ಮಾಲಾಶ್ರೀ ಮಗಳ ಜೊತೆ ಶಿವಣ್ಣ, ವಿಜಯ್, ಉಪ್ಪಿ...! ಹೊಸ ಫಿಲಂ ಮಾಡ್ತಿದ್ದಾರ?

First Published | Sep 2, 2024, 5:52 PM IST

ಸ್ಯಾಂಡಲ್ ವುಡ್ ನಟರಾದ ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ದುನಿಯಾ ವಿಜಯ್, ಖ್ಯಾತ ನಟಿ ಮಾಲಾಶ್ರೀ ಹಾಗೂ ಆರಾಧನಾ ಜೊತೆ ಕಾಣಿಸಿಕೊಂಡಿದ್ದು, ಹೊಸ ಸಿನಿಮಾಕೆ ರೆಡಿಯಾಗ್ತಿದ್ದಾರೆ ಕೇಳ್ತಿದ್ದಾರೆ ಫ್ಯಾನ್ಸ್. 
 

ಕಳೆದ ಕೆಲವು ದಿನಗಳಿಂದ ಕಿರುತೆರೆಯಲ್ಲಿ ಓಂ ಸಿನಿಮಾದ ಬಗ್ಗೆ ಭಾರಿ ಸುದ್ದಿ ಕೇಳಿ ಬರುತ್ತಲೇ ಇತ್ತು. ರಿಯಾಲಿಟಿ ಶೋ ಒಂದರಲ್ಲಿ ಓಂ ಸಿನಿಮಾ ರಿಕ್ರಿಯೇಟ್ ಮಾಡಿದ್ದು, ಈ ಸಂದರ್ಭದಲ್ಲಿ ಉಪೇಂದ್ರ ಹಾಗೂ ಶಿವರಾಜ್ ಕುಮಾರ್ (Shivaraj Kumar) ಜೋಡಿಯನ್ನು ಜನರು ಸಿಕ್ಕಾಪಟ್ಟೆ ಹೊಗಳುತ್ತಿದ್ದರು, ಈ ಜೋಡಿ ಮತ್ತೆ ಒಂದಾಗಬೇಕು ಎಂದು ಸಹ ಕೇಳಿಕೊಂಡಿದ್ದರು. 
 

ಇದೀಗ ಅಚ್ಚರಿ ಎಂಬಂತೆ ರಿಯಲ್ ಸ್ಟಾರ್ ಉಪೇಂದ್ರ (Upendra) ಹಾಗೂ ಶಿವರಾಜ್ ಕುಮಾರ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ದುನಿಯಾ ವಿಜಯ್, ನಟಿ ಮಾಲಾಶ್ರೀ ಹಾಗೂ ಪುತ್ರಿ ಆರಾಧನಾ ರಾಮ್ ಕೂಡ ಕಾಣಿಸಿಕೊಂಡಿದ್ದಾರೆ. 
 

Tap to resize

ಎಲ್ಲಾ ತಾರೆಯರನ್ನು ಜೊತೆಯಾಗಿ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದು, ಹೊಸ ಸಿನಿಮಾ ತಯಾರಾಗ್ತಿದ್ಯಾ? ಆರಾಧನಾ (Aradhana Ram) ಈ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ತಿದ್ದಾರಾ? ಎನ್ನುವ ಪ್ರಶ್ನೆಗಳು ಕೇಳಿ ಬಂದಿತ್ತು. ಆದರೆ ಇಲ್ಲಿ ವಿಷ್ಯ ಬೇರೆನೆ ಇದೆ. ಎಲ್ಲರೂ ಹೀಗೆ ಜೊತೆಯಾಗಿ ಸೇರಿದ್ದು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ . 
 

ಹೌದು ಶಿವಣ್ಣ, ಉಪೇಂದ್ರ, ವಿಜಯ್, ಮಾಲಾಶ್ರೀ (Malashree)  ಹಾಗೂ ಆರಾಧನಾ ರಾಮ್ ಈ ಎಲ್ಲಾ ನಟ ನಟಿಯರು ಹೈದರಾಬಾದ್ ಗೆ ತೆರಳಿದ್ದು, ಈ ಸಮಯದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ತಾರೆಯರು ಜೊತೆಯಾಗಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಒಟ್ಟಿಗೆ ನಿಂತು ಫೋಟಿ ತೆಗೆಸಿಕೊಂಡಿದ್ದು, ಈ ಫೋಟೊಗಳನ್ನ ಮಾಲಾಶ್ರೀ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಅಷ್ಟಕ್ಕೂ ಈ ತಾರೆಯರೆಲ್ಲಾ ಜೊತೆಯಾಗಿ ಹೋಗಿದ್ದು ಹೈದರಾಬಾದ್ ಗೆ . ಹೌದು ಹೈದರಾಬಾದಿನಲ್ಲಿ ತೆಲುಗಿನ ಸ್ಟಾರ್ ನಟ, ನಿರ್ಮಾಪಕ ಹಾಗೂ ರಾಜಕಾರಣಿಯಾಗಿರುವ ನಂದಮೂರಿ ಬಾಲಕೃಷ್ಣ(Nandamuri Balakrishna) ಅವರ 50ನೇ ವರ್ಷದ ಸಿನಿಮಾ ಕರಿಯರ್ ಸೆಲೆಬ್ರೆಶನ್ ನಲ್ಲಿ ಭಾಗಿಯಾಗಲು ತೆರಳಿದ್ದರು. 
 

ನಂದಮೂರಿ ಬಾಲಕೃಷ್ಣ ಸಿನಿಮಾ ಇಂಡಷ್ಟ್ರಿಗೆ 1974ರಲ್ಲಿ ಕಾಲಿಟ್ಟಿದ್ದು, ಈ ವರ್ಷ ಅಂದರೆ 2024ಕ್ಕೆ 50 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂಭ್ರಮವನ್ನು ಸೆಲೆಬ್ರೇಟ್ ಮಾಡೋದಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕನ್ನಡ ಸಿನಿಮಾದಿಂದ ಶಿವಣ್ಣ, ಉಪ್ಪಿ, ವಿಜಯ್ ಹಾಗೂ ಮಾಲಾಶ್ರೀ ಭಾಗಿಯಾಗಿದ್ದಾರೆ. 
 

ಕಾರ್ಯಕ್ರಮಕ್ಕೆ ಹೋಗುವ ಸಂದರ್ಭದಲ್ಲಿ ಫೋಟೊ ತೆಗೆದುಕೊಂಡಿದ್ದು, ಇದರ ಜೊತೆಗೆ ನಟ ಉಪೇಂದ್ರ ಅವರು ನಂದಮೂರಿ ಬಾಲಕೃಷ್ಣ ಅವರ ಕಾರ್ಯಕ್ರಮದ ಫೋಟೊಗಳನ್ನು ಕೂಡ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ತೆಲಗು ಚಿತ್ರರಂಗದಲ್ಲಿ 50 ವರ್ಷ ಪೂರೈಸಿ ಮುನ್ನುಗ್ಗುತ್ತಿರುವ Unstoppable ಬಾಲಕ್ರಿಷ್ಣ ರವರ ಸಮಾರಂಭದಲ್ಲಿ ಅವರಿಗೆ ಶುಭಕೋರಲು ಕನ್ನಡ ಚಿತ್ರರಂಗದಿಂದ ಭಾಗವಹಿಸಿದ ಶಿವಣ್ಣ ಮತ್ತು ವಿಜಯ್ ಜೊತೆ ನಾನು. ಎಂದು ಬರೆದು ಬಾಲಯ್ಯನಿಗೆ ಶುಭ ಕೋರಿದ್ದಾರೆ. 
 

Latest Videos

click me!