ನಿನ್ನ ಪರಿಸ್ಥಿತಿ ಹೇಗೇ ಇದ್ರೂ ನಂಗೆ ಸಹಾಯ ಮಾಡ್ತಿದ್ಯಾ ಅಮ್ಮ, ನಾನು ಪುಣ್ಯ ಮಾಡಿದ್ದೆ; ಪವಿತ್ರಾ ಗೌಡ ಪುತ್ರಿ ಪೋಸ್ಟ್ ವೈರಲ್!

First Published | Sep 4, 2024, 9:24 AM IST

ತಾಯಿಯನ್ನು ನೆನೆದು ಕಣ್ಣೀರಿಟ್ಟ ಖುಷಿ...ಸದಾ ಪಾಸಿಟಿವ್ ಪೋಸ್ಟ್ ಹಾಕುತ್ತಿರುವ ಪುಟ್ಟ ಹುಡುಗಿ......

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟಿ ಪವಿತ್ರಾ ಗೌಡ, ನಟ ದರ್ಶನ್ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. 

ಹೀಗಾಗಿ ವಾರಕ್ಕೊಮ್ಮೆ ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ಹಿಡಿದುಕೊಂಡು ಮಾತನಾಡಿಸಲು ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Tap to resize

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪವಿತ್ರಾ ಗೌಡ ಪುತ್ರಿ ಇದೀಗ ತಾಯಿಯನ್ನು ನೆನೆದು ಪೋಸ್ಟ್ ಹಾಕಿದ್ದಾರೆ. ಇಬ್ಬರು ಫೋಟೋದಲ್ಲಿ ತಬ್ಬಿಕೊಂಡಿದ್ದಾರೆ.

'ಪರಿಸ್ಥಿತಿ ಏನೇ ಇರಲಿ ನನ್ನ ಸಹಾಯಕ್ಕೆ ಬಂದೇ ಬರುತ್ತಾರೆ ಎಂದು ನಾನು ಕಣ್ಣು ಮುಚ್ಚಿಕೊಂಡು ನಂಬಿದ್ದರೂ ಅದು ನೀನೇ ಅಮ್ಮ' ಎಂದು ಖುಷಿ ಬರೆದುಕೊಂಡಿದ್ದಾಳೆ.

'ನನಗೆ ಗೊತ್ತು ದಿನದಲ್ಲಿ ನನಗೆ ಏನೇ ಬೇಕಿದ್ದರೂ ಆಕೆ ಇದ್ದಾಳೆ ಎಂದು ಹೀಗಾಗಿನೇ ಆಕೆಯನ್ನು ಬೆಸ್ಟ್‌ ಅಮ್ಮ ಎಂದು ಕರೆಯುವುದು ಅಲ್ಲದೆ ಆಕೆಯನ್ನು ತಾಯಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ' ಎಂದು ಖುಷಿ ಹೇಳಿದ್ದಾಳೆ. 

ಪವಿತ್ರಾ ಗೌಡ ಸ್ಥಾಪನೆ ಮಾಡಿದ ರೆಡ್‌ ಕಾರ್ಪೆಟ್‌ 777 ಡಿಸೈನರ್ ಸ್ಟುಡಿಯೋವನ್ನು ಖುಷಿ ನಡೆಸಿಕೊಂಡು ಹೋಗುತ್ತಿದ್ದಾಳೆ. ವರಮಹಾಲಕ್ಷ್ಮಿ ಹಬ್ಬ ಮುಗಿಸಿ ಈಗ ಗೌರಿ ಗಣೇಶ್ ಆಫರ್ ನಡೆಸುತ್ತಿದ್ದಾಳೆ ಖುಷಿ. 

Latest Videos

click me!