾಂಕಾ ಉಪೇಂದ್ರ ತಮ್ಮ ಮುದ್ದಿನ ಮಗಳು ಐಶ್ವರ್ಯ ಉಪೇಂದ್ರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಫೊಟೊಗಳನ್ನು ಹಂಚಿಕೊಂಡಿದ್ದಾರೆ. 

26

ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra), ತಮ್ಮ ಮಗಳ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಸಿಂಪಲ್ ಆಗಿ ಸೆಲೆಬ್ರೇಟ್ ಮಾಡಿದ್ದು, ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಸೆಲೆಬ್ರೇಶನ್ ಫೋಟೊಗಳನ್ನು ಹಾಕಿ ಹುಟ್ಟುಹಬ್ಬದ ಶುಭಾಶಯಗಳು ಮಗು, ಆಶೀರ್ವಾದ ಯಾವಾಗಲೂ ನಿನ್ನ ಮೇಲಿರಲಿ ಮತ್ತು ಯಾವಾಗಲೂ ನಿನ್ನನ್ನು ನೀ ನಂಬು.. ನಾನು ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 
 

36

ಪ್ರಿಯಾಂಕ ಶೇರ್ ಮಾಡಿರುವ ಫೋಟೊಗಳಲ್ಲಿ ಪ್ರಿಯಾಂಕಾ ಮತ್ತು ಉಪೇಂದ್ರ ಮಗಳ ಕೆನ್ನೆಗೆ ಪ್ರೀತಿಯಿಂದ ಮುತ್ತಿಡುವ ಫೋಟೊಗಳಿವೆ. ಜೊತೆಗೆ ಐಶ್ವರ್ಯ ಒಬ್ಬಳೆ ನಿಂತಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಫೋಟೊ ವೈರಲ್ ಆಗಿದ್ದು, ಅಭಿಮಾನಿಗಳು ಸಹ ಐಶ್ವರ್ಯಾಗೆ ಹುಟ್ಟುಹಬ್ಬದ ಶುಭಾಶಯ (birthday wishes)ತಿಳಿಸಿದ್ದಾರೆ. 
 

46

ಇಬ್ಬರು ಸ್ಟಾರ್ ನಟ -ನಟಿಯರ ಮಗಳಾಗಿರುವ ಐಶ್ವರ್ಯಾ ಉಪೇಂದ್ರ (Aishwarya Upendra) ಸಿನಿಮಾಗೆ ಯಾವಾಗ ಎಂಟ್ರಿ ಕೊಡ್ತಾರೆ ಎನ್ನುವ ಪ್ರಶ್ನೆ ಹೆಚ್ಚಾಗಿ ಕೇಳಿ ಬರುತ್ತಿದೆ. ಆದರೆ ಇದಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಆದರೆ ಐಶ್ವರ್ಯ ಈಗಾಗಲೇ ತಮ್ಮ ಅಮ್ಮ ಪ್ರಿಯಾಂಕಾ ಜೊತೆ ‘ದೇವಕಿ’ ಎನ್ನುವ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸಿದ್ದರು. ಆದಾದ ನಂತ್ರ ಯಾವುದೇ ಸಿನಿಮಾಗಳನ್ನು ಸಹ ಇವರು ಮಾಡಿಲ್ಲ. 
 

56

ಇನ್ನು ಎಪ್ರಿಲ್ 20 ರಂದು ಹುಟ್ಟುಹಬ್ಬ ಆಚರಿಸಿಕೊಂಡಿರುವ ಐಶ್ವರ್ಯ ವಯಸ್ಸು ಎಷ್ಟು ಎನ್ನುವ ಕುರಿತು ಕೂಡ ಚರ್ಚೆ ನಡೆಯುತ್ತಿದೆ. ಅಂದ ಹಾಗೇ ಐಶ್ವರ್ಯ ಜನಿಸಿರೋದು 2008 ರಲ್ಲಿ ಹಾಗಾಗಿ ಐಶ್ವರ್ಯ ವಯಸ್ಸು ಈಗ 17.

66

ಐಶ್ವರ್ಯ ಉಪೇಂದ್ರ ಸದ್ಯ ಕಾಲೇಜು ಓದುತ್ತಿದ್ದಾರೆ. ಇವರು ಮೀಡಿಯಾದಿಂದ ದೂರ ಉಳಿದಿದ್ದಾರೆ. ತಮ್ಮ ಜೀವನವನ್ನ ಪ್ರೈವೆಟ್ ಆಗಿಟ್ಟುಕೊಂಡಿದ್ದಾರೆ ಐಶ್ವರ್ಯ. ಆದರೆ ಇವರ ಸಹೋದರ ಆಯುಷ್ ಹೆಚ್ಚಾಗಿ ಮೀಡಿಯಾ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ. ಅಪ್ಪನಂತೆ ಮಕ್ಕಳು ಕೂಡ ತುಂಬಾ ವಿನಮ್ರವಾಗಿದ್ದಾರೆ.  ಅಪ್ಪನ ಹೆಸರು ಹೇಳಿಕೊಳ್ಳದೇ, ತಮ್ಮ ಶ್ರಮದಿಂದ ಸಿನಿಮಾದಲ್ಲಿ ಹೆಸರು ಮಾಡುವ ಆಸೆ ಆಯುಷ್ ನದ್ದು.

Read more Photos on
click me!

Recommended Stories