ಮೆಜೆಸ್ಟಿಕ್‌ನಲ್ಲಿ ಬರ್ತಡೇ ಆಚರಿಸಿಕೊಂಡ ಸಂಹಿತಾ: ಫ್ಯಾನ್ಸ್ ಮಧ್ಯೆ ಮಾಡಿದ್ದೇನು?

Published : Apr 19, 2025, 06:23 PM ISTUpdated : Apr 19, 2025, 06:30 PM IST

‘ಮೆಜೆಸ್ಟಿಕ್‌ 2’ ಚಿತ್ರದ ನಾಯಕಿ ಸಂಹಿತಾ ವಿನ್ಯಾ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಇವರು ತೆಲುಗು, ತಮಿಳು ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ.

PREV
17
ಮೆಜೆಸ್ಟಿಕ್‌ನಲ್ಲಿ ಬರ್ತಡೇ ಆಚರಿಸಿಕೊಂಡ ಸಂಹಿತಾ: ಫ್ಯಾನ್ಸ್ ಮಧ್ಯೆ ಮಾಡಿದ್ದೇನು?

ನಟಿಯಾಗಿ ಮತ್ತು ಮಾಡೆಲ್‌ ಆಗಿಯೂ ಗುರುತಿಸಿಕೊಂಡಿರುವ ‘ಮೆಜೆಸ್ಟಿಕ್‌ 2’ ಚಿತ್ರದ ನಾಯಕಿ ಸಂಹಿತಾ ವಿನ್ಯಾ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ.

27

‘ಹಾಲು ತುಪ್ಪ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿರುವ ಸಂಹಿತಾ ವಿನ್ಯಾ ಅವರು ‘ಸೀತಮ್ಮ ಬಂದ್ಲು ಸಿರಿಮಲ್ಲಿಗೆ ತೊಟ್ಟು’, ‘ಅಮೃತ ಘಳಿಗೆ’ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. 

37

ತೆಲುಗು, ತಮಿಳು ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಮಾಡೆಲಿಂಗ್‌ನಲ್ಲಿಯೂ ಗುರುತಿಸಿಕೊಂಡಿದ್ದು, ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿದ್ದಾರೆ. ಫಾರೆವರ್‌ ನವೀನ್ ಇವರ ಫ್ಯಾಷನ್‌ ಡಿಸೈನರ್‌ ಆಗಿದ್ದಾರೆ.

47

ಪರಭಾಷಾ ನಟಿಯರಿಗೆ ಅವಕಾಶ ಕೊಡ್ತಾರೆ: ಕನ್ನಡದಲ್ಲಿ ಪರಭಾಷೆ ನಟಿಯರಿಗೆ ಸಿಗುವ ಅವಕಾಶ, ನಮಗಿಲ್ಲ. ಅದ್ಯಾಕೋ ಏನೋ ಕಾರಣ ನಮಗೂ ಗೊತ್ತಿಲ್ಲ...! ಇದು ಮಾಡೆಲ್‌ ಕಮ್‌ ನಟಿ ಸಂಹಿತಾ ವಿನ್ಯಾ ಅವರ ಬೇಸರದ ಮಾತು.

57

ಹೊಸಬರ ಪೈಕಿ, ಸಂಹಿತಾ ಕನ್ನಡದ ಬ್ಯುಸಿ ನಟಿ. ಆದರೂ, ಒಳ್ಳೆಯ ಅವಕಾಶಗಳು ಹೊಸಬರಿಗೆ ಇಲ್ಲಿ ಸಿಗುವುದು ಕಮ್ಮಿ ಎನ್ನುವ ನೋವು ಸಂಹಿತಾ ಅವರದ್ದು. ಮಾಡೆಲಿಂಗ್‌ ಲೋಕದಿಂದ ಸಂಹಿತಾ ನಟಿಯಾಗಿ ಬೆಳ್ಳಿತೆರೆಗೆ ಎಂಟ್ರಿಕೊಟ್ಟಿದ್ದರು. 
 

67

ನಾನು ಪಕ್ಕಾ ಕನ್ನಡದ ಹುಡುಗಿ. ಹಾಸನ ಜಿಲ್ಲೆಯಿಂದ ಬಂದವಳು. ಮಾಡೆಲಿಂಗ್‌ ಕ್ಷೇತ್ರದಲ್ಲಿ ನಾನು ಎಷ್ಟೇ ಹೆಸರು ಮಾಡಿದ್ದರೂ, ಮೊದಲು ನಟಿಯಾಗಿದ್ದು ಇಲ್ಲಿಯೇ. 
 

77

ಪರಭಾಷೆಗಳಲ್ಲಿ ಎಷ್ಟೇ ಅವಕಾಶಗಳಿದ್ದರೂ ಕನ್ನಡದಲ್ಲೇ ಗುರುತಿಸಿಕೊಳ್ಳಬೇಕೆನ್ನುವ ಕಾರಣದಿಂದಲೇ ತಮಿಳು ಸಿನಿಮಾ ಅವಕಾಶ ಬೇಡ ಎಂದಿದ್ದೇನೆ ಅಂತ ಹೇಳಿಕೊಂಡರು. ಸುಮಾರು 30ಕ್ಕೂ ಹೆಚ್ಚು ಫ್ಯಾಷನ್‌ ಶೋ ಜತೆಗೆ ವಿವಿಧ ಕಂಪನಿಗಳ ಪ್ರಾಡೆಕ್ಟ್ಸ್‌ಗೆ ಬ್ರಾಂಡ್‌ ಅಂಬಾಸಿಡರ್‌ ಆಗಿಯೂ ಕೆಲಸ ಮಾಡಿದ್ದಾರೆ.
 

Read more Photos on
click me!

Recommended Stories